Explainer| ಏನಿದು ಪಬ್ಲಿಕ್‌ ಟಿವಿ ವಿದ್ಯಾಪೀಠ? ವಿದ್ಯಾರ್ಥಿಗಳಿಗೆ ಏನು ಲಾಭ? ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

Public TV
4 Min Read

ಇಂದಿನ ಕಲಿಕೆ, ನಾಳಿನ ದಾರಿ ದೀಪ. ಹೌದು, ಇದು ಪ್ರತಿಯೊಬ್ಬ ವಿದ್ಯಾರ್ಥಿಗೂ ಅನ್ವಯವಾಗುವ ಸಾಲುಗಳು. ರಾಜ್ಯದ ಅತಿದೊಡ್ಡ ಶೈಕ್ಷಣಿಕ ಮೇಳಕ್ಕೆ ಬೆಂಗಳೂರಿನ (Bengaluru) ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ವೇದಿಕೆ ಸಿದ್ಧವಾಗಿದೆ. ವಿದ್ಯಾರ್ಥಿಗಳು ತಮ್ಮ ಉನ್ನತ ವಿದ್ಯಾಭ್ಯಾಸದ ಬಗ್ಗೆ ಇರುವ ಗೊಂದಲಗಳಗೆ ಈ ವೇದಿಕೆ ಉತ್ತರ ನೀಡಲಿದೆ.

ಏನಿದು ವಿದ್ಯಾಪೀಠ?
ದ್ವಿತೀಯ ಪಿಯುಸಿ (Second PUC), ಪದವಿ (Degree) ಮುಗಿದ ನಂತರ ಮಕ್ಕಳನ್ನು ಎಲ್ಲಿ ಯಾವ ಕಾಲೇಜಿಗೆ ಸೇರಿಸಬೇಕು ಎಂಬ ಪ್ರಶ್ನೆ ಪೋಷಕರಲ್ಲಿ ಮೂಡುವುದು ಸಹಜ. ಯಾಕೆಂದರೆ ಕರ್ನಾಟಕದಲ್ಲಿ ಸಾಕಷ್ಟು ಕಾಲೇಜುಗಳಿವೆ.‌ ಈ ಕಾಲೇಜುಗಳಲ್ಲಿ ನಮಗೆ ಬೇಕಾದ ಕೋರ್ಸ್‌ ಸಿಗುತ್ತಾ ಇಲ್ವೋ ಅನುಮಾನ ಇರುತ್ತದೆ. ಈ ಕಾರಣಕ್ಕೆ ರಾಜ್ಯದ ಪ್ರತಿಷ್ಠಿತ ಕಾಲೇಜುಗಳನ್ನು ಒಂದೇ ವೇದಿಕೆಯಲ್ಲಿ ತರುವ ಕಾರ್ಯಕ್ರಮವೇ ವಿದ್ಯಾಪೀಠ.

ವಿದ್ಯಾಪೀಠದಿಂದ ಏನು ಲಾಭ?
ಡಿಗ್ರಿ ಸೇರುವ ಮುನ್ನ ಕಾಲೇಜುಗಳನ್ನು ಆಯ್ಕೆ ಮಾಡಬೇಕಾಗುತ್ತದೆ. ಪ್ರತಿಯೊಂದು ಕಾಲೇಜಿಗೆ ತೆರಳಿ ಅಲ್ಲಿ ವಿಚಾರಿಸಬೇಕಾದರೆ ಬಹಳಷ್ಟು ಸಮಯ ಬೇಕಾಗುತ್ತದೆ ಮತ್ತು ಇದು ತ್ರಾಸದಾಯಕ ಕೆಲಸ. ಆದರೆ ನೀವು ಪಬ್ಲಿಕ್‌ ಟಿವಿಯ (PUBLiC TV) ವಿದ್ಯಾಪೀಠಕ್ಕೆ (Vidhyapeeta) ಆಗಮಿಸಿದರೆ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಸುಲಭವಾಗಿ ಉತ್ತರ ಸಿಗುತ್ತದೆ. 120ಕ್ಕೂ ಹೆಚ್ಚು ಕಾಲೇಜುಗಳು ಭಾಗವಹಿಸುವ ಕಾರಣ ಸ್ಥಳದಲ್ಲೇ ಯಾವೆಲ್ಲಾ ಕೋರ್ಸ್‌ಗಳು ಇದೆ? ಹಾಸ್ಟೆಲ್‌ ಇದ್ಯಾ? ಶುಲ್ಕ ಎಷ್ಟಾಗುತ್ತೆ? ಇತ್ಯಾದಿ ವಿಚಾರಗಳನ್ನು ಪ್ರಶ್ನಿಸಬಹುದು. ಹಲವು ಕಾಲೇಜುಗಳ ಜೊತೆ ಮಾತನಾಡಿದ ಬಳಿಕ ಅಂತಿಮವಾಗಿ ನೀವು ಒಂದು ನಿರ್ಧಾರಕ್ಕೆ ಬರಬಹುದು. ಇದನ್ನೂ ಓದಿ: ಜಡ್ಜ್ ಮನೆಯಲ್ಲಿ ಪತ್ತೆಯಾದ ಕಂತೆ ಕಂತೆ ಹಣದ ಬಗ್ಗೆ ಎಫ್‌ಐಆರ್ ಆಗಿಲ್ಲ ಯಾಕೆ: ಧನಕರ್ ಪ್ರಶ್ನೆ

ಎಷ್ಟು ಕಾಲೇಜುಗಳು ಭಾಗಿಯಾಗುತ್ತವೆ?
ವಿದ್ಯಾಪೀಠದಲ್ಲಿ ರಾಜ್ಯದ ನಾನಾ ಭಾಗಗಳ 120ಕ್ಕೂ ಹೆಚ್ಚು ಪ್ರತಿಷ್ಠಿತ ವಿದ್ಯಾಸಂಸ್ಥೆಗಳು ಪಾಲ್ಗೊಳ್ಳುತ್ತಿವೆ. ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಪದವಿ, ಸ್ನಾತಕೋತ್ತರ ಪದವಿ, ಕೆಸಿಇಟಿ, ನೀಟ್‌ ಮತ್ತು ಕಾಮೆಡ್‌ ಕೆ, ವೃತ್ತಿಪರ ಮತ್ತು ಔದ್ಯೋಗಿಕ ಕೋರ್ಸ್‌ಗಳ ಬಗ್ಗೆ ಒಂದೇ ಸ್ಥಳದಲ್ಲಿ ಸಮಗ್ರ ಮಾಹಿತಿ ಸಿಗಲಿದೆ. ಸಂವಾದದ ಮೂಲಕ ಪ್ರಮುಖ ಶಿಕ್ಷಣ ಸಂಸ್ಥೆಗಳ ದಾಖಲಾತಿ ಮತ್ತು ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದ ಮಾಹಿತಿ ಪಡೆದುಕೊಳ್ಳಲು ಈ ಮೇಳದಲ್ಲಿ ಅವಕಾಶ ಇದೆ.

 

ವೀಕೆಂಡ್‌ನಲ್ಲಿ ಕಾರ್ಯಕ್ರಮ:
ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಸಹಾಯವಾಗಲೆಂದು ಏ.26(ಶನಿವಾರ), ಏ.27(ಭಾನುವಾರ) ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಬೆಳಗ್ಗೆ 9 ಗಂಟೆಯಿಂದ ರಾತ್ರಿ 6 ಗಂಟೆಯವರೆಗೂ ಈ ಎಕ್ಸ್‌ಪೋ ನಡೆಯಲಿದೆ.

8ನೇ ವರ್ಷದ ಕಾರ್ಯಕ್ರಮ:
ವಿದ್ಯಾಪೀಠ ಈ ವರ್ಷ ಆರಂಭಗೊಂಡ ಎಕ್ಸ್‌ಪೋ ಅಲ್ಲ. ಸತತ 7 ವರ್ಷಗಳಿಂದ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸುತ್ತಾ ಬಂದಿದೆ. ಸಾವಿರಾರು ವಿದ್ಯಾರ್ಥಿಗಳು, ಪೋಷಕರು ಭಾಗಿಯಾಗಿ ಲಾಭವನ್ನು ಪಡೆದಿದ್ದಾರೆ. ಲಾಭ ಪಡೆದ ವಿದ್ಯಾರ್ಥಿಗಳು ವಿದ್ಯಾಪೀಠಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕಾರಣಕ್ಕೆ ವರ್ಷದಿಂದ ವರ್ಷಕ್ಕೆ ವಿದ್ಯಾಪೀಠಕ್ಕೆ ವಿದ್ಯಾರ್ಥಿಗಳ ಜೊತೆಗೆ ಆಗಮಿಸುವ ಕಾಲೇಜುಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇದನ್ನೂ ಓದಿ: ರಾಷ್ಟ್ರಪತಿಗಳಿಗೆ ನಿರ್ದೇಶನ ನೀಡಲು ಸಾಧ್ಯವಿಲ್ಲ,ಕೋರ್ಟ್‌ಗಳು ಸೂಪರ್ ಪಾರ್ಲಿಮೆಂಟ್‌ ಆಗಬಾರದು: ಧನಕರ್‌ ಅಸಮಾಧಾನ

ಸ್ಟಾಲ್‌ ಅಲ್ಲದೇ ಬೇರೆ ಏನಿದೆ?
ಕಾಲೇಜುಗಳ ಸ್ಟಾಲ್‌ಗಳ ಜೊತೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಪೂರಕವಾಗುವ ವಿಷಯಗಳ ಬಗ್ಗೆ ಸೆಮಿನರ್‌ ಆಯೋಜಿಸಲಾಗಿದೆ. ವಿಷಯ ತಜ್ಞರ ಜೊತೆ ವಿದ್ಯಾರ್ಥಿಗಳು, ಪೋಷಕರು ತಮ್ಮಲ್ಲಿರುವ ಗೊಂದಲವನ್ನು ಪರಿಹರಿಸಿಕೊಳ್ಳಬಹುದು. ಗೇಮ್ಸ್‌, ಸ್ಲೋ ಸೈಕಲ್‌ ರೇಸ್‌, ಪಿಕ್‌ & ಸ್ಪೀಚ್‌ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳು ತಮ್ಮ ವಿಶೇಷ ಪ್ರತಿಭೆ ಪ್ರದರ್ಶನಕ್ಕೆ ಶೈಕ್ಷಣಿಕ ಮೇಳ ವೇದಿಕೆ ಕಲ್ಪಿಸಿದೆ.

ಲ್ಯಾಪ್‌ಟಾಪ್‌, ಬೈಸಿಕಲ್‌ ಉಡುಗೊರೆ:
ವಿವಿಧ ಸ್ಪರ್ಧೆಯಲ್ಲಿ ಗೆದ್ದ ವಿಜೇತರಿಗೆ ಲ್ಯಾಪ್‌ಟಾಪ್ ಹಾಗೂ ಬೈಸಿಕಲ್‌ ಸೇರಿದಂತೆ ವಿಶೇಷ ಉಡುಗೊರೆ ನೀಡಲಾಗುವುದು. ಪ್ರತಿ ಅರ್ಧಗಂಟೆಗೆ ಅಚ್ಚರಿಯ ಉಡುಗೊರೆಗಳು ಸಿಗುತ್ತವೆ. ವಿದ್ಯಾರ್ಥಿಗಳಿಗೆ ಬಂಪರ್‌ ಬಹುಮಾನಗಳಿವೆ. ಸ್ಥಳದಲ್ಲೇ ತಕ್ಷಣ ಪ್ರವೇಶಾತಿಗೂ ಅವಕಾಶ ಇರುತ್ತದೆ. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಅಂಕಪಟ್ಟಿಯ ಫೋಟೋಕಾಪಿ ತಂದು ತೋರಿಸಿದ್ದಲ್ಲಿ ಅವರಿಗೂ ಉಡುಗೊರೆ ಸಿಗಲಿದೆ.

 

 

ಉಚಿತ ಕಾರ್ಯಕ್ರಮ:
120 ಕಾಲೇಜುಗಳು, ಸೆಮಿನಾರ್‌ ನಡೆಯುವ ಈ ಕಾರ್ಯಕ್ರಮದ ಪ್ರವೇಶಕ್ಕೆ ಯಾವುದೇ ಶುಲ್ಕ ಇಲ್ಲ. ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ಎಕ್ಸ್‌ಪೋ ನಡೆಯಲಿದೆ. ವಿದ್ಯಾರ್ಥಿಗಳು ದಿನಪೂರ್ತಿ ಇದ್ದು ಕಾರ್ಯಕ್ರಮವನ್ನು ವೀಕ್ಷಿಸಬಹುದು.

ಪಾರ್ಕಿಂಗ್‌ ಜಾಗ ಇದೆ:
ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮ ಆಗಿರುವ ಕಾರಣ ಪಾರ್ಕಿಂಗ್‌ಗೆ ಜಾಗ ಇದ್ಯಾ ಇಲ್ವೋ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡುವುದು ಸಹಜ. ಆದರೆ ಈ ಕಾರ್ಯಕ್ರಮದಲ್ಲಿ ಪಾರ್ಕಿಂಗ್‌ ಸಮಸ್ಯೆ ಆಗುವುದಿಲ್ಲ. ಈ ಕಾರಣಕ್ಕಾಗಿಯೇ ಅರಮನೆ ಮೈದಾನದಲ್ಲಿ ವಿದ್ಯಾಪೀಠವನ್ನು ಆಯೋಜಿಸಲಾಗಿದ್ದು ದ್ವಿಚಕ್ರ ವಾಹನ, ಕಾರಿನಲ್ಲಿ ಬರಬಹುದು.

ಯಾವೆಲ್ಲಾ ಕಾಲೇಜುಗಳು ಆಗಮಿಸುತ್ತಿವೆ?
ಪ್ಲಾಟಿನಂ ಆಯೋಜಕರು:
ಗಾರ್ಡನ್‌ ಸಿಟಿ ಯೂನಿರ್ವಸಿಟಿ, ಸಿಎಂಆರ್‌ ಯೂನಿವರ್ಸಿಟಿ, ರಾಮಯ್ಯ ಯೂನಿವರ್ಸಿಟಿ ಆಫ್‌ ಅಪ್ಲೈಡ್‌ ಸೈನ್ಸಸ್‌, ಕೇಂಬ್ರಿಡ್ಜ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ಸಪ್ತಗಿರಿ ಎನ್‌ಪಿಎಸ್‌ ಯೂನಿವರ್ಸಿಟಿ, ರೇವಾ ಯೂನಿವರ್ಸಿಟಿ.

ಗೋಲ್ಡ್‌ ಪ್ರಾಯೋಜಕರು:
ಈಸ್ಟ್‌ ಪಾಯಿಂಟ್‌ ಗ್ರೂಪ್‌ ಆಫ್‌ ಎಂಜಿನಿಯರಿಂಗ್‌, ಎಸ್‌ಜೆಬಿ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ದಿ ಆಕ್ಸ್‌ಫರ್ಡ್‌ ಎಜುಕೇಷನಲ್‌ ಇನ್‌ಸ್ಟಿಟ್ಯೂಟ್,‌ ಆರ್‌ಆರ್‌ ಇನ್‌ಸ್ಟಿಟ್ಯೂಷನ್ಸ್‌, ನಾಗಾರ್ಜುನ ಕಾಲೇಜ್‌ ಆಫ್‌ ಇಂಜಿನಿಯರಿಂಗ್‌, ಎಎಂಸಿ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಷನ್ಸ್‌, ಈಸ್ಟ್‌ ವೆಸ್ಟ್‌ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಷನ್ಸ್‌.

ಕ್ರಿಯೇಟಿವ್‌ ಸ್ಟಾಲ್‌ ಪಾರ್ಟ್ನರ್ಸ್‌:
ರಾಮಯ್ಯ ಇನ್‌ಸ್ಟಿಟಯೂಟ್‌ ಆಫ್‌ ಟೆಕ್ನಾಲಜಿ, ಎಸ್‌ವಿಸಿಇ (ಶ್ರೀ ವೆಂಕಟೇಶ್ವರ ಕಾಲೇಜ್‌ ಆಫ್‌ ಇಂಜಿನಿಯರಿಂಗ್) ಬೆಂಗಳೂರು, ಪ್ರೆಸಿಡೆನ್ಸಿ ಯೂನಿರ್ವಸಿಟಿ, ನ್ಯೂ ಹಾರಿಜನ್‌ ಕಾಲೇಜ್‌ ಆಫ್‌ ಇಂಜಿನಿಯರಿಂಗ್‌, ಕೆಎಲ್‌ಇ ಟೆಕ್ನಾಲಜಿ ಯೂನಿವರ್ಸಿಟಿ, ICFAI ಫೌಂಡೇಶನ್‌ ಫಾರ್‌ ಹೈಯರ್‌ ಎಜುಕೇಶನ್‌, ಪಾರುಲ್‌ ಯೂನಿವರ್ಸಿಟಿ, ಪ್ಲಾನ್‌ ಎಡು, ಫ್ಯೂಚರ್‌ ಮೆಡಿಕೊ.

ಸಿಲ್ವರ್‌ ಪ್ರಯೋಜಕರು:
ಚಾಣಕ್ಯ ಯೂನಿವರ್ಸಿಟಿ, ಪಿಇಎಸ್‌ ಯೂನಿವರ್ಸಿಟಿ, ದಯಾನಂದ ಸಾಗರ ಯೂನಿವರ್ಸಿಟಿ, ಬೃಂದಾವನ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಟ್‌, ಜಿಎಂ ಯೂನಿವರ್ಸಿಟಿ, ಎಐಎಂಎಸ್‌ ಇನ್‌ಸ್ಟಿಟ್ಯೂಟಸ್‌, ಎಬಿಬಿಎಸ್‌ ಬೆಂಗಳೂರು ಬಿ ಸ್ಕೂಲ್‌, ಕೃಪಾನಿಧಿ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಷನ್‌, ಎಸ್‌ಇಎ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಷನ್, ಸಿಟಿ ಕಾಲೇಜ್‌.

ಬ್ಯಾಂಕಿಂಗ್‌ ಪಾರ್ಟ್ನರ್‌:
ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ

ಬೆವರೇಜ್‌ ಪಾರ್ಟ್‌ನರ್‌
ಬಾಯರ್ಸ್‌ ಕಾಫಿ

ಗಿಫ್ಟ್‌ ಸ್ಪಾನ್ಸರ್‌
ಜೀನಿ ಸ್ಲಿಮ್‌, ವೇಯ್ಟ್‌ ಲಾಸ್‌ & ಎನರ್ಜಿ ಬೂಸ್ಟರ್‌.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 99000 60815/ 99000 60891

Share This Article