ಸುಳ್ಳು ಕೇಸ್‌ ಹಾಕಿ ಪತ್ನಿಯಿಂದ ಕಿರುಕುಳ ಆರೋಪ – ರಾಜಭವನದ ಮುಂಭಾಗ ಟೆಕ್ಕಿ ಆತ್ಮಹತ್ಯೆಗೆ ಯತ್ನ

Public TV
1 Min Read

ಬೆಂಗಳೂರು: ರಾಜಭವನದ ಮುಂಭಾಗ ಪೆಟ್ರೋಲ್‌ ಸುರಿದುಕೊಂಡು ಟೆಕ್ಕಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.

ಜುಹೈದ್ ಅಹಮದ್ ಆತ್ಮಹತ್ಯೆಗೆ ಯತ್ನಿಸಿದ ಟೆಕ್ಕಿ. ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯವನಾಗಿದ್ದು, ಮಧ್ಯಾಹ್ನ ರಾಜಭವನದ ಮುಂಭಾಗದಲ್ಲಿ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.

ನನ್ನ ಪತ್ನಿ ವರದಕ್ಷಿಣೆ ಕಿರುಕುಳ ಸೇರಿ ಹಲವು ರೀತಿಯ ಸುಳ್ಳು ಕೇಸ್‌ಗಳನ್ನು ಹಾಕಿ ಕಿರುಕುಳ ನೀಡುತಿದ್ದಾಳೆ ಎಂದು ಆರೋಪಿಸಿ ಟೆಕ್ಕಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಚಿಕ್ಕಬಳ್ಳಾಪುರ ಠಾಣೆಗೆ ಪತ್ನಿಯ ವಿರುದ್ಧ ದೂರು ನೀಡಲು ಹೋಗಿದ್ದರು. ಆದರೆ, ಪೊಲೀಸರು ದೂರು ದಾಖಲಿಸಿಕೊಂಡಿಲ್ಲ. ಆದ್ಧರಿಂದ ನ್ಯಾಯ ಬೇಕು ಎಂದು ರಾಜಭವನದ ಮುಂದೆ ಆತ್ಮಹತ್ಯೆಗೆ ಟೆಕ್ಕಿ ಯತ್ನಿಸಿದ್ದಾರೆ.

ಕೂಡಲೇ ಟೆಕ್ಕಿಯನ್ನು ವಶಕ್ಕೆ ಪಡೆದು ವಿಧಾನಸೌಧ ಪೊಲೀಸರು ಠಾಣೆಗೆ ಕರೆದುಕೊಂಡು ಬಂದು ತನಿಖೆ ಮಾಡಿದಾಗ, ಆತ್ಮಹತ್ಯೆ ಯತ್ನದ ಹಿಂದಿ‌ನ ಕಾರಣ ರಿವೀಲ್ ಆಗಿದೆ. ಬಿಎನ್ಎಸ್‌ನಲ್ಲಿ ಆತ್ಮಹತ್ಯೆ ಯತ್ನದ ಪ್ರಕರಣಗಳಲ್ಲಿ ಕೇಸ್ ದಾಖಲಿಸಿಕೊಳ್ಳುವುದಕ್ಕೆ ಅವಕಾಶ ಇರದ ಕಾರಣ ಟೆಕ್ಕಿಯನ್ನು ಕೌನ್ಸಿಲಿಂಗ್ ಮಾಡಿ ಬಿಟ್ಟು ಕಳಿಸಿಕೊಡಲು ಪೊಲೀಸರು ಮುಂದಾದರು.

Share This Article