ಮುದ್ದಿನ ಬೆಕ್ಕು ಸಾವು – ಮೃತದೇಹದ ಜೊತೆ 2 ದಿನ ಕಳೆದು ಮಹಿಳೆ ನೇಣಿಗೆ ಶರಣು

Public TV
1 Min Read

ಲಕ್ನೋ: ಮುದ್ದಿನ ಬೆಕ್ಕು ಸಾವಿನಿಂದ ಕಂಗೆಟ್ಟು, ಎರಡು ದಿನ ಮೃತದೇಹದ ಜೊತೆಗೇ ಕಾಲ ಕಳೆದಿದ್ದ ಮಹಿಳೆ ಮೂರನೇ ದಿನ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ನಡೆದಿದೆ.

ಅಮ್ರೋಹದ ಹಸನ್‌ಪುರ ನಿವಾಸಿ 32 ವರ್ಷದ ಪೂಜಾ ಮೃತ ಮಹಿಳೆ. ಎಂಟು ವರ್ಷಗಳ ಹಿಂದೆ ಪೂಜಾ ದೆಹಲಿಯ ವ್ಯಕ್ತಿಯೊಂದಿಗೆ ವಿವಾಹವಾಗಿದ್ದರು. ಎರಡು ವರ್ಷ ಸಂಸಾರ ನಡೆಸಿ ವಿಚ್ಛೇದನ ಪಡೆದಿದ್ದರು. ಬಳಿಕ ತಾಯಿ ಗಜ್ರಾ ದೇವಿಯೊಂದಿಗೆ ವಾಸವಾಗಿದ್ದರು.

ಒಂಟಿತನವನ್ನು ನಿಭಾಯಿಸಲು ಪೂಜಾ ಬೆಕ್ಕೊಂದನ್ನು ಸಾಕಿಕೊಂಡಿದ್ದರು. ಬೆಕ್ಕು ಸಾವಿಗೀಡಾದಾಗ ತುಂಬಾ ದುಃಖಿತರಾಗಿದ್ದರು. ಆಕೆಯ ತಾಯಿ ಪ್ರಾಣಿಯನ್ನು ಹೂಳಲು ಸೂಚಿಸಿದಾಗ, ಪೂಜಾ ನಿರಾಕರಿಸಿದ್ದಳು. ಅದು ಮತ್ತೆ ಬದುಕಿ ಬರುತ್ತದೆ ಎಂದು ತಾಯಿ ಜೊತೆ ವಾದಿಸಿದ್ದಳು. ಪೂಜಾ ಎರಡು ದಿನ ಬೆಕ್ಕಿನ ಮೃತದೇಹದ ಜೊತೆ ಕಾಲ ಕಳೆದಿದ್ದಳು. ಕೊನೆಗೆ ಅದು ಬದುಕಿ ಬರಲಿಲ್ಲ ಎಂದು ದುಃಖಿಸಿ ತಾನು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ತನ್ನ ಕೋಣೆಯಲ್ಲಿ ಪೂಜೆ ನೇಣಿಗೆ ಶರಣಾದಳು. ಆಕೆ ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲೇ ಬೆಕ್ಕಿನ ಮೃತದೇಹವು ಇತ್ತು. ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

Share This Article