ಗ್ರಾನೈಟ್ ಕ್ವಾರಿಯಲ್ಲಿ ಸ್ಪೋಟ – ಮೂವರ ವಿರುದ್ಧ ಪ್ರಕರಣ ದಾಖಲು

Public TV
1 Min Read

-ಬಾಂಬ್ ಡಿಸ್ಪೋಸಲ್ ಸ್ಕ್ವಾಡ್‌ನಿಂದ ತಪಾಸಣೆ

ರಾಯಚೂರು: ಜಿಲ್ಲೆಯ ಲಿಂಗಸುಗೂರಿನ (Lingasuguru) ಮಾಕಾಪುರ ಬಳಿ ಗ್ರಾನೈಟ್ ಕ್ವಾರಿಯಲ್ಲಿ (Granite Quarry) ಸ್ಪೋಟಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ವಾರಿ ಮಾಲೀಕ, ಮ್ಯಾನೇಜರ್ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.

ಮೈಮೇಲೆ ಕಲ್ಲುಬಿದ್ದು ಬಾಗಲಕೋಟೆಯ (Bagalkote) ಇಳಕಲ್‌ನ ವೆಂಕಟೇಶ (38) ಸ್ಥಳದಲ್ಲೇ ಸಾವನ್ನಪ್ಪಿದ್ದು, ಕೊಪ್ಪಳದ ಕುಷ್ಠಗಿ ಮೂಲದ ಮಹಾಲಿಂಗ ಎಂಬುವವರಿಗೆ ಗಂಭೀರ ಗಾಯಗಳಾಗಿವೆ.ಇದನ್ನೂ ಓದಿ: Raichur | ಗ್ರಾನೈಟ್ ಕ್ವಾರಿಯಲ್ಲಿ ಸಿಡಿಮದ್ದು ಸ್ಫೋಟ – ಓರ್ವ ಸಾವು, ಇನ್ನೋರ್ವ ಗಂಭೀರ

ಗ್ರಾನೈಟ್ ಕ್ವಾರಿ ಅಕ್ರಮವಾಗಿ ನಡೆಯುತ್ತಿದ್ದು, ಘಟನೆ ಹೊರಗೆ ಬಾರದಂತೆ ಮೃತದೇಹವನ್ನ ಬಾಗಲಕೋಟೆಗೆ ರವಾನಿಸಿ, ಮುದಗಲ್ ಸರ್ಕಾರಿ ಆಸ್ಪತ್ರೆಗೆ ತರಲಾಗಿತ್ತು. ಗಾಯಾಳುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದೀಗ ಘಟನಾ ಸ್ಥಳಕ್ಕೆ ಬಾಂಬ್ ಡಿಸ್ಪೋಸಲ್ ಸ್ಕ್ವಾಡ್ ಭೇಟಿ ನೀಡಿ, ತಪಾಸಣೆ ಮಾಡಿದೆ. ಸ್ಪೋಟಕ ವಸ್ತುಗಳ ಬಳಕೆ ಹಿನ್ನೆಲೆ ಬಾಂಬ್ ಡಿಸ್ಪೋಸಲ್ ಸ್ಕ್ವಾಡ್‌ನಿಂದ ಪರಿಶೀಲನೆ ಮಾಡಲಾಗಿದೆ. ಗ್ರಾನೈಟ್ ಗಣಿಗಾರಿಕೆಗೆ ಅನುಮತಿ ಇದ್ದರೂ, ಅನಧಿಕೃತವಾಗಿ ಸಿಡಿಮದ್ದು ಬಳಕೆ ಮಾಡಿರುವುದು ಬಯಲಾಗಿದೆ. ಸದ್ಯ ಕ್ವಾರಿ ಮಾಲೀಕ ಮಲ್ಲನಗೌಡ, ಮ್ಯಾನೇಜರ್ ವಿಶ್ವನಾಥ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.ಇದನ್ನೂ ಓದಿ: 2008ರ ಮುಂಬೈ ದಾಳಿ ಆರೋಪಿ ಭಾರತ ಹಸ್ತಾಂತರ ತಡೆ ಅರ್ಜಿ ತಿರಸ್ಕರಿಸಿದ ಯುಎಸ್‌ ಸುಪ್ರೀಂ ಕೋರ್ಟ್

 

Share This Article