ಮುಂದಿನ 3 ಗಂಟೆಗಳಲ್ಲಿ ರಾಜ್ಯದ ಹಲವೆಡೆ ಮಳೆ ಸಾಧ್ಯತೆ

Public TV
1 Min Read

ಬೆಂಗಳೂರು: ಮುಂದಿನ 3 ಗಂಟೆಗಳಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.ಇದನ್ನೂ ಓದಿ: ಪ್ರಣಿತಾ ಸುಭಾಷ್ ಮಗನ ಅದ್ಧೂರಿ ನಾಮಕರಣ- ರಮ್ಯಾ ಭಾಗಿ

ಬೆಂಗಳೂರು ನಗರ ಸೇರಿದಂತೆ ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಚಿಕ್ಕಬಳ್ಳಾಪುರ, ದಾವಣಗೆರೆ, ರಾಮನಗರ, ಚಿತ್ರದುರ್ಗ, ತುಮಕೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ.

ಈಗಾಗಲೇ ಕೋರಮಂಗಲ, ಆಡುಗೋಡಿ, ಎಲೆಕ್ಟ್ರಾನ್ ಸಿಟಿ ಸುತ್ತಮುತ್ತ ಮಳೆಯಾಗುತ್ತಿದ್ದು, ಬಿಸಿಲ ಬೇಗೆಗೆ ವರುಣ ತಂಪೆರೆದಿದ್ದಾನೆ. ಮಳೆಯಿಂದಾಗಿ ವಾಹನ ಸವಾರರು ಪರದಾಡುತ್ತಿದ್ದಾರೆ.ಇದನ್ನೂ ಓದಿ: `ಕೈ’ ಸರ್ಕಾರ ಬಂದ್ಮೇಲೆ ಜನಿವಾರ, ಶಿವದಾರ, ಉಡುದಾರಕ್ಕೂ ಕತ್ತರಿ ಬೀಳ್ತಿದೆ, ಹಿಜಬ್‌ಗೆ ಬಹುಪರಾಕ್ ನಡೀತಿದೆ: ಆರ್.ಅಶೋಕ್

Share This Article