ಕಾಂಗ್ರೆಸ್ ವಿರುದ್ಧ 60% ಕಮಿಷನ್ Just Loot it ಆರೋಪ: ಬಿಜೆಪಿ ಎಕ್ಸ್ ಖಾತೆಯಲ್ಲಿ ವ್ಯಂಗ್ಯ

Public TV
1 Min Read

ಬೆಂಗಳೂರು: ಬಿಜೆಪಿ ಸರ್ಕಾರ ಅವಧಿಯ 40% ಕಮಿಷನ್ ಆರೋಪದ ಬಗ್ಗೆ ನ್ಯಾ.ನಾಗಮೋಹನ್ ದಾಸ್ ವರದಿ ಕೊಟ್ಟ ಬೆನ್ನಲ್ಲೇ ರಾಜಕೀಯ ಆರೋಪ ಪ್ರತ್ಯಾರೋಪ ಜೋರಾಗ್ತಿದೆ.

ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ 60% ಕಮಿಷನ್ ಆರೋಪದ ಪೋಸ್ಟರ್ ವಿಡಿಯೋ ಬಿಡುಗಡೆ ಮಾಡಿದೆ. ಇದನ್ನೂ ಓದಿ: ತಿಮ್ಮಪ್ಪನ ಸನ್ನಿಧಿಯಲ್ಲಿ ದಾಖಲೆಯ ಕೆಎಂಎಫ್ ತುಪ್ಪ ರವಾನೆ – ಯುಗಾದಿಗಾಗಿ ತುರ್ತು 2 ಸಾವಿರ ಟನ್‌ಗೆ ಡಿಮ್ಯಾಂಡ್

ಎಐ ತಂತ್ರಜ್ಞಾನ ಬಳಸಿ ಸಿಎಂ ಸಿದ್ದರಾಮಯ್ಯ ಸ್ಕೆಚ್ ಇರುವ Just Loot it flat 60% ಕಮಿಷನ್ ಎಂಬ ಪೋಸ್ಟರ್ ವಿಡಿಯೋ ಬಿಡುಗಡೆ ಮಾಡಿದೆ.

ಬಿಜೆಪಿ ಅಧಿಕೃತ ಎಕ್ಸ್ ಖಾತೆಯಲ್ಲಿ 60% ಕಮಿಷನ್ ಆರೋಪ ಮಾಡಿದ್ದು, 40% ಕಮಿಷನ್ ಆರೋಪದ ಆಯೋಗದ ವರದಿಗೆ ತಿರುಗೇಟು ಕೊಟ್ಟಿದೆ. ಆಲ್ ಡೇ.‌ ಆಲ್ ನೈಟ್.. ಜಸ್ಟ್ ಲೂಟ್ ಇಟ್ ಎಂಬ ಸ್ಲೋಗನ್ ಹಾಕಿ ಕಾಂಗ್ರೆಸ್ ವಿರುದ್ಧ 60% ಕಮಿಷನ್ ಆರೋಪ ಮಾಡಿದೆ.

Share This Article