ಮೈಸೂರು| ಚಿನ್ನದ ಸರಕ್ಕಾಗಿ ನೆರೆ ಮನೆಯ ಸ್ನೇಹಿತೆಯನ್ನೇ ಕೊಂದ ಮಹಿಳೆ

By
1 Min Read

ಮೈಸೂರು: ಚಿನ್ನದ ಸರಕ್ಕಾಗಿ ತನ್ನ ಸ್ನೇಹಿತೆಯನ್ನೇ ಮಹಿಳೆ ಕೊಂದ ಘಟನೆ ಮೈಸೂರಿನ ಕೆಸಿ.ಬಡಾವಣೆಯಲ್ಲಿ ನಡೆದಿದೆ.

ಮಾ.5 ರಂದು ನಡೆದ ಘಟನೆ‌ ತಡವಾಗಿ ಬೆಳಕಿಗೆ ಬಂದಿದೆ. ಕೆಸಿ ಬಡಾವಣೆಯ ಸುಲೋಚನಾ (62) ಕೊಲೆಯಾದವರು. ಅದೇ ಬಡವಾಣೆ ನಿವಾಸಿ ಶಕುಂತಲಾ (42) ಕೊಲೆ ಆರೋಪಿ. ಕೊಲೆಯಾದ ಸುಲೋಚನಾ ಪೊಲೀಸ್ ಇಲಾಖೆ ನಿವೃತ್ತ ನೌಕರ ಗಂಗಣ್ಣರ ಪತ್ನಿ.

ಮಾ.5 ರಂದು ಮನೆಗೆ ಬಂದ ಸುಲೋಚನಾರನ್ನು ಉಸಿರುಗಟ್ಟಿಸಿ ಶಕುಂತಲಾ ಕೊಲೆ ಮಾಡಿ ಮೃತದೇಹದ ಮೇಲಿದ್ದ ಚಿನ್ನದ ಸರ ಕಳಚಿ ಕೊಂಡಿದ್ದಳು. ನಂತರ ಪ್ರಜ್ಞೆ ತಪ್ಪಿ ಬಿದ್ದುಹೋದರೆಂದು ಸುತ್ತಲ ಮನೆಯವರನ್ನು ಶಕುಂತಲಾ ನಂಬಿಸಿದ್ದಳು. ನಂತರ ಅನುಮಾನದೊಂದಿಗೆ ಪೊಲೀಸರು ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ. ಇವರಿಬ್ಬರು ಒಂದೇ ಬೀದಿಯ ನಿವಾಸಿಗಳು.

ಶಕುಂತಲಾ ಕುಟುಂಬ ಅಡುಗೆ ಕೆಲಸ ಮಾಡಿಕೊಂಡಿತ್ತು. ಸಾಲದ ಸುಳಿಯಲ್ಲಿ ಸಿಲುಕಿತ್ತು. ತೀರಿಸಲು ಇಂತಹ ಕೃತ್ಯವೆಸಗಿದ್ದಾಳೆ. ಸುಲೋಚನಾ ಸರ ಕದ್ದು 1.5 ಲಕ್ಷಕ್ಕೆ ಶಕುಂತಲಾ ಗಿರವಿ ಇಟ್ಟಿದ್ದಳು. ಮೈಸೂರಿನ ನಜರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article