ಕಟೀಲು ದುರ್ಗಾಪರಮೇಶ್ವರಿ ದರ್ಶನ ಪಡೆದ ಶಿಲ್ಪಾ ಶೆಟ್ಟಿ

Public TV
1 Min Read

ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ (Shilpa Shetty) ಅವರು ಮಂಗಳೂರಿನ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿದ್ದಾರೆ. ಇದನ್ನೂ ಓದಿ:ರಾಜಮೌಳಿ ಮೇಲೆ ಗಂಭೀರ ಆರೋಪ : ನಿರ್ಮಾಪಕ ಆತ್ಮಹತ್ಯೆ

ಕುಟುಂಬದೊಂದಿಗೆ ಶ್ರೀ ದುರ್ಗಾಪರಮೇಶ್ವರಿ ಅಮ್ಮನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಶಿಲ್ಪಾ ಶೆಟ್ಟಿಯವರ ಮಗ, ಮಗಳು, ತಾಯಿ, ತಂಗಿ ನಟಿ ಶಮಿತಾ ಶೆಟ್ಟಿ ಜೊತೆ ಬಂದು ಕಟೀಲು ದೇವಿಯ ದರ್ಶನ ಪಡೆದು ಮಲ್ಲಿಗೆ ಹೂವು ಹರಕೆ ರೂಪದಲ್ಲಿ ದೇವಿಗೆ ನೀಡಿದ್ದಾರೆ. ಕಟೀಲು ಪರಿಸರದ ಮೊದಲಾಡಿಗುತ್ತುನಲ್ಲಿ ಮೂಲ ಮನೆ ಹೊಂದಿರುವ ಶಿಲ್ಪಾ ಶೆಟ್ಟಿ ಆಗಾಗ ಕಟೀಲು ದೇವಸ್ಥಾನಕ್ಕೆ ಭೇಟಿ ನೀಡುತ್ತಿರುತ್ತಾರೆ.

ಅಂದಹಾಗೆ, ನಟಿ ಶಿಲ್ಪಾ ಶೆಟ್ಟಿ ಅವರು ಡೈರೆಕ್ಟರ್ ಪ್ರೇಮ್ ಮತ್ತು ಧ್ರುವ ಸರ್ಜಾ ನಟನೆಯ ‘ಕೆಡಿ’ (KD Film) ಸಿನಿಮಾದಲ್ಲಿ ಪವರ್‌ಫುಲ್ ಪಾತ್ರದಲ್ಲಿ ನಟಿಸಿದ್ದಾರೆ. ಹಲವು ವರ್ಷಗಳ ಬಳಿಕ ಈ ಚಿತ್ರದ ಮೂಲಕ ಅವರು ಕಮ್‌ಬ್ಯಾಕ್ ಆಗುತ್ತಿದ್ದಾರೆ. ಸದ್ಯದಲ್ಲೇ ಈ ಸಿನಿಮಾ ರಿಲೀಸ್‌ ಆಗಲಿದೆ.

Share This Article