ರಂಜಾನ್ ವೇಳೆ ಎನರ್ಜಿ ಡ್ರಿಂಕ್ ಕುಡಿದಿದ್ದಕ್ಕೆ ಆಕ್ರೋಶ – ಶಮಿಯನ್ನು ಕ್ರಿಮಿನಲ್ ಎಂದ ಮುಸ್ಲಿಂ ಧರ್ಮಗುರು

By
2 Min Read

ನವದೆಹಲಿ: ರಂಜಾನ್ (Ramzan) ಉಪವಾಸದ ಹೊತ್ತಲ್ಲಿ ಉಪವಾಸ ಮಾಡದೇ ಎನರ್ಜಿ ಡ್ರಿಂಕ್ ಕುಡಿದು ಕ್ರಿಕೆಟಿಗ ಶಮಿ (Mohammed Shami) ತಪ್ಪು ಸಂದೇಶ ನೀಡುತ್ತಿದ್ದಾರೆ, ಆತ ಕ್ರಿಮಿನಲ್ ಎಂದು ಅಖಿಲಭಾರತ ಮುಸ್ಲಿಂ ಜಮಾತ್ ಅಧ್ಯಕ್ಷ ಮೌಲಾನಾ ಶಹಬುದ್ದೀನ್ ರಜ್ವಿ ಬರೆಲ್ವಿ (Maulana Shahabuddin Razvi Bareilvi ) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಇದೀಗ ಕ್ರಿಕೆಟ್ ವಿಚಾರದಲ್ಲಿಯೂ ಧರ್ಮ ದಂಗಲ್ ನಡೆಯುತ್ತಿದೆ. ಆಸ್ಟ್ರೇಲಿಯಾ ವಿರುದ್ಧದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್‌ಪಂದ್ಯದಲ್ಲಿ ಮೊಹ್ಮದ್ ಶಮಿ, ರೋಜಾ (ಉಪವಾಸ) ಮಾಡದೇ ಎನರ್ಜಿ ಡ್ರಿಂಕ್ ಕುಡಿದಿದ್ದರು. ರಂಜಾನ್ ತಿಂಗಳಲ್ಲಿ ಶಮಿ ರೋಜಾ ಮಾಡುತ್ತಿಲ್ಲ. ಹೀಗಾಗಿ ಆತ ಕ್ರಿಮಿನಲ್. ರೋಜಾ ನಿಯಮ ಪಾಲನೆ ಮಾಡದೇ ಶಮಿ ಅಪರಾಧ ಎಸಗುವ ಮೂಲಕ ಜನರಿಗೆ ತಪ್ಪು ಸಂದೇಶ ರವಾನಿಸಿದ್ದಾರೆ. ಅವರು ಹಾಗೇ ಮಾಡಬಾರದಿತ್ತು. ಇಸ್ಲಾಮಿಕ್ ಕಾನೂನು ದೃಷ್ಟಿಯಲ್ಲಿ ಆತ ಅಪರಾಧಿ. ದೇವರಿಗೆ ಉತ್ತರಿಸಬೇಕು ಎಂದು ಕಿಡಿಕಾರಿದ್ದಾರೆ.ಇದನ್ನೂ ಓದಿ:ರವಿ ಗಣಿಗ ಹೇಳಿಕೆಗೆ ತಿರುಗೇಟು- ರಶ್ಮಿಕಾ ಮಂದಣ್ಣ ಪರ ರಮ್ಯಾ ಬ್ಯಾಟಿಂಗ್

ಮುಸ್ಲಿಂರ ಕಡ್ಡಾಯ ಕರ್ತವ್ಯಗಳಲ್ಲಿ ರೋಜಾ ಕೂಡ ಒಂದು. ಅದನ್ನು ಪಾಲಿಸದವರು ಅಪರಾಧಿಗಳಾಗುತ್ತಾರೆ. ಶಮಿ ರೋಜಾ ಪಾಲಿಸದೇ ಅಪರಾಧ ಮಾಡಿದ್ದಾರೆ. ಆತ ಮಾಡಿದ ತಪ್ಪಿಗೆ ಅಲ್ಲಾನ ಬಳಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.

ಮೌಲಾನಾ ಶಮಿ ವಿರುದ್ಧ ಕಿಡಿಕಾರಿರುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಮೌಲಾನಾ ಹೇಳಿಕೆ ವಿಚಾರವಾಗಿ ಪರ ವಿರೋಧ ಚರ್ಚೆಗಳು ನಡೆದಿವೆ. ಎನ್‌ಸಿಪಿಯ ರೋಹಿತ್ ಪವಾರ್, ಮೌಲಾನಾ ಹೇಳಿಕೆ ಸರಿಯಲ್ಲ. ಕ್ರೀಡೆಯಲ್ಲಿ ಧರ್ಮವನ್ನು ಎಳೆದು ತರಬಾರದು ಎಂದಿದ್ದಾರೆ.ಇದನ್ನೂ ಓದಿ:ಕರ್ನಾಟಕ, ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಉತ್ತಮ – ಬೆನ್ನು ತಟ್ಟಿಕೊಂಡ ಪರಮೇಶ್ವರ್

 

Share This Article