ಮಲ್ಟಿಪ್ಲೆಕ್ಸ್‌ಗಳಿಗೆ ಮೂಗುದಾರ ಹಾಕಲು ನಿಯಮ ಜಾರಿ: ಪರಮೇಶ್ವರ್

Public TV
1 Min Read

ಬೆಂಗಳೂರು: ಮನಸೋ ಇಚ್ಛೆ ಸಿನಿಮಾ ಟಿಕೆಟ್ ದರ, ತಿಂಡಿ-ತಿನಿಸು ದರ ನಿಗದಿ ಮಾಡುವ ಮಲ್ಟಿಪ್ಲೆಕ್ಸ್‌ಗಳಿಗೆ ಮೂಗುದಾರ ಹಾಕಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಶೀಘ್ರವೇ ಇದಕ್ಕಾಗಿ ಪ್ರತ್ಯೇಕ ನಿಯಮ ಜಾರಿ ಮಾಡುವುದಾಗಿ ಗೃಹ ಸಚಿವ ಪರಮೇಶ್ವರ್ (Parameshwar) ತಿಳಿಸಿದರು.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್‌ನ ಗೋವಿಂದ್ ರಾಜು ಅವರು ಪ್ರಶ್ನಿಸಿ, ಮಲ್ಟಿಪ್ಲೆಕ್ಸ್‌ಗಳಲ್ಲಿ ಒಂದೊಂದು ಸಿನಿಮಾಗೆ ಒಂದೊಂದು ದರ ಇದೆ. ಕನ್ನಡ ಸಿನಿಮಾಗೆ ಕಡಿಮೆ ಹಣ ಇರುತ್ತದೆ. ಬೇರೆ ಭಾಷೆಯ ಸಿನಿಮಾಗೆ 500, 600 ರೂ. ಟಿಕೆಟ್ ದರ ತೆಗೆದುಕೊಳ್ಳುತ್ತಾರೆ. ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಟಿಕೆಟ್ ದರ ಏಕರೂಪವಾಗಿ ನಿಗದಿಯಾಗಿಲ್ಲ. ಎಲ್ಲಾ ಸಿನಿಮಾ ಟಿಕೆಟ್ ದರ ಒಂದೇ ರೀತಿ ಇರಬೇಕು. ಮಲ್ಟಿಪ್ಲೆಕ್ಸ್ ಅವರು ಮನಸೋ ಇಚ್ಛೆ ಸಿನಿಮಾ ಟಿಕೆಟ್ ನಿಗದಿ ಮಾಡುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: MSIL ಮಳಿಗೆ ಹರಾಜು ಮೂಲಕ ಮಾರಾಟ ಇಲ್ಲ: ತಿಮ್ಮಾಪುರ್

ಗೃಹ ಸಚಿವ ಪರಮೇಶ್ವರ್ ಅವರು ಉತ್ತರಿಸಿ, ಶೀಘ್ರವೇ ಇದಕ್ಕಾಗಿ ಪ್ರತ್ಯೇಕ ನಿಯಮ ಜಾರಿ ಮಾಡುವುದಾಗಿ ತಿಳಿಸಿದರು. ಇದನ್ನೂ ಓದಿ: ಅಪಾಯವಿದೆ ಎಚ್ಚರಿಕೆ ಅಂದಳೇಕೆ ರಾಮಾಚಾರಿಯ ತಂಗಿ?

Share This Article