ಮಂತ್ರಾಲಯಕ್ಕೆ ಶಿವಣ್ಣ ಭೇಟಿ – ರಾಯರ ವೃಂದಾವನಕ್ಕೆ ವಿಶೇಷ ಪೂಜೆ

By
0 Min Read

ರಾಯಚೂರು: ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠಕ್ಕೆ ನಟ ಶಿವರಾಜಕುಮಾರ್ ಕುಟುಂಬ ಸಹಿತರಾಗಿ ಭೇಟಿ ನೀಡಿದ್ದಾರೆ.

ಪತ್ನಿ ಗೀತಾ ಜೊತೆ ರಾಯರ ವೃಂದಾವನ ದರ್ಶನ ಪಡೆದು, ಬಳಿಕ ರಾಯರ ವೃಂದಾವನಕ್ಕೆ ಶಿವಣ್ಣ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಶ್ರೀಗಳಿಂದ ಆಶಿರ್ವಚನ ಪಡೆದಿದ್ದಾರೆ.

ರಾಯರ ಅನುಗ್ರಹದ ಬಗ್ಗೆ ಶಿವಣ್ಣ ಶ್ರೀಗಳೊಂದಿಗೆ ಮೆಲಕು ಹಾಕಿದರು. ಅಮೆರಿಕದಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದ ಮೇಲೆ ಮೊದಲ ಬಾರಿಗೆ ಮಂತ್ರಾಲಯಕ್ಕೆ ಭೇಟಿ ಅವರು ಭೇಟಿ ನೀಡಿದ್ದಾರೆ.

Share This Article