ಯಶ್, ಸುದೀಪ್ ಬಂದ್ರೆ ಸಮಸ್ಯೆ ಆಗುತ್ತದೆ: ಸಾಧುಕೋಕಿಲ

Public TV
2 Min Read

16ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ (16th Bengaluru Film Festival) ಮಾರ್ಚ್‌ 1ರಂದು  ಅದ್ಧೂರಿಯಾಗಿ ಚಾಲನೆ ನೀಡಿದ್ದ ವೇಳೆ, ಡಿಸಿಎಂ ಡಿಕೆಶಿ ಅವರು ಕನ್ನಡದ ನಟರಿಗೆ ನೆಟ್ಟು ಬೋಲ್ಟು ಟೈಟ್ ಮಾಡ್ತೀನಿ ಎಂದು ಆಡಿದ್ದ ಮಾತು ಚರ್ಚೆಗೆ ಗ್ರಾಸವಾಗಿದೆ. ಈ ಬೆನ್ನಲ್ಲೇ ಸ್ಯಾಂಡಲ್‌ವುಡ್ ನಟರಿಗೆ ಚಲನಚಿತ್ರೋತ್ಸವ ಆಹ್ವಾನ ನೀಡಿಲ್ವಾ? ಎಂಬ ಆರೋಪಕ್ಕೆ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧುಕೋಕಿಲ ಪ್ರತಿಕ್ರಿಯೆ ನೀಡಿದ್ದಾರೆ. ಯಶ್ (Yash), ಸುದೀಪ್ ಬಂದರೆ ಪ್ರೋಟೋಕೋಲ್ ಸಮಸ್ಯೆ ಆಗುತ್ತದೆ ಎಂದಿದ್ದಾರೆ.

ಕೆಲವರಿಗೆ ಚಲನಚಿತ್ರೋತ್ಸವದ ಇನ್ವಿಟೇಶನ್ ಹೋಗಿಲ್ಲದೇ ಇರಬಹುದು. ಕೆಲವರಿಗೆ ಮಿಸ್ ಆಗಿರಬಹುದು. ಇನ್ನೂ ಕೆಲವರಿಗೆ ಕಳುಸಿರುವ ತಡವಾಗಿ ರೀಚ್ ಆಗಿರಬಹುದು. ಒಟ್ನಲ್ಲಿ ಎಲ್ಲರಿಗೂ ಇನ್ವಿಟೇಶನ್ ಕಳುಹಿಸಿದ್ದೇನೆ. ದೊಡ್ಡ ದೊಡ್ಡ ಕಲಾವಿದರು ಬಂದಾಗ ಪ್ರೋಟೋಕೋಲ್ ಸಮಸ್ಯೆ ಆಗುತ್ತದೆ. ಈಗ ಯಶ್, ಸುದೀಪ್, ದರ್ಶನ್ ಅವರೇ ಕಾರ್ಯಕ್ರಮಕ್ಕೆ ಬಂದ್ರೂ ಅಂದುಕೊಳ್ಳಿ ಹಾಗೆ ನಿಭಾಹಿಸಬೇಕಲ್ವಾ? ಅದು ವಿಧಾನಸಭೆ ಮುಂದೆ ನಡೆಯುತ್ತಿರೋದು ಸಿಎಂ ಬರುವತನಕವೂ ಒಳಗೆ ಬರೋಕೆ ಕಷ್ಟ ಆಗಬಹದು ಎಂದು ಸಾಧುಕೋಕಿಲ ಸಮಜಾಯಿಸಿ ಕೊಟ್ಟಿದ್ದಾರೆ. ಇನ್ನೂ ಈ ವೇಳೆ, ಡಿಕೆಶಿ ಸಿನಿಮಾ ರಂಗದವರು ನಮ್ಮವರು ಅಂತ ಆ ರೀತಿ ಮಾತಾಡಿದ್ದಾರೆ ಅಷ್ಟೇ ಎಂದು ಡಿಸಿಎಂ ಪರ ಸಾಧುಕೋಕಿಲ (Sadhukokila) ಬ್ಯಾಟ್ ಬೀಸಿದ್ದಾರೆ.

ಇನ್ನೂ ಚಲನಚಿತ್ರೋತ್ಸವದ ಆಹ್ವಾನ ಪತ್ರಿಕೆ, ಯಾವ ದಿನಾಂಕದಂದು ನೀಡಲಾಗಿದೆ ಎಂಬ ಮಾಹಿತಿ ಇದೆ. ಜೊತೆಗೆ ಯಾರು ಯಾರು ಆಹ್ವಾನ ಪತ್ರಿಕೆಯನ್ನು ವಾಪಸ್ ಮಾಡಿದ್ದಾರೆ. ಯಾವ ಕಾರಣಕ್ಕೆ ಕೆಲವರಿಗೆ ಆಹ್ವಾನ ಪತ್ರಿಕೆ ನೀಡಲಾಗಿಲ್ಲ ಎಂಬ ಮಾಹಿತಿ ಸಹ ಪಟ್ಟಿಯಲ್ಲಿದೆ. ಪಟ್ಟಿಯಲ್ಲಿ ಕನ್ನಡ ಚಿತ್ರರಂಗದ ಬಹುತೇಕ ಎಲ್ಲ ಪ್ರಮುಖ ನಟ, ನಟಿ ಮತ್ತು ನಿರ್ದೇಶಕರುಗಳ ಹೆಸರಿದೆ. ಸುದೀಪ್ ದರ್ಶನ್, ಗಣೇಶ್, ಡಾಲಿ, ಚಿಕ್ಕಣ್ಣ, ಹಲವಾರು ಮಂದಿ ಹಿರಿಯ ಮತ್ತು ಹೊಸ ನಟಿಯರ ಹೆಸರುಗಳು ಸಹ ಪಟ್ಟಿಯಲ್ಲಿವೆ.

ಡಾಲಿ ಧನಂಜಯ ಮನೆ ಬದಲಿಸಿದ್ದ ಕಾರಣ ಅವರಿಗೆ ನೀಡಲಾಗಿಲ್ಲ ಎಂದು ಪಟ್ಟಿಯಲ್ಲಿದೆ. ಮಾನ್ವಿತಾ, ಆಹ್ವಾನವನ್ನು ವಾಪಸ್ ಕಳಿಸಿದ್ದಾರೆ. ಫೋನ್ ರಿಸೀವ್ ಮಾಡಿಲ್ಲ ಎಂದು ಪಟ್ಟಿಯಲ್ಲಿದೆ. ನಟ ಚಿಕ್ಕಣ್ಣ ಸಹ ಆಹ್ವಾನವನ್ನು ನಿರಾಕರಿಸಿದ್ದಾರೆ ಎಂಬ ಒಕ್ಕಣೆ ಪಟ್ಟಿಯಲ್ಲಿದೆ. ಧ್ರುವ ಸರ್ಜಾ, ರವಿಚಂದ್ರನ್, ಶ್ರೀನಾಥ್, ಸುಧಾರಾಣಿ, ಮಾಲಾಶ್ರಿ, ಅನುರಾಧಾ, ಮಾಳವಿಕಾ ಅವಿನಾಶ್, ಅವಿನಾಶ್, ಡಿಂಗ್ರಿ ನಾಗರಾಜ್, ನಿಶ್ವಿಕಾ ನಾಯ್ಡು, ಪೂಜಾ ಗಾಂಧಿ, ಅರ್ಜುನ್ ಜನ್ಯ, ಗಿರಿಜಾ ಲೋಕೇಶ್, ಸೃಜನ್ ಲೋಕೇಶ್, ಜಯಂತ್ ಕಾಯ್ಕಿಣಿ, ರಮೇಶ್ ಅರವಿಂದ್, ಟಿಎನ್ ಸೀತಾರಾಮ್, ಸುರೇಶ್ ಹಬ್ಳೀಕರ್, ಭಾರತಿ ವಿಷ್ಣುವರ್ಧನ್, ಅನಿರುದ್ಧ್, ಉಮಾಶ್ರೀ, ಪದ್ಮಾ ವಾಸಂತಿ, ಮುಖ್ಯಮಂತ್ರಿ ಚಂದ್ರು ಹೀಗೆ ಹಲವಾರು ನಟ ನಟಿಯರಿಗೆ ಆಹ್ವಾನ ಪತ್ರಿಕೆ ವಿತರಣೆ ಮಾಡಲಾಗಿದೆ.

Share This Article