ನಡು ರಸ್ತೆಯಲ್ಲಿ ಅಡ್ಡಗಟ್ಟಿ ರೌಡಿಶೀಟರ್‌ ಬರ್ಬರ ಹತ್ಯೆ

Public TV
1 Min Read

ಚೆನ್ನೈ: ನಡು ರಸ್ತೆಯಲ್ಲಿ ರೌಡಿಯನ್ನು ಬರ್ಬರವಾಗಿ ಹತ್ಯೆ (Murder) ಮಾಡಿದ ಘಟನೆ ತಮಿಳುನಾಡಿನ (Tamil Nadu) ಈರೋಡ್‌ನಲ್ಲಿ ನಡೆದಿದೆ.

ಜಾನ್ ಅಲಿಯಾಸ್ ಚಾಣಕ್ಯನ್ ಕೊಲೆಯಾದ ರೌಡಿಶೀಟರ್. ಬುಧವಾರ ಬೆಳಗ್ಗೆ ಸೇಲಂನಿಂದ ತಿರುಪುರಕ್ಕೆ ಜಾನ್ ದಂಪತಿ ಕಾರಿನಲ್ಲಿ ತೆರಳುತ್ತಿದ್ದರು.

ಮಧ್ಯಾಹ್ನ ಗೌಡಮ್ ಪಾಳ್ಯಮ್ ಬಳಿ ಹೆದ್ದಾರಿಯಲ್ಲಿ ರೌಡಿಗಳು ದಾಳಿ ನಡೆಸಿದ್ದಾರೆ. ಕಾರನ್ನು ಹಿಂಬಾಲಿಸಿಕೊಂಡು ಬಂದ ನಾಲ್ಕು ಮಂದಿ ಜಾನ್‌ ಕಾರನ್ನು ತಡೆದು ನಿಲ್ಲಿಸಿ ಮನಬಂದಂತೆ ಮಾರಾಕಾಸ್ತ್ರಗಳಿಂದ ಥಳಿಸಿದ್ದಾರೆ.

ಈ ವೇಳೆ ಪತಿಯನ್ನು ಉಳಿಸಿಕೊಳ್ಳಲು ಅಡ್ಡ ಬಂದ ಪತ್ನಿ ಮೇಲು ಸಹ ದಾಳಿ ಮಾಡಿದ್ದಾರೆ. ಜಾನ್‌ ಸ್ಥಳದಲ್ಲೇ ಸಾವನ್ನಪ್ಪಿದ್ದರೆ ಪತ್ನಿ ಗಂಭೀರ ಗಾಯಗೊಂಡಿದ್ದಾರೆ. ಪತ್ನಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ದಾರಿಯಲ್ಲಿ ಹೋಗುತ್ತಿದ್ದವರು ಕೊಲೆ ಮಾಡುತ್ತಿರುವ ದೃಶ್ಯ ಮೊಬೈಲಿನಲ್ಲಿ ಸೆರೆ ಹಿಡಿದಿದ್ದಾರೆ. ಚಿತ್ತೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Share This Article