ಅಮೆರಿಕದ ಜೊತೆ ಮಾತುಕತೆ ಇಲ್ಲ – ಟ್ರಂಪ್‌ಗೆ ಇರಾನ್‌ ತಿರುಗೇಟು

Public TV
1 Min Read

ವಾಷಿಂಗ್ಟನ್‌: ಅಮೆರಿಕದ (USA) ಜೊತೆ ಯಾವುದೇ ಕಾರಣಕ್ಕೂ ಮಾತುಕತೆ ಸಾಧ್ಯವಿಲ್ಲ ಎಂದ ಇರಾನ್‌ನ ಸರ್ವೋಚ್ಚ ನಾಯಕ ಖಮೇನಿ (Ayatollah Ali Khamenei) ತಿರುಗೇಟು ನೀಡಿದ್ದಾರೆ.

ಯಾವುದೇ ಕಾರಣಕ್ಕೂ ಟ್ರಂಪ್ (Donald Trump) ಜೊತೆ ಮಾತುಕತೆ ಸಾಧ್ಯ ಇಲ್ಲ. ಮಾತುಕತೆಗೆ ಆಹ್ವಾನಿಸುವ ಕೆಲ ಅತಿರೇಕಿ ಸರ್ಕಾರಗಳು ಸಮಸ್ಯೆ ಇತ್ಯರ್ಥ ಪಡಿಸಲು ಬಯಸಲ್ಲ. ಬದಲಿಗೆ ನಮ್ಮನ್ನು ಹಿಡಿತದಲ್ಲಿಡಲು, ಅವರ ನಿರೀಕ್ಷೆಗಳನ್ನು ನಮ್ಮ ಮೇಲೆ ಹೇರಲು ಪ್ರಯತ್ನಿಸುತ್ತಾರೆ ಎಂದು ಕಿಡಿಕಾರಿದ್ದಾರೆ.

ಜಾಗತಿಕ ಶತ್ರುಗಳ ಸಂಖ್ಯೆ ಕಡಿಮೆ ಮಾಡಲು ಮುಂದಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಸಾಂಪ್ರದಾಯಿಕ ಎದುರಾಳಿ ಇರಾನ್ (Iran) ಜೊತೆಗೂ ಸಾಫ್ಟ್ ಕಾರ್ನರ್ ಸುಳಿವು ನೀಡಿದ್ದರು.

ಟ್ರಂಪ್ ಇರಾನ್ ಜೊತೆಗಿನ ನ್ಯೂಕ್ಲಿಯರ್ ಒಪ್ಪಂದದಲ್ಲಿ (Nuclear Agreement) ಬದಲಾವಣೆ ತರಲು ಮುಂದಾಗಿದ್ದರು. ಈ ಕುರಿತು ಇರಾನ್ ನಾಯಕರಿಗೆ ಪತ್ರ ಬರೆದಿರುವ ಡೊನಾಲ್ಡ್ ಟ್ರಂಪ್, ಮಾತುಕತೆಗೆ ಒಪ್ಪುವಂತೆ ಇರಾನ್ ನಾಯಕರಲ್ಲಿ ಕೇಳಿಕೊಂಡಿದ್ದರು. ಇದನ್ನೂ ಓದಿ: ಕುಲಭೂಷಣ್‌ ಜಾಧವ್‌ ಕಿಡ್ನ್ಯಾಪ್‌ಗೆ ಸಹಕರಿಸಿದ್ದ ಪಾಕ್‌ ‘ವಿದ್ವಾಂಸ’ ಗುಂಡೇಟಿಗೆ ಬಲಿ

ಸಂದರ್ಶನವೊಂದರಲ್ಲಿ ಮಾತನಾಡಿದ್ದ ಟ್ರಂಪ್, ಇರಾನ್ ಜೊತೆಗಿನ ಪರಮಾಣು ಒಪ್ಪಂದದ ಬಗ್ಗೆ ಮಾತುಕತೆ ನಡೆಯಬೇಕು ಎಂಬುದು ನನ್ನ ನಿಲುವು ಎಂದಿದ್ದರು.

Share This Article