ಗುತ್ತಿಗೆದಾರರು ಕಮಿಷನ್ ಆರೋಪದ ಸಾಕ್ಷಿ ಕೊಟ್ಟರೆ ತನಿಖೆ ಮಾಡಿಸುತ್ತೇವೆ – ಕೃಷ್ಣಬೈರೇಗೌಡ

By
1 Min Read

ಬೆಂಗಳೂರು: ರಾಜ್ಯ ಸರ್ಕಾರದ (State Government) ಮೇಲೆ ಗುತ್ತಿಗೆದಾರರು ಮಾಡಿರುವ ಕಮಿಷನ್ ಆರೋಪಕ್ಕೆ ಸೂಕ್ತ ದಾಖಲಾತಿ ಕೊಟ್ಟರೆ ತನಿಖೆ ಮಾಡಿಸುವುದಾಗಿ ಕಂದಾಯ ಸಚಿವ ಕೃಷ್ಣಬೈರೇಗೌಡ (Krishna Byregowda) ಸ್ಪಷ್ಟನೆ ನೀಡಿದರು.ಇದನ್ನೂ ಓದಿ: ಕೊನೆಗೂ ಭಾರತಕ್ಕೆ ಬಂದ ಮುಂಬೈ ದಾಳಿ ಉಗ್ರ ರಾಣಾ

ಗುತ್ತಿಗೆದಾರರ ಸಂಘದಿಂದ ಸಚಿವ ಸತೀಶ್ ಜಾರಕಿಹೊಳಿ, ಬೋಸರಾಜು ಮೇಲೆ ಆರೋಪ ಮಾಡಿರುವ ವಿಚಾರ ಹಾಗೂ ಸಿಎಂ, ಡಿಸಿಎಂಗೆ ಪತ್ರ ಬರೆದಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಗುತ್ತಿಗೆದಾರರು ಏನಾದರೂ ಆರೋಪ ಮಾಡಿದರೆ, ಅದಕ್ಕೆ ಸೂಕ್ತ ದಾಖಲಾತಿ ಕೊಟ್ಟರೆ ತನಿಖೆ ಮಾಡಿಸುತ್ತೇವೆ. ಗುತ್ತಿಗೆದಾರರ ದೂರು ಪರಿಶೀಲನೆ ಮಾಡುತ್ತೇವೆ. ಮಧ್ಯವರ್ತಿಗಳು ಯಾರು ಎಂದು ಅವರು ಮಾಹಿತಿ ಕೊಡಲಿ. ಯಾರ ಕುಟುಂಬದ ಹಸ್ತಕ್ಷೇಪ ಎಂದು ದಾಖಲಾತಿ ಕೊಡಲಿ. ಅವರು ಕೊಟ್ಟರೆ ದೂರು ಪರಿಶೀಲನೆ ಮಾಡುತ್ತೇವೆ. ಸಚಿವರು ಯಾರು? ಕುಟುಂಬದವರು ಯಾರು? ಎಂದು ನಿರ್ದಿಷ್ಟವಾಗಿ ಹೇಳಿದರೆ ತನಿಖೆ ಮಾಡಿಸುತ್ತೇವೆ ಎಂದು ತಿಳಿಸಿದರು.

ಯಾರ ಹಸ್ತಕ್ಷೇಪ ಎಂದು ಹೇಳಿದರೆ ತನಿಖೆ ಮಾಡಿಸಬಹುದು. ಬಿಜೆಪಿ ಮೇಲೆ 40% ಕಮಿಷನ್ ಆರೋಪದ ನ್ಯಾಯಾಂಗ ತನಿಖೆ ಆಗುತ್ತಿದೆ. ಕೋವಿಡ್‌ನಲ್ಲಿ ಅಕ್ರಮ ಆಗಿರುವ ಬಗ್ಗೆ ಬಿಜೆಪಿ ನಾಯಕರೇ ಹೇಳುತ್ತಿದ್ದಾರೆ. ಇದರ ತನಿಖೆಯೂ ನಡೆಯುತ್ತಿದೆ. ಅದೇ ರೀತಿ ಗುತ್ತಿಗೆದಾರರು ಏನಾದರೂ ಈ ಬಗ್ಗೆ ದೂರು ಕೊಟ್ಟರೆ ತನಿಖೆ ಮಾಡುತ್ತೇವೆ ಎಂದು ಹೇಳಿದರು.ಇದನ್ನೂ ಓದಿ: ಮುಂಬೈ ದಾಳಿಕೋರ ರಾಣಾ ತನ್ನ ಪ್ರಜೆಯಲ್ಲ – ದಿಢೀರ್‌ ಪಾಕ್‌ ಸ್ಪಷ್ಟನೆ

Share This Article