ಐಪಿಎಲ್‌ನಿಂದ ಬ್ಯಾನ್‌ ಮಾಡಿ – ರಿಯಾನ್‌ ಪರಾಗ್‌ ವಿರುದ್ಧ ರೊಚ್ಚಿಗೆದ್ದ ಫ್ಯಾನ್ಸ್‌

By
2 Min Read

ಗುವಾಹಟಿ: ಐಪಿಎಲ್‌ನಿಂದ ರಾಜಸ್ಥಾನ ರಾಯಲ್ಸ್‌ (Rajasthan Royals) ತಂಡದ ನಾಯಕ ರಿಯಾನ್‌ ಪರಾಗ್‌ (Riyan Parag) ಅವರನ್ನು ಬ್ಯಾನ್‌ ಮಾಡಬೇಕೆಂದು ಕ್ರಿಕೆಟ್‌ ಅಭಿಮಾನಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ.

ಕ್ರಿಕೆಟ್‌ ಅಭಿಮಾನಿಗಳು ರಿಯಾನ್‌ ಪರಾಗ್‌ ವಿರುದ್ಧ ಕಿಡಿಕಾರಲು ಕಾರಣವಾಗಿದ್ದು ಒಂದು ವಿಡಿಯೋ. ಅಭಿಮಾನಿಗಳ ಜೊತೆ ಸೆಲ್ಫಿ (Selfie) ತೆಗೆಯುವ ವೇಳೆ ಪರಾಗ್‌ ತೋರಿದ ವರ್ತನೆ ನೆಟ್ಟಿಗರ ಪಿತ್ತ ನೆತ್ತಿಗೆರುವಂತೆ ಮಾಡಿದೆ. ಇದನ್ನೂ ಓದಿ: ಸಿಎಸ್‌ಕೆ ವಿರುದ್ಧ ಆರ್‌ಸಿಬಿ ಗೆದ್ದ ಬಳಿಕ ಕೊಹ್ಲಿ ಟ್ರೋಲ್‌ ಮಾಡಿದವರಿಗೆ ಚಳಿ ಬಿಡಿಸಿದ ನಟಿ

ಆಗಿದ್ದು ಏನು?
ಚೆನ್ನೈ ಸೂಪರ್‌ ಕಿಂಗ್ಸ್‌ (CSK) ವಿರುದ್ಧ 6 ರನ್‌ಗಳಿಂದ ತಂಡ ಗೆದ್ದ ಬಳಿಕ ಅಭಿಮಾನಿಗಳು ಪರಾಗ್‌ ಜೊತೆ ಸೆಲ್ಫಿ ಕ್ಲಿಕ್ಕಿಸಲು ಮುಂದೆ ಬಂದಿದ್ದಾರೆ. ಈ ವೇಳೆ ಪರಾಗ್‌ ಸೆಲ್ಫಿ ಕ್ಲಿಕ್ಕಿಸಿ ಮೊಬೈಲ್‌ ಅನ್ನು ನೇರವಾಗಿ ಕೈಯಲ್ಲಿ ನೀಡದೇ ಎಸೆದಿದ್ದಾರೆ. ಇದನ್ನೂ ಓದಿ: ಬೌಂಡರಿ ಬಳಿ ಮೇಲಕ್ಕೆ ಜಿಗಿದು ಕ್ಯಾಚ್‌ – ಮೆಕ್‌ಗುರ್ಕ್ ಮ್ಯಾಜಿಕ್‌ಗೆ ಅನಿಕೇತ್‌ ಔಟ್‌

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್‌ ಆಗುತ್ತಿದೆ. ಮೊಬೈಲ್‌ ಕೈಯಲ್ಲಿ ಕೊಡಬಹುದಿತ್ತು. ಅದನ್ನು ಯಾಕೆ ಎಸೆಯಬೇಕಿತ್ತು? ಇಷ್ಟೊಂದು ಅಹಂಕಾರ ತೋರಿಸುವ ಅಗತ್ಯ ಏನು? ಇಷ್ಟೊಂದು ಧಿಮಾಕು ಇರುವ ರಿಯಾನ್‌ ಪರಾಗ್‌ ಅವರನ್ನು ಐಪಿಎಲ್‌ನಿಂದಲೇ ಬ್ಯಾನ್‌ ಮಾಡಬೇಕು ಎಂದು ಅಭಿಮಾನಿಗಳು ಸಿಟ್ಟು ಹೊರ ಹಾಕುತ್ತಿದ್ದಾರೆ.

ಗುವಾಹಟಿಯಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ರಾಜಸ್ಥಾನ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 182 ರನ್‌ ಹೊಡೆದಿತ್ತು. ಕಠಿಣ ಸವಾಲನ್ನು ಬೆನ್ನಟ್ಟಿದ ಚೆನ್ನೈ 20 ಓವರ್‌ಗಳಲಲಿ 8 ವಿಕೆಟ್‌ ನಷ್ಟಕ್ಕೆ 176 ರನ್‌ ಹೊಡೆದು ಸೋಲನ್ನು ಒಪ್ಪಿಕೊಂಡಿತು. ಈ ಪಂದ್ಯದಲ್ಲಿ ಪರಾಗ್‌ 37 ರನ್‌(28 ಎಸೆತ, 2 ಬೌಂಡರಿ, 2 ಸಿಕ್ಸ್‌) ಹೊಡೆದಿದ್ದರು.

ಈ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ ನಿಧಾನಗತಿಯ ಓವರ್‌ ಎಸೆದಿದ್ದಕ್ಕೆ ನಾಯಕ ರಿಯಾನ್‌ ಪರಾಗ್‌ಗೆ ಬಿಸಿಸಿಐ 12 ಲಕ್ಷ ರೂ. ದಂಡ ವಿಧಿಸಿದೆ.

 

Share This Article