ಹಿಮಾಚಲ ಪ್ರದೇಶ: ಬಿರುಗಾಳಿಗೆ ಉರುಳಿ ಬಿದ್ದ ಮರ – 6 ಕ್ಕೂ ಹೆಚ್ಚು ಮಂದಿ ಸಾವು

Public TV
1 Min Read

ಶಿಮ್ಲಾ: ಭಾರೀ ಬಿರುಗಾಳಿಗೆ ಮರವೊಂದು ಉರುಳಿ ಬಿದ್ದ ಪರಿಣಾಮ 6 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ಹಿಮಾಚಲ ಪ್ರದೇಶದ ಕುಲ್ಲುದಲ್ಲಿ ನಡೆದಿದೆ.

ಬಿರುಗಾಳಿಗೆ ಮರ ಉರುಳಿ ವಾಹನಗಳು ಮತ್ತು ಆಹಾರ ಮಹಿಳೆಗಳ ಮೇಲೆ ಬಿದ್ದಿದೆ. ಪರಿಣಾಮ ಸಾವು-ನೋವುಗಳಾಗಿವೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಆಹಾರ ಮಳಿಗೆಗಳ ಬಳಿ ವಾಹನಗಳನ್ನು ನಿಲ್ಲಿಸಲಾಗಿತ್ತು. ಮರದ ಕೊಂಬೆಗಳು ಬಿದ್ದಿದ್ದರಿಂದ ಕಾರುಗಳು ಜಖಂಗೊಂಡಿವೆ.

ಈ ವಾರದ ಆರಂಭದಲ್ಲಿ, ಹಿಮಾಚಲ ಪ್ರದೇಶದ ನಾಲ್ಕು ಜಿಲ್ಲೆಗಳಲ್ಲಿ ಮಿಂಚು ಮತ್ತು ಬಿರುಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿತ್ತು. ಯೆಲ್ಲೋ ಅಲರ್ಟ್‌ ಕೂಡ ಘೋಷಣೆ ಮಾಡಿತ್ತು.

ಅಲ್ಲದೇ, ಗುರುವಾರ ಚಂಬಾ, ಕಾಂಗ್ರಾ, ಕುಲ್ಲು ಮತ್ತು ಮಂಡಿ ಜಿಲ್ಲೆಗಳಲ್ಲಿ ಮಿಂಚು ಮತ್ತು ಬಿರುಗಾಳಿಯೊಂದಿಗೆ (ಗಂಟೆಗೆ 40-50 ಕಿ.ಮೀ) ಗುಡುಗು ಸಹಿತ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು.

Share This Article