ಟ್ರಂಪ್‌ Vs ಕ್ಸಿ ಜಿನ್‌ಪಿಂಗ್‌ – ಈಗ ಅಮೆರಿಕದ ವಸ್ತುಗಳಿಗೆ 125% ತೆರಿಗೆ ಹಾಕಿದ ಚೀನಾ

By
1 Min Read

ಬೀಜಿಂಗ್‌: ವಿಶ್ವದ ಬಲಾಢ್ಯ ಆರ್ಥಿಕತೆಯನ್ನು ಹೊಂದಿರುವ ಅಮೆರಿಕ (USA) ಮತ್ತು ಚೀನಾ (China) ಮಧ್ಯೆ ನಡೆಯುತ್ತಿರುವ ವಾಣಿಜ್ಯ ಸಮರ (Tariff War) ಮತ್ತಷ್ಟು ಜೋರಾಗಿದೆ. ಅಮೆರಿಕ ವಿಧಿಸಿದ್ದ 145% ತೆರಿಗೆಗೆ ಪ್ರತಿಯಾಗಿ ಈಗ ಚೀನಾ ಅಮೆರಿಕದಿಂದ ಆಮದಾಗುವ ವಸ್ತುಗಳ ಮೇಲೆ 125% ತೆರಿಗೆ ವಿಧಿಸುವುದಾಗಿ ಪ್ರಕಟಿಸಿದೆ.

ಹೊಸ ತೆರಿಗೆ ಶನಿವಾರದಿಂದ ಜಾರಿಗೆ ಬರಲಿದೆ. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ (Xi Jinping) ಅವರು ಅಮೆರಿಕ ಆರಂಭಿಸಿದ ತೆರಿಗೆ ಸಮರದ ವಿರುದ್ಧ ಕೈ ಜೋಡಿಸುವಂತೆ ಯುರೋಪಿಯನ್ ಒಕ್ಕೂಟಕ್ಕೆ (EU) ಮನವಿ ಮಾಡಿದ ಕೆಲವೇ ಗಂಟೆಗಳಲ್ಲಿ ಚೀನಾದ ನಿರ್ಧಾರ ಪ್ರಕಟವಾಗಿದೆ.

ಚೀನಾದ ಮೇಲೆ ಅಮೆರಿಕವು ಅಸಹಜವಾಗಿ ಹೆಚ್ಚಿನ ಸುಂಕಗಳನ್ನು ವಿಧಿಸುವುದು ಅಂತರರಾಷ್ಟ್ರೀಯ ವ್ಯಾಪಾರ ನಿಯಮಗಳು, ಮೂಲಭೂತ ಆರ್ಥಿಕ ಕಾನೂನುಗಳು ಗಂಭೀರವಾಗಿ ಉಲ್ಲಂಘಿಸುತ್ತದೆ ಎಂದು ಚೀನಾ ಹಣಕಾಸು ಸಚಿವಾಲಯ ಹೇಳಿದೆ. ಇದನ್ನೂ ಓದಿ: ಮುಂದಿನ ದಿನಗಳಲ್ಲಿ ಭಾರೀ ಇಳಿಕೆಯಾಗಲಿದೆ ಟಿವಿ, ಫ್ರಿಡ್ಜ್‌, ಮೊಬೈಲ್‌ ಬೆಲೆ!

ಅಧ್ಯಕ್ಷ ಟ್ರಂಪ್ (Donald Trump) ಅವರ ಸುಂಕ ನೀತಿಯಿಂದ ಉಂಟಾದ ಜಾಗತಿಕ ಆರ್ಥಿಕ ಪ್ರಕ್ಷುಬ್ಧತೆಗೆ ಅಮೆರಿಕವೇ ಪೂರ್ಣ ಜವಾಬ್ದಾರಿಯನ್ನು ಹೊರಬೇಕು ಎಂದು ಚೀನಾ ಹೇಳಿದೆ.

ಸುಂಕ ಸಮರ ಆರಂಭಿಸುವ ಮೊದಲು ಚೀನಾ ಅಮೆರಿಕದ ವಸ್ತುಗಳಿಗೆ 67% ತೆರಿಗೆ ವಿಧಿಸುತ್ತಿತ್ತು. ಟ್ರಂಪ್‌ ಅವರು ಏ.2 ರಂದು ಚೀನಾ ವಸ್ತುಗಳಿಗೆ 34% ತೆರಿಗೆ ಹಾಕುವುದಾಗಿ ಘೋಷಣೆ ಮಾಡಿದ್ದರು. ಇದರಿಂದಾಗಿ ಮೊದಲಿದ್ದ 20% ಸೇರಿ 54% ತೆರಿಗೆ ಏರಿಕೆಯಾಗಿತ್ತು. ಇದನ್ನೂ ಓದಿ: 75 ದೇಶಗಳಿಗೆ 90 ದಿನ ಬ್ರೇಕ್‌ – ಚೀನಾಗೆ 125% ಟ್ಯಾಕ್ಸ್‌ ಸಮರ

ಅಮೆರಿಕದ ನಿರ್ಧಾರದಿಂದ ಸಿಟ್ಟಾದ ಚೀನಾ ಮತ್ತೆ 34% ಏರಿಕೆ ಮಾಡಿತ್ತು. ಇದಕ್ಕೆ ಸಿಟ್ಟಾದ ಟ್ರಂಪ್‌ ತೆರಿಗೆಯನ್ನು 104% ಏರಿಕೆ ಮಾಡಿದ್ದರು. ಅಮೆರಿಕದ ನಿರ್ಧಾರದಿಂದ ಮತ್ತೆ ಸಿಟ್ಟಾದ ಚೀನಾ ಅಮೆರಿಕದ ವಸ್ತುಗಳ ಮೇಲೆ 84% ತೆರಿಗೆ ಹಾಕಿತು. ಚೀನಾ ನಿರ್ಧಾರದಿಂದ ಆಕ್ರೋಶಗೊಂಡ ಟ್ರಂಪ್‌ ಈಗ ಚೀನಾದ ವಸ್ತುಗಳ ಮೇಲೆ 125% ತೆರಿಗೆ ಹಾಕುವ ಮೂಲಕ ಒಟ್ಟು 145% ತೆರಿಗೆ ಏರಿಸಿದ್ದರು. ಈಗ ಚೀನಾ 125% ತೆರಿಗೆ ಹಾಕುವುದಾಗಿ ಘೋಷಿಸಿದೆ.

Share This Article