ಹುಬ್ಬಳ್ಳಿ ಕೃತ್ಯ ಮಾಸುವ ಮುನ್ನ ಬೀದರ್‌ನಲ್ಲಿ ಘಟನೆ – ಗೇಟ್ ಬಳಿ ಆಟವಾಡ್ತಿದ್ದ ಬಾಲಕಿ ಅಪಹರಣಕ್ಕೆ ಯತ್ನಿಸಿದ ಯುವಕ

Public TV
1 Min Read

ಬೀದರ್: ಹುಬ್ಬಳ್ಳಿಯಲ್ಲಿ (Hubballi) 5 ವರ್ಷದ ಬಾಲಕಿ ಕೊಲೆ ಪ್ರಕರಣ ಮಾಸುವ ಮುನ್ನವೇ ಬೀದರ್‌ನಲ್ಲಿ (Bidar) ಮತ್ತೊಂದು ಘಟನೆ ಬೆಳಕಿಗೆ ಬಂದಿದ್ದು, ಗೇಟ್ ಬಳಿ ಆಡುತ್ತಿದ್ದ ಬಾಲಕಿಯನ್ನು ಯುವಕನೊಬ್ಬ ಅಪಹರಿಸಲು (Kidnap) ಯತ್ನಿಸಿದ್ದಾನೆ. ಈ ದೃಶ್ಯ ಸಿಟಿಟಿವಿಯಲ್ಲಿ ಲಭ್ಯವಾಗಿದೆ.ಇದನ್ನೂ ಓದಿ: ಹುಬ್ಬಳ್ಳಿ | ಸೈಕೋಪಾತ್‌ನಿಂದ 5 ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಕೊಲೆ

ಬೀದರ್‌ನ ವಿದ್ಯಾನಗರ ಬಡಾವಣೆಯ 11ನೇ ಕ್ರಾಸ್‌ನಲ್ಲಿರುವ ಸತೀಶ್ ಬಕ್ಕಾಚೌಡೇಕರ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದೆ. ಮನೆಯಂಗಳಲ್ಲಿ ಬಾಲಕಿಯರಿಬ್ಬರು ಆಟವಾಡುತ್ತಿದ್ದರು. ಈ ವೇಳೆ ಯುವಕನೊಬ್ಬ ಮನೆ ಮುಂದೆ ಬೈಕ್ ನಿಲ್ಲಿಸಿ, ಸ್ವಲ್ಪ ಹೊತ್ತು ನೋಡಿಕೊಂಡು ನಿಂತಿದ್ದಾನೆ. ಬಳಿಕ ಗೇಟ್ ಒಳಗೆ ಹೋಗಿ ಅಲ್ಲೇ ಆಟ ಆಡುತ್ತಿದ್ದ ಇಬ್ಬರು ಬಾಲಕಿಯರ ಪೈಕಿ ಒಬ್ಬಳನ್ನ ಅಪಹರಿಸಲು ಯತ್ನಿಸಿದ್ದಾನೆ. ಅಷ್ಟರಲ್ಲಿ ಪೋಷಕರು ಹೊರಬರುತ್ತಿದ್ದಂತೆ ಬೈಕ್ ಸಮೇತ ಯುವಕ ಪರಾರಿಯಾಗಿದ್ದಾನೆ.

ಅಪಹರಿಸಲು ಯತ್ನಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಯುವಕನ ಅಸಭ್ಯ ವರ್ತನೆಯ ಬಗ್ಗೆ ಬಾಲಕಿಯರು ಪೋಷಕರಿಗೆ ತಿಳಿಸಿದ್ದಾರೆ.ಇದನ್ನೂ ಓದಿ: ಶಿವಮೊಗ್ಗದ ಲಾಡ್ಜ್‌ನಲ್ಲಿ ಹುಬ್ಬಳ್ಳಿ ಮೂಲದ ಉದ್ಯಮಿ ಅನುಮಾನಾಸ್ಪದ ಸಾವು

 

Share This Article