ಆ ಜೀ ಈ ಜೀ ಗಳ ಮಾತುಕೇಳಿ ರಾಜಕೀಯ ಜೀವನ ಹಾಳು ಮಾಡಿಕೊಂಡ ಯತ್ನಾಳ್: ಕಾಂಗ್ರೆಸ್‌ ಲೇವಡಿ

Public TV
1 Min Read

ಬೆಂಗಳೂರು: ಬಿಜೆಪಿಯಿಂದ 6 ವರ್ಷಗಳ ಕಾಲ ಉಚ್ಚಾಟನೆಯಾಗಿರುವ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ಗೆ (Basanagouda Patil Yatnal) ಕರ್ನಾಟಕ ಕಾಂಗ್ರೆಸ್‌ (Congress) ಟಾಂಗ್‌ ಕೊಟ್ಟಿದೆ.

ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ಕಾಂಗ್ರೆಸ್‌, ಈಗ ‘ಸಂತೋಷ’ ವಾಯಿತೇ? ಆ ಜೀ ಈ ಜೀ ಗಳ ಮಾತುಕೇಳಿ ರಾಜಕೀಯ ಜೀವನ ಹಾಳು ಮಾಡಿಕೊಂಡ ಯತ್ನಾಳ್ ಎಂದು ಕಾಲೆಳೆದಿದೆ. ಇದನ್ನೂ ಓದಿ: ಯತ್ನಾಳ್ ಉಚ್ಚಾಟನೆ ದುಃಖ ತಂದಿದೆ, ಹೈಕಮಾಂಡ್ ನಿರ್ಧಾರಕ್ಕೆ ತಲೆ ಬಾಗುವೆ: ಬೆಲ್ಲದ್

ಭ್ರಷ್ಟ ಅಪ್ಪ ಮಕ್ಕಳ ಸೂಟ್ ಕೇಸ್ ರಾಜಕೀಯಕ್ಕೆ ಬಗ್ಗಿದ ಬಿಜೆಪಿ ಹೈಕಮಾಂಡ್. ನಾಗಪುರದ ಬಿಜೆಪಿಯನ್ನು ಸೋಲಿಸಿದ ಕರ್ನಾಟಕ ಬಿಜೆಪಿ! ಇಂದು ಇಲಿಯಾದ ಯತ್ನಾಳ್! ಎಂದು ಕಾಂಗ್ರೆಸ್‌ ಲೇವಡಿ ಮಾಡಿದೆ.

‘ಹಿಂದೂ ಹುಲಿ ಇಲಿಯಾದ ಕಥೆ’, ‘ಯತ್ನಾಳ್‌ಗೆ ಬಿಲ ತೋಡಿ ಮಣ್ಣು ಮುಚ್ಚಿದ ವಿಜಯೇಂದ್ರ’, ‘ಭ್ರಷ್ಟ ಅಪ್ಪ ಮಕ್ಕಳ ಸೂಟ್‌ಕೇಸ್‌ ರಾಜಕೀಯಕ್ಕೆ ಬಗ್ಗಿದ ಹೈಕಮಾಂಡ್‌’ ಎಂಬ ಬರಹಗಳ ಜೊತೆಗೆ ಯಡಿಯೂರಪ್ಪ, ವಿಜಯೇಂದ್ರ ಮತ್ತು ಯತ್ನಾಳ್‌ ಫೋಟೊಗಳಿರುವ ಪೋಸ್ಟರ್‌ ಅನ್ನು ಕಾಂಗ್ರೆಸ್‌ ಹಂಚಿಕೊಂಡು ಟಾಂಗ್‌ ಕೊಟ್ಟಿದೆ. ಇದನ್ನೂ ಓದಿ: ಬಿಜೆಪಿಯಿಂದ ಬಸನಗೌಡ ಪಾಟೀಲ್‌ ಯತ್ನಾಳ್‌ ಉಚ್ಛಾಟನೆ

Share This Article