ಒಮನ್‌ನಲ್ಲಿ ವಿಜಯ್, ರಶ್ಮಿಕಾ ಸುತ್ತಾಟ- ಬೀಚ್‌ ಫೋಟೋದಿಂದ ಸಿಕ್ಕಿಬಿದ್ದ ಜೋಡಿ

By
1 Min Read

ಟಿ ರಶ್ಮಿಕಾ ಮಂದಣ್ಣ (Rashmika Mandanna) 29ನೇ ವರ್ಷದ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ್ದಾರೆ. ಕಡಲ ತೀರದಲ್ಲಿ ಬರ್ತಡೇ ಆಚರಿಸಿಕೊಂಡಿರೋ ರಶ್ಮಿಕಾ ಜೊತೆ ವಿಜಯ್ ಕೂಡ ಇದ್ದಾರೆ. ಇಬ್ಬರು ಪ್ರೀತಿಯಲ್ಲಿದ್ದಾರೆ ಎಂಬುದಕ್ಕೆ ನೆಟ್ಟಿಗರು ಸಾಕ್ಷಿ ತೋರಿಸಿದ್ದಾರೆ. ಸದ್ಯ ಇಬ್ಬರ ಬೀಚ್ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಇದನ್ನೂ ಓದಿ:ಬ್ಯಾಕ್‌ ಟು ಬ್ಯಾಕ್‌ ಹಿಟ್‌ ಸಿನಿಮಾ ಕೊಟ್ಟಿದ್ದ ರಶ್ಮಿಕಾಗೆ ಶುರುವಾಯ್ತಾ ಬ್ಯಾಡ್ ಟೈಮ್?

ಏ.5ರಂದು ಬರ್ತ್‌ಡೇ ಇದ್ದ ಹಿನ್ನೆಲೆ ಅವರು ‘ಪುಷ್ಪ 2’ ನಟಿ ರಶ್ಮಿಕಾ ಒಮನ್‌ಗೆ ತೆರಳಿದ್ದರು. ಆದರೆ ಯಾರೊಂದಿಗೆ ಹೋಗಿದ್ದಾರೆ ಎಂಬುದು ತಿಳಿದಿರಲಿಲ್ಲ. ಅದಕ್ಕೀಗ ಉತ್ತರ ಸಿಕ್ಕಿದೆ. ರಶ್ಮಿಕಾ ಹಾಗೂ ವಿಜಯ್ (Vijay Devarakonda) ತಮ್ಮ ಖಾಸಗಿ ಇನ್ಸ್ಟಾಗ್ರಾಂ ಖಾತೆಯಲ್ಲಿ ಮಾಡಿದ ಪೋಸ್ಟ್‌ನಿಂದ ಇಬ್ಬರ ಗುಟ್ಟು ರಟ್ಟಾಗಿದೆ. ಇದನ್ನೂ ಓದಿ:ಹುಟ್ಟುಹಬ್ಬ ಆಚರಿಸಿಕೊಳ್ಳಲು ವಿದೇಶಕ್ಕೆ ಹಾರಿದ ನ್ಯಾಷನಲ್‌ ಕ್ರಶ್‌ – ಈ ನಟನೊಂದಿಗೆ ರಶ್ಮಿಕಾ ಸೆಲೆಬ್ರೇಷನ್‌!

ಸೋಶಿಯಲ್‌ ಮೀಡಿಯಾದಲ್ಲಿ ರಶ್ಮಿಕಾ ಮಂದಣ್ಣ ಬೀಚ್ ಬಳಿ ಕುಳಿತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಬ್ಯಾಕ್‌ಗ್ರೌಂಡ್‌ನಲ್ಲಿ ರೆಡ್ ಕಲರ್ ಬಾವುಟವಿದೆ. ಅದರಂತೆ ವಿಜಯ್ ಶೇರ್ ಮಾಡಿರೋ ಪೋಸ್ಟ್‌ನಲ್ಲಿ ಇದೇ ರೀತಿಯ ಬಾವುಟ ಕಾಣಿಸಿದೆ. ಇದರಿಂದ ಇಬ್ಬರೂ ಜೊತೆಯಾಗಿ ಒಮನ್‌ನಲ್ಲಿ ಕಾಲ ಕಳೆಯುತ್ತಿದ್ದಾರೆ ಎನ್ನುವ ವಿಚಾರ ಖಚಿತವಾಗಿದೆ. ಇಬ್ಬರ ಪೋಸ್ಟ್‌ನಿಂದ ಅಭಿಮಾನಿಗಳ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಈ ಜೋಡಿ ಅದ್ಯಾವಾಗ ಅಧಿಕೃತವಾಗಿ ಗುಡ್‌ ನ್ಯೂಸ್‌ ನೀಡ್ತಾರೆ ಎಂದು ಫ್ಯಾನ್ಸ್‌ ಎದುರು ನೋಡ್ತಿದ್ದಾರೆ.

ಅಂದಹಾಗೆ, ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಗೀತ ಗೋವಿಂದಂ, ಡಿಯರ್ ಕಾಮ್ರೆಡ್ ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದಾರೆ.

Share This Article