ಜಪಾನ್‌ನಲ್ಲಿ 6 ತೀವ್ರತೆಯ ಪ್ರಬಲ ಭೂಕಂಪ – 1.8 ಲಕ್ಷ ಕೋಟಿ ಸಂಪತ್ತು ನಷ್ಟ ಸಾಧ್ಯತೆ!

By
3 Min Read

ಟೊಕಿಯೋ: ಮ್ಯಾನ್ಮಾರ್‌, ಥೈಲ್ಯಾಂಡ್‌ನಲ್ಲಿ ಸಂಭವಿಸಿದ ಭೀಕರ ಭೂಕಂಪದ ಆಘಾತದಿಂದ ಜಗತ್ತು ಚೇತರಿಸಿಕೊಳ್ಳುವ ಮೊದಲೇ ಜಪಾನ್‌ನಲ್ಲೂ ಪ್ರಬಲ ಭೂಕಂಪನ (Japan Earthquake) ಸಂಭವಿಸಿದೆ.

ಭಾರತೀಯ ಕಾಲಮಾನ ಬುಧವಾರ ಸಂಜೆ 7:34ರ ವೇಳೆಗೆ ಜಪಾನ್‌ನ ಕ್ಯುಶುನಲ್ಲಿ 6 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಭೂಮಿಯಿಂದ 30 ಕಿಮೀ ಆಳದಲ್ಲಿ ಕೇಂದ್ರ ಬಿಂದು ಪತ್ತೆಯಾಗಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ. ತಕ್ಷಣಕ್ಕೆ ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ. ಇದನ್ನೂ ಓದಿ: ಮ್ಯಾನ್ಮಾರ್‌ನಲ್ಲಿ ಭೂಕಂಪ – 334 ಅಣುಬಾಂಬ್‌ಗಳ ಶಕ್ತಿಗೆ ಹೋಲಿಸಿದ ವಿಜ್ಞಾನಿಗಳು

ಒಂದು ದಿನದ ಹಿಂದೆಯಷ್ಟೇ ಜಪಾನ್‌ನಲ್ಲಿ ಮೆಗಾಕ್ವೇಕ್‌ ಸಂಭವಿಸುವ ಸಾಧ್ಯತೆ ಇದ್ದು, ಇದರಿಂದ ಉಂಟಾಗುವ ಸುನಾಮಿಯಲ್ಲಿ ಸರಿಸುಮಾರು 3,00,000 ಜನರು ಸಾಯಬಹುದು. ಅಲ್ಲದೇ ಈ ಬೃಹತ್‌ ಪ್ರಾಕೃತಿಕ ವಿಕೋಪದಿಂದ ಜಪಾನ್‌ಗೆ ಸುಮಾರು 1.8 ಟ್ರಿಲಿಯನ್‌ನಷ್ಟು (ಲಕ್ಷ ಕೋಟಿಯಷ್ಟು) ಆರ್ಥಿಕ ನಷ್ಟ ಸಂಭವಿಸಬಹುದು ಎಂದು ವರದಿ ಹೇಳಿತ್ತು.

ಕಳೆದ ಆಗಸ್ಟ್‌ನಲ್ಲಿ ಜಪಾನ್ ಹವಾಮಾನ ಸಂಸ್ಥೆ ಮೊದಲ ಬಾರಿಗೆ ಮೆಗಾಕ್ವೇಕ್ ಸಂಭವಿಸುವ ಆತಂಕವನ್ನು ಹೊರಹಾಕಿತ್ತು. ಅದೇ ರೀತಿ ಹೊಸ ವರ್ಷದ ಮೊದಲ ದಿನವೇ ನೋಟೊ ದ್ವೀಪ ಪ್ರದೇಶದಲ್ಲಿ ದೊಡ್ಡ ಭೂಕಂಪ ಸಂಭವಿಸಿ, ಕನಿಷ್ಠ 260 ಜನರು ಸಾವನ್ನಪ್ಪಿದರು. ಇದನ್ನೂ ಓದಿ: ಇರಾನ್ ಪರಮಾಣು ಒಪ್ಪಂದಕ್ಕೆ ಸಹಿ ಹಾಕದಿದ್ದರೆ ಬಾಂಬ್ ದಾಳಿ ಮಾಡುತ್ತೇನೆ: ಟ್ರಂಪ್ ಬೆದರಿಕೆ

ಭೂಕಂಪ ಸಂಭವಿಸಿದ್ದು ಏಕೆ?
ಕ್ಯುಶುವಿನಲ್ಲಿ ಇಲ್ಲಿ ಫಿಲಿಪ್ಪೀನ್ ಸಮುದ್ರದ ಟೆಕ್ಟಾನಿಕ್ ಪ್ಲೇಟ್, ಜಪಾನ್ ಇರುವ ಖಂಡಾಂತರ ಪ್ಲೇಟ್‌ನ ಕೆಳಗೆ ಸಾಗುತ್ತದೆ. ಈ ಶಿಲಾ ಫಲಕವು ಒಂದಕ್ಕೊಂದು ಬಂಧಿಯಾಗುವುದರಿಂದ ಶಕ್ತಿ ಸಂಗ್ರಹಗೊಂಡು ದೊಡ್ಡ ಭೂಕಂಪಗಳ ರೂಪದಲ್ಲಿ ಬಿಡುಗಡೆಯಾಗುತ್ತದೆ. ಹೀಗಾಗಿಯೇ ಭೂಕಂಪ ಸಂಭವಿಸಿರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ಇದನ್ನೂ ಓದಿ: ಬಾಂಬ್‌ ಬೆದರಿಕೆ ಬೆನ್ನಲ್ಲೇ ಅಮೆರಿಕಕ್ಕೆ ಪ್ರತ್ಯುತ್ತರ ನೀಡಲು ಪ್ಲ್ಯಾನ್‌ – ದೈತ್ಯ ಮಿಸೈಲ್‌ ಸಿದ್ಧಪಡಿಸಿದ ಇರಾನ್‌

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Share This Article