11 ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿದ ತಂದೆ ಅರೆಸ್ಟ್‌

Public TV
1 Min Read

ಲಕ್ನೋ: ತನ್ನ 11 ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಿರುವ ಘಟನೆ ಉತ್ತರ ಪ್ರದೇಶದ ಮಹಾರಾಜ್‌ಗಂಜ್‌ನಲ್ಲಿ (UP Mahrajganj) ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಗುರುವಾರ ರಾತ್ರಿ ಸಂತ್ರಸ್ತೆಯ ತಾಯಿ ತನ್ನ ತವರು ಮನೆಗೆ ಹೋಗಿದ್ದಾಗ ಘಟನೆ ನಡೆದಿದೆ ಎಂದು ಕೊತ್ವಾಲಿ ಪೊಲೀಸ್ ಠಾಣೆಯ (Kotwali Police Station) ಎಸ್‌ಹೆಚ್‌ಒ ಸತ್ಯೇಂದ್ರ ಕುಮಾರ್ ರೈ ತಿಳಿಸಿದ್ದಾರೆ. ದನ್ನೂ ಓದಿ: ಐಶ್ವರ್ಯಗೌಡ ವಂಚನೆ ಕೇಸ್‌ಗೆ ಟ್ವಿಸ್ಟ್ – ವಿನಯ್ ಕುಲಕರ್ಣಿ ಕಾರು ಚಾಲಕನ ವಿಚಾರಣೆ

ತನ್ನ ಮಗಳ ಮೇಲೆ ಅತ್ಯಾಚಾರ ಎಸಗಿರುವುದಲ್ಲದೇ ಯಾರಿಗಾದ್ರೂ ಹೇಳಿದ್ರೆ, ವಿಷ ನೀಡಿ ಸಾಯಿಸುವುದಾಗಿ ಬೆದರಿಕೆ ಸಹ ಹಾಕಿದ್ದಾನೆ. ಆದ್ರೆ ತಾಯಿ ತವರು ಮನೆಯಿಂದ ಬಂದ ಬಳಿಕ ಬಾಲಕಿ ಈ ವಿಷಯ ಹೇಳಿಕೊಂಡಿದ್ದಾಳೆ. ನಂತರ ಬಾಲಕಿ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ದನ್ನೂ ಓದಿ:  ತೇಜಸ್ವಿ ಸೂರ್ಯ, ಶಿವಶ್ರೀ ರಿಸೆಪ್ಷನ್ – ಸಿಎಂ, ಡಿಸಿಎಂ ಸೇರಿದಂತೆ ಗಣ್ಯರಿಂದ ನವದಂಪತಿಗೆ ಶುಭಹಾರೈಕೆ

ಮಹಿಳೆಯ ದೂರಿನ ಆಧಾರದ ಮೇಲೆ, ಆರೋಪಿ ತಂದೆಯನ್ನ ಬಂಧಿಸಲಾಗಿದೆ ಮತ್ತು ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ರೈ ಹೇಳಿದ್ದಾರೆ. ದನ್ನೂ ಓದಿ: ಹಾಸನ| ಪಾಳು ಬಿದ್ದಿದ್ದ ಕಟ್ಟಡ ಕುಸಿತ – ಬೀದಿಬದಿ ವ್ಯಾಪಾರ ಮಾಡ್ತಿದ್ದ ನಾಲ್ವರು ದುರ್ಮರಣ

Share This Article