ಕುಡಿದ ಮತ್ತಿನಲ್ಲಿ ಕಾರು ಚಾಲನೆ, ಪಾದಚಾರಿಗಳಿಗೆ ಡಿಕ್ಕಿ – ಮೂವರ ಸಾವು, 6 ಮಂದಿ ಸ್ಥಿತಿ ಗಂಭೀರ

By
1 Min Read

-7ಕಿ.ಮೀ. ವ್ಯಾಪ್ತಿಯಲ್ಲಿ ಪಾದಚಾರಿ ಹಾಗೂ ವಾಹನಗಳಿಗೆ ಡಿಕ್ಕಿ

ಜೈಪುರ: ಎಸ್‌ಯುವಿ ಕಾರೊಂದು ವಾಹನ ಹಾಗೂ ಪಾದಚಾರಿಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿದ್ದು, ಆರು ಜನರು ಗಾಯಗೊಂಡಿರುವ ಘಟನೆ ಜೈಪುರದ ನಹರ್‌ಗಢ (Nahargarh) ಪ್ರದೇಶದಲ್ಲಿ ನಡೆದಿದೆ.

ಅಪಘಾತದಲ್ಲಿ ಅವದೇಶ್ ಪರೀಕ್ (37), ಮಮತಾ (50) ಹಾಗೂ ವೀರೇಂದ್ರ ಸಿಂಗ್ (48) ಮೃತಪಟ್ಟಿದ್ದು, ಅಪಘಾತದಲ್ಲಿ ಮೋನೇಶ್ ಸೋನಿ (28), ಮೊಹಮ್ಮದ್ ಜಲಾಲುದ್ದೀನ್ (44), ದೀಪಿಕಾ ಸೈನಿ (17), ವಿಜಯ್ ನಾರಾಯಣ (65), ಜೆಬುನ್ನಿಶಾ (50) ಅಂಶಿತಾ ಗಾಯಗೊಂಡಿದ್ದಾರೆ.ಇದನ್ನೂ ಓದಿ: ಅಮೆರಿಕ ಸುಂಕ ನೀತಿಯಿಂದಾಗುವ ತೊಂದರೆ ತಪ್ಪಿಸಲು ಭಾರತ-ಚೀನಾ ಒಟ್ಟಾಗಿ ನಿಲ್ಲಬೇಕು: ಚೀನಾ ವಕ್ತಾರೆ

ಈ ಕುರಿತು ಹೆಚ್ಚುವರಿ ಡಿಸಿಪಿ ಬಜರಂಗ್ ಸಿಂಗ್ ಮಾತನಾಡಿ, ಕಾರು ಚಾಲಕನನ್ನು ಶಾಸ್ತ್ರಿ ನಗರದ ರಾಣಾ ಕಾಲೋನಿ ನಿವಾಸಿ ಉಸ್ಮಾನ್ ಖಾನ್ (62) ಎಂದು ಗುರುತಿಸಲಾಗಿದೆ. ಕಾರ್ಖಾನೆಯ ಮಾಲೀಕನಾಗಿದ್ದು, ಕುಡಿತ ಮತ್ತಿನಲ್ಲಿ ಕಾರು ಚಲಾಯಿಸುತ್ತಿರುವುದಾಗಿ ತನಿಖೆಯಲ್ಲಿ ದೃಢವಾಗಿದೆ. ಕುಡಿತ ಮತ್ತಿನಲ್ಲಿ ಗಾಡಿ ಓಡಿಸಿಕೊಂಡು ಬಂದು ಮೊದಲು ಸಂತೋಷ್ ಮಾತಾ ದೇವಸ್ಥಾನದ ಬಳಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ. ನಂತರ ಹಾಗೆಯೇ ಕಾರು ಚಲಾಯಿಸಿಕೊಂಡು ಹೋಗಿದ್ದು, ದಾರಿಯುದ್ದಕ್ಕೂ ಪಾದಚಾರಿಗಳ ಮೇಲೆ ಕಾರು ಹಾಯಿಸಿದ್ದಾನೆ. ಕೂಡಲೇ ಸ್ಥಳದಲ್ಲಿದ್ದವರು ಆತನನ್ನು ಹಿಡಿದುಕೊಂಡಿದ್ದು, ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿಸಿದರು.

ಗಾಯಾಳುಗಳನ್ನು ಸವಾಯಿ ಮಾನ್ ಸಿಂಗ್ (ಎಸ್‌ಎಂಎಸ್) ಆಸ್ಪತ್ರೆಗೆ ಸಾಗಿಸಲಾಗಿದ್ದು, ಮೂವರು ಮೃತಪಟ್ಟಿದ್ದಾರೆ. ಇನ್ನುಳಿದ ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ.

ಮೃತ ಮಮತಾ ತಂದೆ ಕಾರು ಚಾಲಕನ ವಿರುದ್ಧ ದೂರು ನೀಡಿದ್ದು, ಎಫ್‌ಐಆರ್ ದಾಖಲಾಗಿದೆ.ಇದನ್ನೂ ಓದಿ: ಟ್ರಂಪ್ ಟ್ಯಾರಿಫ್ ಎಫೆಕ್ಟ್ – ಹಾಲಿವುಡ್ ಸಿನಿಮಾ ಬ್ಯಾನ್ ಮಾಡುತ್ತಾ ಚೀನಾ?

Share This Article