‘ಕಿಸ್ಸಿಕ್’ ಬೆಡಗಿಗೆ ಬೇಡಿಕೆ- ಬಹುಭಾಷೆಗಳಲ್ಲಿ ಶ್ರೀಲೀಲಾ ಬ್ಯುಸಿ

Public TV
1 Min Read

ನ್ನಡದ ನಟಿ ಶ್ರೀಲೀಲಾ (Sreeleela) ಬಾಲಿವುಡ್‌ನಲ್ಲಿ (Bollywood) ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ‘ಪುಷ್ಪ 2’ ಖ್ಯಾತಿಯ ಶ್ರೀಲೀಲಾ ಬ್ಯುಸಿಯಾಗಿದ್ದಾರೆ. 2025ರಲ್ಲಿ ನಟಿಯ ಬಳಿ ಕೈತುಂಬಾ ಸಿನಿಮಾಗಳಿವೆ. ಇದನ್ನೂ ಓದಿ:ಪಿಜ್ಜಾಗಿಂತ ನಿಮ್ಮ ಸೊಂಟನೇ ಹಾಟ್ ಆಗಿದೆ: ‘ವಜ್ರಕಾಯ’ ಬೆಡಗಿಗೆ ನೆಟ್ಟಿಗನ ಕಾಮೆಂಟ್

ಶ್ರೀಲೀಲಾ ನಟಿಸುತ್ತಿರುವ ಸಿನಿಮಾಗಳು ಗೆಲುತ್ತಿಲ್ಲ. ಹಾಗಂತ ಅವರಿಗೆ ಬೇಡಿಕೆ ಕಮ್ಮಿಯಾಗಿಲ್ಲ. ಅಲ್ಲು ಅರ್ಜುನ್‌ ಜೊತೆ ‘ಕಿಸ್ಸಿಕ್‌’ ಹಾಡಿಗೆ ಹೆಜ್ಜೆ ಹಾಕಿದ್ಮೇಲೆ ಶ್ರೀಲೀಲಾ ಮೇಲಿನ ಕ್ರೇಜ್‌ ಹೆಚ್ಚಾಗಿದೆ. ಹಾಗಾಗಿ ಹಲವು ಅವಕಾಶಗಳು ಅವರನ್ನು ಅರಸಿ ಬರುತ್ತಿವೆ. ಸದ್ಯ ಅನುರಾಗ್ ಬಸು ನಿರ್ದೇಶನದಲ್ಲಿ ಕಾರ್ತಿಕ್ ಆರ್ಯನ್‌ಗೆ (Karthika Aryan) ನಾಯಕಿಯಾಗಿ ಶ್ರೀಲೀಲಾ ಕಾಣಿಸಿಕೊಳ್ತಿದ್ದಾರೆ. ಇದೊಂದು ಮ್ಯೂಸಿಕಲ್ ಲವ್ ಸ್ಟೋರಿ ಕುರಿತಾದ ಸಿನಿಮಾ ಆಗಿದೆ.

ಇನ್ನೂ ಕನ್ನಡದ ‘ಜ್ಯೂನಿಯರ್’ (Junior) ಸಿನಿಮಾದಲ್ಲಿ ಶ್ರೀಲೀಲಾ ನಾಯಕಿಯಾಗಿದ್ದಾರೆ. ಜನಾರ್ದನ ರೆಡ್ಡಿ ಪುತ್ರ ಕಿರೀಟಿ ರೆಡ್ಡಿಗೆ ಶ್ರೀಲೀಲಾ ಜೋಡಿಯಾಗಿದ್ದಾರೆ.

ಸೈಫ್ ಅಲಿ ಖಾನ್ ಪುತ್ರ ಇಬ್ರಾಹಿಂಗೆ (Ibrahim Ali Khan) ಜೋಡಿಯಾಗಿ ಅವರು ಕಾಣಿಸಿಕೊಳ್ತಿದ್ದಾರೆ. ವಿಭಿನ್ನ ಪಾತ್ರಕ್ಕೆ ನಟಿ ಜೀವ ತುಂಬಲಿದ್ದಾರೆ. ಸಿನಿಮಾದ ವರ್ಕ್ ಶಾಪ್‌ಗೆ ಭಾಗಿಯಾಗುತ್ತಿದ್ದಾರೆ. ಜೊತೆಗೆ ಪಾತ್ರಕ್ಕಾಗಿ ತಯಾರಿ ನಡೆಯುತ್ತಿದೆ. ಇದರೊಂದಿಗೆ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳು ಶ್ರೀಲೀಲಾರನ್ನು ಸಂಪರ್ಕಿಸಿ ಸಿನಿಮಾ ಬಗ್ಗೆ ಮಾತುಕತೆ ನಡೆಸುತ್ತಿದೆ.

ಇನ್ನೂ ತಮಿಳಿನಲ್ಲಿ ಸುಧಾ ಕೊಂಗರ ನಿರ್ದೇಶನದಲ್ಲಿ ಅವರು ನಟಿಸುತ್ತಿದ್ದಾರೆ. ಶಿವಕಾರ್ತಿಕೇಯನ್‌ಗೆ (Sivakarthikeyan) ನಾಯಕಿಯಾಗಿ ಕಾಣಿಸಿಕೊಳ್ತಿದ್ದಾರೆ. ನಟನೆಗೆ ಸ್ಕೋಪ್ ಇರುವ ಪಾತ್ರ ಇದಾಗಿದೆ.

ಇನ್ನೂ ಪವನ್ ಕಲ್ಯಾಣ್‌ಗೆ (Pawan Kalyan) ನಾಯಕಿಯಾಗಿ ‘ಉಸ್ತಾದ್ ಭಗತ್ ಸಿಂಗ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿಯೂ ನಟಿಗೆ ಉತ್ತಮ ಪಾತ್ರ ಸಿಕ್ಕಿದೆ.

‘ರಾಬಿನ್‌ಹುಡ್’ ಚಿತ್ರದಲ್ಲಿ ನಿತಿನ್‌ಗೆ (Nithin) 2ನೇ ಬಾರಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಮಾ.28ರಂದು ರಿಲೀಸ್ ಆಗಲಿದೆ. ರವಿತೇಜ ಜೊತೆ ಮತ್ತೊಂದು ಹೊಸ ಸಿನಿಮಾದಲ್ಲಿ ಕಾಣಿಸಿಕೊಳ್ತಿದ್ದಾರೆ. ಕನ್ನಡ, ತೆಲುಗು, ತಮಿಳು, ಬಾಲಿವುಡ್‌ನಲ್ಲಿ ನಟಿಗೆ ಬೇಡಿಕೆ ಹೆಚ್ಚಾಗಿದೆ.

Share This Article