27ನೇ ವಯಸ್ಸಿಗೆ ಬದುಕು ಮುಗಿಸಿದ ‘ಆಸ್ಟ್ರೇಲಿಯಾದ ನೆಕ್ಸ್ಟ್ ಟಾಪ್ ಮಾಡೆಲ್’ ಮಾಜಿ ಸ್ಪರ್ಧಿ

By
1 Min Read

ಕ್ಯಾನ್‌ಬೆರಾ: 2015 ರಲ್ಲಿ ‘ಆಸ್ಟ್ರೇಲಿಯಾದ ನೆಕ್ಸ್ಟ್ ಟಾಪ್ ಮಾಡೆಲ್’ನಲ್ಲಿ ರನ್ನರ್ ಅಪ್ ಆಗಿ ಖ್ಯಾತಿ ಗಳಿಸಿದ್ದ ಲೂಸಿ ಮಾರ್ಕೊವಿಕ್‌ (Lucy Markovic) ತನ್ನ 27ನೇ ವಯಸ್ಸಿಗೆ ನಿಧನರಾಗಿದ್ದಾರೆ.

- Advertisement -

ಲೂಸಿ ಯಶಸ್ವಿ ಮಾಡೆಲಿಂಗ್ ವೃತ್ತಿಜೀವನದಲ್ಲಿ ಹೆಸರಾಗಿದ್ದರು. ವರ್ಸೇಸ್ ಮತ್ತು ವಿಕ್ಟೋರಿಯಾ ಬೆಕ್‌ಹ್ಯಾಮ್‌ನಂತಹ ಬ್ರಾಂಡ್‌ಗಳ ಅಭಿಯಾನಗಳಲ್ಲಿ ಕಾಣಿಸಿಕೊಂಡಿದ್ದರು. ಮೇರಿ ಕ್ಲೇರ್ ಮತ್ತು ವಿವಿಧ ಅಂತರರಾಷ್ಟ್ರೀಯ ಆವೃತ್ತಿಗಳ ವೋಗ್ ಸೇರಿದಂತೆ ಉನ್ನತ ಮಟ್ಟದ ನಿಯತಕಾಲಿಕೆಗಳಲ್ಲಿ ಇವರ ಸಾಧನೆ ಬಗ್ಗೆ ವರದಿಗಳು ಪ್ರಕಟವಾಗಿದ್ದವು.

- Advertisement -

ಮೂರು ವಾರಗಳ ಹಿಂದೆ ಮಾರ್ಕೊವಿಕ್ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ವೊಂದನ್ನು ಹಾಕಿದ್ದರು. ತಾನು ಮೆದುಳಿನ ಅಪಧಮನಿಯ ವಿರೂಪಕ್ಕೆ (ಎವಿಎಂ) ಶಸ್ತ್ರಚಿಕಿತ್ಸೆಗೆ ಒಳಗಾಗುವುದಾಗಿ ತಿಳಿಸಿದ್ದರು. ಕಾಯಿಲೆಯು ರಕ್ತನಾಳಗಳಲ್ಲಿ ಸಮಸ್ಯೆ, ಮೆದುಳಿನ ಹಾನಿ ಮತ್ತು ಪಾರ್ಶ್ವವಾಯುವಿಗೆ ಕಾರಣವಾಗಬಹುದು ಎನ್ನಲಾಗಿತ್ತು.

- Advertisement -

ಲೂಸಿ ಸತತ 4 ವರ್ಷಗಳ ಕಾಲ ಈ ಕಾಯಿಲೆ ವಿರುದ್ಧ ಹೋರಾಡಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಫೋಟೊ ಕೂಡ ಹಂಚಿಕೊಂಡಿದ್ದರು. ಜೊತೆಗೆ ಮೆದುಳಿನ ಸ್ಕ್ಯಾನ್‌ನ ಚಿತ್ರವನ್ನು ಪೋಸ್ಟ್‌ ಮಾಡಿದ್ದರು. ಜೀವನವು ಒಂದು ಪ್ರಯಾಣ. ನಾನು ಮುಂದಿನ ಅಧ್ಯಾಯಕ್ಕೆ ಸಿದ್ಧಳಿದ್ದೇನೆಂದು ಬರೆದುಕೊಂಡಿದ್ದರು.

- Advertisement -

Share This Article