ವಾಹನ ತಪಾಸಣೆ ಮಾಡ್ತಿದ್ದ ಪೊಲೀಸರಿಗೆ ಕಾರು ಗುದ್ದಿಸಿ ಪರಾರಿ – ಆರೋಪಿ ಅರೆಸ್ಟ್

Public TV
1 Min Read

ಬೆಂಗಳೂರು: ವಾಹನ ತಪಾಸಣೆ ಮಾಡುತ್ತಿದ್ದ ಪೊಲೀಸರಿಗೆ ಕಾರು ಗುದ್ದಿಸಿ ಪರಾರಿಯಾಗಿದ್ದ ಆರೋಪಿಯನ್ನು ಮಾಗಡಿ ರೋಡ್ (Magadi Road) ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ಮಹಾದೇವ್ ಸ್ವಾಮಿ ಅಲಿಯಾಸ್ ರಾಮಚಾರಿ ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಬಾಲ್ಯದಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೆ: ‘ಮಾಣಿಕ್ಯ’ ನಟಿ ವರಲಕ್ಷ್ಮೀ ಕಣ್ಣೀರು

ಮಾ.3ರ ರಾತ್ರಿ ರಾಜಾಜಿನಗರ (Rajaji Nagar) ವೆಸ್ಟ್ ಆಫ್ ಕಾರ್ಡ್ ರೋಡ್‌ನಲ್ಲಿ ಮಾಗಡಿ ರೋಡ್ ಪೊಲೀಸರು ವಾಹನ ತಪಾಸಣೆ ಮಾಡುತ್ತಿದ್ದರು. ಇದೇ ಸಮಯದಲ್ಲಿ ಟಾಟಾ ಅಲ್ಟ್ರೋಜ್ ಕಾರಿನಲ್ಲಿ ಆರೋಪಿ ಬರುತ್ತಿದ್ದ. ಈ ವೇಳೆ ಪೊಲೀಸ್ ಸಿಬ್ಬಂದಿ ತಪಾಸಣೆಗಾಗಿ ವಾಹನವನ್ನು ಬದಿಗೆ ಹಾಕುವಂತೆ ಸನ್ನೆ ಮಾಡಿದ್ದರು. ಆಗ ಕಾರು ನಿಲ್ಲಿಸದೇ, ಪೊಲೀಸ್ ಸಿಬ್ಬಂದಿ ಹಾಗೂ ಪೊಲೀಸರ ಗ್ಲಾಮರ್ ಬೈಕ್‌ಗೆ ಗುದ್ದಿ, ಕಾರು ಚಾಲಕ ಪರಾರಿಯಾಗಿದ್ದ. ಪರಿಣಾಮ ಪೊಲೀಸ್ ಸಿಬ್ಬಂದಿ ಹೆಚ್.ಸಿ ಧರೆಪ್ಪ ಹಾಗೂ ಪಿಸಿ ಕಾರ್ತಿಕ್ ಗಾಯಗೊಂಡಿದ್ದರು.

ಘಟನೆ ಸಂಬಂಧ ಪೊಲೀಸ್ ಸಿಬ್ಬಂದಿ ಮಾಗಡಿ ರೋಡ್ ಠಾಣೆಯಲ್ಲಿ ಕೊಲೆ ಯತ್ನ ಕೇಸ್ ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಜೊತೆಗೆ ಟಾಟಾ ಅಲ್ಟ್ರೋಜ್ ಕಾರನ್ನು ಜಪ್ತಿ ಮಾಡಿದ್ದಾರೆ.ಇದನ್ನೂ ಓದಿ: ನಗದು ಪತ್ತೆ ಕೇಸ್‌ – ತನಿಖಾ ವರದಿ ಬಿಡುಗಡೆ ಮಾಡಿದ ಸುಪ್ರೀಂ; ಆರೋಪ ನಿರಾಕರಿಸಿದ ನ್ಯಾ. ವರ್ಮಾ

 

Share This Article