ಇಂದಿನಿಂದ 2 ದಿನ ಸೌದಿ ಅರೇಬಿಯಾ ಪ್ರವಾಸ – ಮೋದಿಗೆ ಸೌದಿ ಆಗಸದಲ್ಲಿ ಗೌರವ

Public TV
2 Min Read

ರಿಯಾಧ್: ಸೌದಿ ಅರೇಬಿಯಾದ (Saudi Arabia) ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ (Narendra Modi) ಆಗಸದಲ್ಲಿ ಯುದ್ಧ ವಿಮಾನಗಳ (Fighter Planes) ಮೂಲಕ ಸ್ವಾಗತಕೋರಲಾಗಿದೆ.

ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಬೆಳಗ್ಗೆ ಸೌದಿಗೆ ತೆರಳಿದ್ದಾರೆ. ಈ ವೇಳೆ ಸೌದಿಯ ವಾಯುಪ್ರದೇಶವನ್ನು ಪ್ರವೇಶಿಸಿದಾಗ ರಾಯಲ್ ಸೌದಿ ವಾಯುಪಡೆಯ ಎಫ್-15 ವಿಮಾನಗಳು ಅವರ ವಿಮಾನವನ್ನು ಎಸ್ಕಾರ್ಟ್‌ ಮಾಡಿವೆ. ಇದನ್ನೂ ಓದಿ: 6 ವರ್ಷದ ಬಳಿಕ ಪ್ರಧಾನಿ ಮೋದಿ ಸೌದಿ ಅರೇಬಿಯಾ ಪ್ರವಾಸ

ಸೌದಿ ಅರೇಬಿಯಾಕ್ಕೆ ತೆರಳುವ ಮುನ್ನ ಪ್ರಧಾನಿ ಮೋದಿಯವರು, ಭಾರತವು ಸೌದಿ ಅರೇಬಿಯಾದೊಂದಿಗಿನ ದೀರ್ಘ ಮತ್ತು ಐತಿಹಾಸಿಕ ಸಂಬಂಧಗಳನ್ನು ಬಹಳವಾಗಿ ಗೌರವಿಸುತ್ತದೆ. ಇತ್ತೀಚಿನ ವರ್ಷಗಳಲ್ಲಿ ಉಭಯ ದೇಶಗಳ ಸಂಬಂಧ ಬಲವಾಗಿದೆ. ರಕ್ಷಣೆ, ವ್ಯಾಪಾರ, ಹೂಡಿಕೆ, ಇಂಧನ ಕ್ಷೇತ್ರಗಳಲ್ಲಿ ಎರಡೂ ದೇಶಗಳು ಪರಸ್ಪರ ಪಾಲುದಾರಿಕೆಯನ್ನು ಅಭಿವೃದ್ಧಿಪಡಿಸಿವೆ ಎಂದು ಹೇಳಿದ್ದಾರೆ.

ಮೊದಲ ಬಾರಿಗೆ ಮೋದಿಯವರು ಸೌದಿಯ ಜೆದ್ದಾಗೆ ಭೇಟಿ ನೀಡಿದ್ದಾರೆ. 1982ರಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಜಿದ್ದಾಗೆ ಭೇಟಿ ನೀಡಿದ್ದರು. ಇನ್ನೂ 40 ವರ್ಷಗಳಲ್ಲಿ ಭಾರತೀಯ ಪ್ರಧಾನಿಯೊಬ್ಬರು ಈ ನಗರಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲಾಗಿದೆ.

ಮೋದಿ ಸೌದಿ ಭೇಟಿ ನಿರೀಕ್ಷೆಗಳೇನು?
ಸೌದಿ ಅರೇಬಿಯಾದ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಹಾಗೂ ಮೋದಿಯವರ ಸಭೆಯಲ್ಲಿ ವ್ಯಾಪಾರ, ಹೂಡಿಕೆ, ಇಂಧನ ಮತ್ತು ರಕ್ಷಣಾ ಸಹಕಾರ, ಪ್ರಾದೇಶಿಕ ಭದ್ರತಾ ಪರಿಸ್ಥಿತಿ ಮತ್ತು ಸಂಪರ್ಕ ಉಪಕ್ರಮಗಳ ಚರ್ಚೆಯಾಗುವ ಸಾಧ್ಯತೆ ಇದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ತಿಳಿಸಿದ್ದಾರೆ.

ಈ ಭೇಟಿಯ ಸಮಯದಲ್ಲಿ ಸಹಕಾರವನ್ನು ಬಲಪಡಿಸಲು ಎರಡೂ ದೇಶಗಳು ಹಲವಾರು ಒಪ್ಪಂದಗಳನ್ನು ಮಾಡಿಕೊಳ್ಳುವ ನಿರೀಕ್ಷೆಯಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು. ಇದನ್ನೂ ಓದಿ: ಹೊಸ ಪೋಪ್ ಆಯ್ಕೆ ಹೇಗೆ ಮಾಡಲಾಗುತ್ತೆ? ಹೊಗೆ ಹಾಕೋದು ಯಾಕೆ?

Share This Article