ಕೇರಳದ ಕಣ್ಣೂರಿನ ಮಾಡಾಯಿಕಾವು ದೇವಸ್ಥಾನಕ್ಕೆ ದರ್ಶನ್‌ ಭೇಟಿ – ಶತ್ರು ಸಂಹಾರ ಪೂಜೆಗೆ ಮುಂದಾದ್ರಾ ನಟ?

Public TV
1 Min Read

ಮಂಗಳೂರು: ಕೇರಳದ ಪ್ರಸಿದ್ಧ ಕಣ್ಣೂರಿನ ಮಡಾಯಿಕಾವು ಶ್ರೀಭಗವತೀ ದೇವಸ್ಥಾನಕ್ಕೆ ನಟ ದರ್ಶನ್‌ ಭೇಟಿ ನೀಡಿದ್ದಾರೆ. ದೇಗುಲದಲ್ಲಿ ಶತ್ರು ಸಂಹಾರ ಪೂಜೆ ಮಾಡಿಸಿದ್ದಾರೆಂದು ಹೇಳಲಾಗುತ್ತಿದೆ.

ಶತ್ರು ಸಂಹಾರ ಪೂಜೆಗೆ ಪ್ರಸಿದ್ಧವಾದ ಕೇರಳದ ದೇವಸ್ಥಾನ ಇದಾಗಿದೆ. ದೇವಾಲಯಕ್ಕೆ ಪತ್ನಿ ವಿಜಯಲಕ್ಷ್ಮಿ, ಪುತ್ರ, ಧನ್ವರ್‌ ಜೊತೆ ದೇವಸ್ಥಾನಕ್ಕೆ ನಟ ಭೇಟಿ ಭೇಟಿ ನೀಡಿದ್ದಾರೆ.

ದೇವಸ್ಥಾನದಲ್ಲಿ ಶತ್ರು ಸಂಹಾರ ಪೂಜೆ ಮಾಡಿಸಿ ನಟ ದೇವರ ದರ್ಶನ ಪಡೆದಿದ್ದಾರೆ. ಹಲವು ರಾಜಕಾರಣಿಗಳು ಈ ದೇವಸ್ಥಾನಕ್ಕೆ ಬಂದು ಶತ್ರು ಸಂಹಾರ ಪೂಜೆ ಮಾಡಿಸುತ್ತಾರೆ.

ಕೊಲೆ ಪ್ರಕರಣದಲ್ಲಿ ಜೈಲಿಂದ ಹೊರಬಂದ ಬಳಿಕ ನಟ ದರ್ಶನ್‌, ಡೆವಿಲ್‌ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಮೈಸೂರಿನಲ್ಲಿ ಈಗಾಗಲೇ ಚಿತ್ರೀಕರಣ ನಡೆಯುತ್ತಿದೆ.

Share This Article