ಇಸ್ರೇಲ್‌ ಭೀಕರ ವಾಯುದಾಳಿ – ಗಾಜಾದಲ್ಲಿ 300ಕ್ಕೂ ಅಧಿಕ ಮಂದಿ ಸಾವು

By
2 Min Read

ನವದೆಹಲಿ: ಕಳೆದ ಜನವರಿ 19ರಂದು ಕದನ ವಿರಾಮ ಘೋಷಣೆಯಾದ ಬಳಿಕ ಮತ್ತೆ ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಆವರಿಸಿದೆ. ಇಂದು ಮುಂಜಾನೆ ಇಸ್ರೇಲ್‌ ಸೇನೆಯು (Israeli military) ಗಾಜಾದ ಮೇಲೆ ನಡೆದ ಭೀಕರ ವೈಮಾನಿಕ ದಾಳಿಯಲ್ಲಿ (Israel AirStrikes) ಕನಿಷ್ಠ 330 ಮಂದಿ ಸಾವನ್ನಪ್ಪಿದ್ದು, 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಬೆಳ್ಳಂ ಬೆಳಗ್ಗೆ ವೈಮಾನಿಕ ದಾಳಿ ನಡೆಸಿದ ಇಸ್ರೇಲ್‌, ಉತ್ತರ ಗಾಜಾ, ಗಾಜಾ ನಗರ ಮತ್ತು ಮಧ್ಯ ಮತ್ತು ದಕ್ಷಿಣ ಗಾಜಾ ಪಟ್ಟಿಯ ದೇರ್ ಅಲ್-ಬಲಾಹ್, ಖಾನ್ ಯೂನಿಸ್ ಮತ್ತು ರಫಾ ಸೇರಿದಂತೆ ಅನೇಕ ಸ್ಥಳಗಳನ್ನು ಧ್ವಂಸಗೊಳಿಸಿದೆ. ಭೀಕರ ವಾಯುದಾಳಿಯಲ್ಲಿ ಮೃತಪಟ್ಟವರ ಪೈಕಿ ಪ್ಯಾಲೆಸ್ತೀನಿನ ಮಕ್ಕಳು, ಮಹಿಳೆಯರು ಮತ್ತು ವೃದ್ಧರು ಹೆಚ್ಚಿನವರು ಎಂದು ಗಾಜಾದ ನಾಗರಿಕ ರಕ್ಷಣಾ ಸಂಸ್ಥೆ ಹೇಳಿದೆ.

ಅಲ್ಲದೇ ಗಾಜಾ ಪಟ್ಟಿಯಲ್ಲಿರುವ ಹಮಾಸ್‌ನ ಆಂತರಿಕ ಭದ್ರತಾ ಸೇವೆಗಳ ಮುಖ್ಯಸ್ಥ ಮಹಮೂದ್ ಅಬು ವತ್ಫಾ ಕೂಡ ಇಸ್ರೇಲ್‌ ದಾಳಿಗೆ ಬಲಿಯಾಗಿದ್ದಾನೆಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಸತತ ಸಿನಿಮಾಗಳ ಸೋಲಿನ ನಡುವೆಯೂ ಸ್ಟಾರ್‌ ನಟನಿಗೆ ಪುರಿ ಜಗನ್ನಾಥ್ ಆ್ಯಕ್ಷನ್ ಕಟ್

ಕದನ ವಿರಾಮ ಘೋಷಣೆಯ ಬಳಿಕ ಒಪ್ಪಂದದ ಪ್ರಕಾರ ಬಾಕಿಯಿರುವ 59 ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಹಮಾಸ್‌ ನಿರಾಕರಿಸಿದ ನಂತರ ಇಸ್ರೇಲ್‌ ದಾಳಿ ನಡೆಸಿರುವುದಾಗಿ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಹೇಳಿದ್ದಾರೆ. ಇದನ್ನೂ ಓದಿ: ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಇಬ್ಬರು ಮಹಿಳೆಯರು ಸೇರಿ ಮೂವರು ಅರೆಸ್ಟ್

ಮೊದಲೇ ಎಚ್ಚರಿಕೆ ನೀಡಿದ್ದ ಇಸ್ರೇಲ್‌”
ದಾಳಿ ನಡೆಸುವುದಕ್ಕೂ ಮುನ್ನವೇ ಇಸ್ರೇಲ್‌ ಎಚ್ಚರಿಸುವ ಕೆಲಸ ಮಾಡಿತ್ತು. ತನ್ನ ಎಕ್ಸ್‌ ಪೋಸ್ಟ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದ ಇಸ್ರೇಲ್‌ ಸೇನೆ, ಜಾಪಟ್ಟಿಯಲ್ಲಿರುವ ಹಮಾಸ್‌ ಭಯೋತ್ಪಾದಕ ಸಂಘಟನೆ ಸೇರಿದ ನೆಲೆಗಳ ಮೇಲೆ ಇಸ್ರೇಲ್‌ ಸೇನೆ ವ್ಯಾಪಕ ದಾಳಿ ನಡೆಸುತ್ತಿದೆ. ಹೀಗಾಗಿ ಗಾಜಾದ ನೆರೆಯ ಶಾಲೆಗಳನ್ನು ಮುಚ್ಚುವಂತೆ ಆದೇಶಿಸುತ್ತಿದೆ ಎಂದು ಎಚ್ಚರಿಕೆ ನೀಡಿತ್ತು. ಇದನ್ನೂ ಓದಿ: ಹೈಕೋರ್ಟ್‌ ಆದೇಶದ ಬೆನ್ನಲ್ಲೇ ಹೆಚ್‍ಡಿಕೆ ಕೇತಗಾನಹಳ್ಳಿ ಜಮೀನು ಒತ್ತುವರಿ ತೆರವು ಕಾರ್ಯಾಚರಣೆ

ಟ್ರಂಪ್‌ ಎಚ್ಚರಿಕೆ:
ಇಸ್ರೇಲ್‌ ದಾಳಿ ವಿಚಾರ ತಿಳಿಯುತ್ತಿದ್ದಂತೆ ಅಮೆರಿಕದ ಶ್ವೇತಭವನ ಪ್ರತಿಕ್ರಿಯಿಸಿದೆ. ಜೊತೆಗೆ ಹಮಾಸ್ ಮತ್ತು ಇರಾನ್ ಬೆಂಬಲಿತ ಹೌತಿ ಬಂಡುಕೋರರು ಸೇರಿದಂತೆ ಇತರ ಭಯೋತ್ಪಾದಕ ಗುಂಪುಗಳು ಬೆಲೆ ತೆರಬೇಕಾಗುತ್ತದೆ ಎಂದು ಟ್ರಂಪ್‌ ಎಚ್ಚರಿಸಿದ್ದಾರೆ.

Share This Article