‘ಪುಷ್ಪ 2’ ಬೆಡಗಿ ಶ್ರೀಲೀಲಾಗೆ ಮೆಗಾಸ್ಟಾರ್ ಕಡೆಯಿಂದ ಸ್ಪೆಷಲ್ ಗಿಫ್ಟ್

Public TV
1 Min Read

ನ್ನಡತಿ ಶ್ರೀಲೀಲಾ (Sreeleela) ಸದ್ಯ ಟಾಲಿವುಡ್‌ನಲ್ಲಿ ಬೇಡಿಕೆಯ ನಟಿಯಾಗಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಿರುವ ಶ್ರೀಲೀಲಾಗೆ ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಕಡೆಯಿಂದ ವಿಶೇಷ ಉಡುಗೊರೆ ಸಿಕ್ಕಿದೆ. ಇದನ್ನೂ ಓದಿ:‘ನಾನು ನಿನ್ನ ಪ್ರೀತಿಸುವೆ’ ಎಂದ ನಟಿ- ತನಿಷಾ ಪ್ರೀತಿಯಲ್ಲಿ ಬಿದ್ದಿರೋದು ಪಕ್ಕಾ ಎಂದ ಫ್ಯಾನ್ಸ್

ನಿನ್ನೆ (ಮಾ.8) ಮಹಿಳಾ ದಿನಾಚರಣೆಯ ಪ್ರಯುಕ್ತ ಚಿರಂಜೀವಿ ಅವರು ‘ವಿಶ್ವಂಭರ’ (Vishambhara) ಸಿನಿಮಾದ ಸೆಟ್‌ನಲ್ಲಿದ್ದರು. ಈ ವೇಳೆ, ಸೆಟ್‌ನಲ್ಲಿ ಶ್ರೀಲೀಲಾಗೆ ದುಬಾರಿ ಉಡುಗೊರೆಯೊಂದನ್ನು ಕೊಟ್ಟಿದ್ದಾರೆ. ದುರ್ಗಾ ದೇವಿಯ ಮುಖವಿರುವ ಬೆಳ್ಳಿ ಶಂಖವನ್ನು ನಟಿಗೆ ಗಿಫ್ಟ್ ಆಗಿ ನೀಡಿದ್ದಾರೆ. ಅದಕ್ಕೆ ಶ್ರೀಲೀಲಾ ಕೂಡ ಸೋಶಿಯಲ್ ಮೀಡಿಯಾದಲ್ಲಿ ಚಿರಂಜೀವಿ ಜೊತೆಗಿನ ಫೋಟೋ ಶೇರ್ ಮಾಡಿ ಥ್ಯಾಂಕ್ಯೂ ಎಂದಿದ್ದಾರೆ.

ಇನ್ನೂ ‘ವಿಶ್ವಂಭರ’ ಸಿನಿಮಾ ಸೆಟ್‌ನಲ್ಲಿ ಪಿಂಕ್ ಕಲರ್ ಡ್ರೆಸ್‌ನಲ್ಲಿ ಶ್ರೀಲೀಲಾ ಗ್ಲ್ಯಾಮರಸ್‌ ಆಗಿ ಕಾಣಿಸಿಕೊಂಡಿರೋದು ಚರ್ಚೆಗೆ ಗ್ರಾಸವಾಗಿದೆ. ಅವರು ಕೂಡ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರಾ? ಎಂಬ ಅನುಮಾನ ಅಭಿಮಾನಿಗಳಲ್ಲಿ ಮೂಡಿದೆ. ಈ ಚಿತ್ರವು ಮೇ 9ರಂದು ರಿಲೀಸ್ ಆಗಲಿದ್ದು, ಅಂದು ಶ್ರೀಲೀಲಾ ಇರುವಿಕೆಯ ಬಗ್ಗೆ ಉತ್ತರ ಸಿಗಲಿದೆ.

ಇನ್ನೂ ನಿತಿನ್ ಜೊತೆ ‘ರಾಬಿನ್‌ಹುಡ್’, ಪವನ್ ಕಲ್ಯಾಣ್ ಜೊತೆ ‘ಉಸ್ತಾದ್ ಭಗತ್ ಸಿಂಗ್’, ರವಿತೇಜ ಜೊತೆ ‘ಮಾಸ್ ಜಾತ್ರಾ’, ಬಾಲಿವುಡ್‌ನಲ್ಲಿ ಸೈಫ್ ಅಲಿ ಖಾನ್‌ಗೆ ನಾಯಕಿಯಾಗಿ ಹೊಸ ಸಿನಿಮಾ ಸೇರಿದಂತೆ ಹಲವು ಚಿತ್ರಗಳು ಶ್ರೀಲೀಲಾ ಕೈಯಲ್ಲಿವೆ.

Share This Article