ನಟಿ ಪ್ರಮೀಳಾ ಜೋಷಾಯ್ ಹುಟ್ಟುಹಬ್ಬದಲ್ಲಿ ಸ್ಯಾಂಡಲ್‌ವುಡ್ ನಟಿಯರು

Public TV
1 Min Read

ನ್ನಡ ಚಿತ್ರರಂಗದ ಹಿರಿಯ ನಟಿ ಪ್ರಮೀಳಾ ಜೋಷಾಯ್ (Pramila Joshai) ಹುಟ್ಟುಹಬ್ಬಕ್ಕೆ ಮಗಳು ಮೇಘನಾ ರಾಜ್ (Meghana Raj) ಸರ್ಪ್ರೈಸ್ ಕೊಟ್ಟಿದ್ದಾರೆ. ನಟಿಯ ಬರ್ತ್‌ಡೇ ಸ್ಯಾಂಡಲ್‌ವುಡ್ ನಟಿಯರು ಭಾಗಿಯಾಗಿ ಶುಭಕೋರಿದ್ದಾರೆ. ಇದನ್ನೂ ಓದಿ:‘ಮಾಣಿಕ್ಯ’ ಸಿನಿಮಾ ನಟಿ ರನ್ಯಾ ರಾವ್ ಫ್ಲಾಟ್‌ ಮೇಲೆ ದಾಳಿ – ಕೋಟಿ ಕೋಟಿ ಮೌಲ್ಯದ ಚಿನ್ನ ವಶ

ಮೇಘನಾ ರಾಜ್ ಅವರ ಹೊಸ ಮನೆಯಲ್ಲಿ ತಾಯಿ ಪ್ರಮೀಳಾ ಬರ್ತ್‌ಡೇ ಪಾರ್ಟಿ ಆಯೋಜಿಸಿದ್ದಾರೆ. ಅವರ ಹುಟ್ಟುಹಬ್ಬಕ್ಕೆ ರಕ್ಷಿತಾ ಪ್ರೇಮ್, ಅಮೂಲ್ಯ, ಪ್ರಿಯಾಂಕಾ ಉಪೇಂದ್ರ, ಶ್ರುತಿ, ಮಾಳವಿಕಾ, ಸುಧಾರಾಣಿ, ಮಾಲಾಶ್ರೀ, ‘ಕಾಟೇರ’ ನಟಿ ಆರಾಧನಾ, ವಿನಯಾ ಪ್ರಸಾದ್‌, ಉಮಾಶ್ರೀ, ಜಯಮಾಲಾ ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ.

ತಾಯಿಯ ಆಪ್ತರಾದ ನಟಿಯರಿಗೆ ಮೇಘನಾ ರಾಜ್ ಬರ್ತ್‌ಡೇಗೆ ಆಹ್ವಾನ ನೀಡಿ ಸರ್ಪ್ರೈಸ್‌ ನೀಡಿದ್ದಾರೆ. ಮನೆಯಲ್ಲಿ ಸರಳವಾಗಿ ಬರ್ತ್‌ಡೇ ಪಾರ್ಟಿ ಆಚರಿಸಿದ್ದಾರೆ. ಇದೀಗ ಸ್ಯಾಂಡಲ್‌ವುಡ್ ನಟಿಯರ ಸೋಶಿಯಲ್‌ ಮೀಡಿಯಾದಲ್ಲಿ ಫೋಟೋಗಳು ವೈರಲ್ ಆಗುತ್ತಿದೆ.

ಪ್ರಮೀಳಾ ಜೋಷಾಯ್‌ ಅವರು ಕಳೆದ 30 ವರ್ಷಗಳಿಂದ ಸಿನಿಮಾದಲ್ಲಿ ನಟಿಸುತ್ತಾ ಸಕ್ರಿಯರಾಗಿದ್ದಾರೆ. ಇನ್ನೂ ಮೇಘನಾ ರಾಜ್ ಅವರು ‘ತತ್ಸಮ ತದ್ಬವ’ ಎಂಬ ಸಿನಿಮಾ 2023ರಲ್ಲಿ ರಿಲೀಸ್ ಆಗಿತ್ತು. ಇದೀಗ ಅವರು ಕನ್ನಡ ಮತ್ತು ಮಲಯಾಳಂ ಸಿನಿಮಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ.

Share This Article