DRDO ಸ್ಟಿಕ್ಕರ್ ನೋಡಿ ಕೆರಳಿದ ಪುಂಡರು – ಕಾರು ಅಡ್ಡಗಟ್ಟಿ ವಿಂಗ್‌ ಕಮಾಂಡರ್‌ ಮೇಲೆ ಮಾರಣಾಂತಿಕ ಹಲ್ಲೆ

By
1 Min Read

ಬೆಂಗಳೂರು: ಕಾರು ಅಡ್ಡಗಟ್ಟಿ ವಿಂಗ್ ಕಮಾಂಡರ್ (Wing Commander) ಮೇಲೆ ಬೈಕ್‌ ಸವಾರರು ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಸಿವಿ ರಾಮನ್ ನಗರದಲ್ಲಿ ನಡೆದಿದೆ. ಕಾರಿನ ಮೇಲಿದ್ದ DRDO ಸ್ಟಿಕ್ಕರ್ ನೋಡಿ ಕೆರಳಿ, ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

‌ಸೋಮವಾರ ಬೆಳಗ್ಗೆ ವಿಂಗ್ ಕಮಾಂಡರ್‌ ಶಿಲಾದಿತ್ಯ ಬೋಸ್‌ ಕೋಲ್ಕತ್ತಾಗೆ ಹೋಗಲು ಏರ್‌ಪೋರ್ಟ್‌ಗೆ ತೆರಳುತ್ತಿದ್ದರು. ಅವರ ಪತ್ನಿ ಕಾರು ಚಲಾಯಿಸುತ್ತಿದ್ದರು. ಈ ವೇಳೆ ಹಿಂಬದಿಯಿಂದ ಬಂದ ಬೈಕ್ ಟಚ್ ಆಗಿದೆ. ಬಳಿಕ ಬೈಕ್ ಸವಾರರು ಕಾರನ್ನು ತಡೆದು, ವಿಂಗ್ ಕಮಾಂಡರ್‌ ಮೇಲೆ ಹಲ್ಲೆ ಮಾಡಿ, ಕಾರಿನ ಕೀ ಕಿತ್ತುಕೊಂಡಿದ್ದಾರೆ. ಸ್ಥಳೀಯರು ಘಟನೆಯನ್ನು ನೋಡುತ್ತಾ ನಿಂತಿದ್ದರು. ಯಾರು ಕೂಡ ನನ್ನ ನೆರವಿಗೆ ಬರಲಿಲ್ಲ ಎಂದು ವಿಂಗ್ ಕಮಾಂಡರ್ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನನ್ನ ಶತ್ರುಗಳು ಅಂದ್ರೆ ಅದು ನನ್ನ ಚಿಕ್ಕಮ್ಮ, ರಾಕೇಶ್ ಮಲ್ಲಿ – ಪೊಲೀಸರ ಮುಂದೆ ರಿಕ್ಕಿ ರೈ ಸ್ಫೋಟಕ ಹೇಳಿಕೆ

ವಿಂಗ್ ಕಮಾಂಡರ್‌ ಮುಖದಲ್ಲಿ ರಕ್ತ ಸುರಿಯುತ್ತಿದ್ದರೂ ಲೆಕ್ಕಿಸದೇ ಹಲ್ಲೆ ಮಾಡಿದ್ದಾರೆ. ಯುವಕರು ಹಲ್ಲೆ ಮಾಡುವುದನ್ನು ಅವರು ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಈ ಸಂಬಂಧ ಬೈಯಪ್ಪನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಇದನ್ನೂ ಓದಿ: ಕ್ವಾರಿ ಹೊಂಡದ ನೀರಿನಲ್ಲಿ ಮುಳುಗಿ ಬಿಹಾರ ಮೂಲದ ಕಾರ್ಮಿಕ ಸಾವು

Share This Article