ಬಿಡದಿಯಲ್ಲಿ ವಿಮಾನ‌ ನಿಲ್ದಾಣ ಮಾಡ್ತಿಲ್ಲ, ಅಲ್ಲಿ ಶಿವಕುಮಾರ್ ಲೇಔಟ್ ಮಾಡ್ತಿದ್ದಾರೆ: ಎಂ.ಬಿ.ಪಾಟೀಲ್

By
1 Min Read

ಬೆಂಗಳೂರು: ನಾವು ಬಿಡದಿಯಲ್ಲಿ(Bidadi) ಎರಡನೇ ವಿಮಾನ‌ ನಿಲ್ದಾಣ ಮಾಡುತ್ತಿಲ್ಲ. ಅಲ್ಲಿ ಡಿ.ಕೆ.ಶಿವಕುಮಾರ್ (DK Shivakumar) ಲೇ ಔಟ್ ಮಾಡ್ತಿದ್ದಾರೆ. ಗ್ರೇಟರ್ ಬಿಡದಿ ಸೈಟ್ ಮಾಡುತ್ತಿದ್ದಾರೆ ಎಂದು ಸಚಿವ ಎಂ.ಬಿ.ಪಾಟೀಲ್ (MB Patil) ಹೇಳಿದ್ದಾರೆ.

ಬಿಡದಿ ಸೂಕ್ತವಲ್ಲ ಎಂದು ಈ ಹಿಂದೆ ಟಿಕ್ನಿಕಲ್ ಟೀಂ ವರದಿ ವಿಚಾರವಾಗಿ ಮಾತನಾಡಿದ ಅವರು, ಕನಕಪುರದ (Kanakapura) ಹಾರೋಹಳ್ಳಿ ಬಳಿ ಒಂದು ಜಾಗ ನೋಡಲಾಗಿದೆ. ಕುಣಿಗಲ್ ರಸ್ತೆ ಬಳಿ ಒಂದು ಜಾಗ ನೋಡಿದ್ದೇವೆ. ವಿಧಾನಸೌಧಕ್ಕೆ 50 ಕಿ.ಮೀ ದೂರ ಇದೆ‌ ಎಂದರು. ಇದನ್ನೂ ಓದಿ: ವಿಚಾರಣೆಗೆ ದರ್ಶನ್‌ ಗೈರು – ಬೆಂಗಳೂರು ಕೋರ್ಟ್‌ ಅಸಮಾಧಾನ

ಎರಡನೇ ವಿಮಾನ ‌ನಿಲ್ದಾಣಕ್ಕಾಗಿ ಕೇಂದ್ರ ಅಧ್ಯಯನ ತಂಡದ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಿನ್ನೆ, ಇವತ್ತು, ನಾಳೆ ಅವರು ಇರುತ್ತಾರೆ. ಮೂರು ದಿನ ಇದ್ದು ಸ್ಥಳ ಪರಿಶೀಲನೆ ಮಾಡುತ್ತಾರೆ. ವೀಕ್ಷಣೆ ಮಾಡಿ ದೆಹಲಿಗೆ ಹೋಗುತ್ತಾರೆ. ಜಾಗಗಳ ಬಗ್ಗೆ ರಿಪೋರ್ಟ್ ಕೊಡುತ್ತಾರೆ ಎಂದು ತಿಳಿಸಿದರು.

ದೆಹಲಿಯಿಂದ ನಮಗೆ ಸ್ಥಳ ವರದಿ ಬರಬೇಕು, ಆಮೇಲೆ ನಾವು ಸಮಗ್ರ ಯೋಜನಾ ವರದಿ (DPR) ಮಾಡಬೇಕಾಗುತ್ತದೆ. ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ದೊಡ್ಡ ದೊಡ್ಡ ಕಂಪನಿಗಳು ಯಾವುದು ಎನ್ನುವುದನ್ನು ನೋಡಬೇಕಾಗುತ್ತದೆ. ಆಮೇಲೆ ಕ್ಯಾಬಿನೆಟ್ ನಲ್ಲಿ ಚರ್ಚಿಸಬೇಕು, ಕ್ಯಾಬಿನೆಟ್ ಒಪ್ಪಿಗೆ ಬಳಿಕ ಅಂತಿಮ ಆಗಲಿದೆ ಎಂದು ಸ್ಪಷ್ಟಪಡಿಸಿದರು.

 

Share This Article