ಯುರೋಪ್‌ನಿಂದ ಹೆಚ್ಚಿನ ವಾಯು ರಕ್ಷಣೆ ಪಡೆಯಲು ಝೆಲೆನ್ಸ್ಕಿಗೆ ಟ್ರಂಪ್ ಸಹಾಯ: ಶ್ವೇತಭವನ ಮಾಹಿತಿ

Public TV
1 Min Read

– ಝೆಲೆನ್ಸ್ಕಿಗೆ ದೂರವಾಣಿ ಕರೆ ಮಾಡಿ ಜೊತೆ 2 ಗಂಟೆಗೂ ಕಾಲ ಟ್ರಂಪ್‌ ಮಾತುಕತೆ

ವಾಷಿಂಗ್ಟನ್‌: ಯುರೋಪ್‌ನಿಂದ ಹೆಚ್ಚಿನ ವಾಯು ರಕ್ಷಣೆ ಪಡೆಯಲು ಝೆಲೆನ್ಸ್ಕಿಗೆ ಟ್ರಂಪ್ ಸಹಾಯ ಮಾಡುತ್ತಾರೆ ಎಂದು ಶ್ವೇತಭವನ ಹೇಳಿದೆ.

ಬುಧವಾರ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಎರಡು ಗಂಟೆಗಳಿಗೂ ಹೆಚ್ಚು ಕಾಲ ಫೋನ್‌ನಲ್ಲಿ ಮಾತನಾಡಿದ ನಂತರ ಈ ಮಾಹಿತಿ ಹೊರಬಿದ್ದಿದೆ.

ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರೊಂದಿಗೆ ಉತ್ತಮ ದೂರವಾಣಿ ಕರೆ ಮಾಡಿ ಮಾತನಾಡಿದೆ. ರಷ್ಯಾ ಮತ್ತು ಉಕ್ರೇನ್ ದೇಶಗಳ ವಿನಂತಿಗಳು ಮತ್ತು ಅಗತ್ಯ ವಿಷಯದಲ್ಲಿ ಹೊಂದಾಣಿಕೆ ಮಾಡಲು ನಿನ್ನೆ ಅಧ್ಯಕ್ಷ ಪುಟಿನ್ ಅವರೊಂದಿಗೆ ಮಾತನಾಡಿದ್ದೆ. ಅದರ ಆಧಾರದ ಮೇಲೆ ಹೆಚ್ಚಿನ ಚರ್ಚೆ ನಡೆಯಿತು. ನಾವು ತುಂಬಾ ಸರಿಯಾದ ಹಾದಿಯಲ್ಲಿದ್ದೇವೆ. ಚರ್ಚಿಸಿದ ಅಂಶಗಳ ನಿಖರವಾದ ವಿವರಣೆಯನ್ನು ನೀಡಲು ನಾನು ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಮೈಕೆಲ್ ವಾಲ್ಟ್ಜ್ ಅವರಿಗೆ ತಿಳಿಸಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

Share This Article