ಹೆಚ್‌ಡಿಕೆ ಮೇಲೆ ನಮ್ಮ ಸರ್ಕಾರ ರಾಜಕೀಯ ದ್ವೇಷ ಮಾಡ್ತಿಲ್ಲ – ಚೆಲುವರಾಯಸ್ವಾಮಿ

Public TV
1 Min Read

ಬೆಂಗಳೂರು: ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಮೇಲೆ ನಮ್ಮ ಸರ್ಕಾರ ರಾಜಕೀಯ ದ್ವೇಷ ಮಾಡುತ್ತಿಲ್ಲ ಎಂದು ಸಚಿವ ಚೆಲುವರಾಯಸ್ವಾಮಿ (Chaluvarayaswamy) ತಿರುಗೇಟು ಕೊಟ್ಟಿದ್ದಾರೆ.ಇದನ್ನೂ ಓದಿ: ಮುಡಾ ಅಕ್ರಮ ಆಗಿರೋದು ಬಿಜೆಪಿ ಅವಧಿಯಲ್ಲಿ ಅವರ ಮೇಲೆ ಕ್ರಮ ಆಗಲಿ: ಚಲುವರಾಯಸ್ವಾಮಿ

ಕೇತಗಾನಹಳ್ಳಿ ಜಮೀನು ಸರ್ವೇ ರಾಜಕೀಯ ಪ್ರೇರಿತ ಎಂಬ ಕುಮಾರಸ್ವಾಮಿ ಆರೋಪಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕುಮಾರಸ್ವಾಮಿ ಕೇತಗಾನಹಳ್ಳಿ ಜಮೀನು ಸರ್ವೇ ಕೋರ್ಟ್ ಆದೇಶದ ಮೇರೆಗೆ ನಡೆಯುತ್ತಿದೆ. ಸರ್ಕಾರ ಉದ್ದೇಶಪೂರ್ವಕವಾಗಿ ಮಾಡ್ತಿರೋದಲ್ಲ. ಅಧಿಕಾರ ದುರ್ಬಳಕೆ ಮಾಡಿರುವುದು ಕುಮಾರಸ್ವಾಮಿಯವರು, ಸರ್ಕಾರವಲ್ಲ. ಜಮೀನು ಸರ್ವೇ ಸರ್ಕಾರ ಮಾಡುತ್ತಿಲ್ಲ. ಕೋರ್ಟ್ ನಿರ್ದೇಶನದ ಮೇಲೆ ಆಗುತ್ತಿದೆ. ಹಾಗಾದ್ರೆ ಕೋರ್ಟ್ ಸರ್ವೇ ಮಾಡಿ ಎಂದು ಹೇಳಿರುವುದು ರಾಜಕೀಯನಾ? ಎಂದು ಪ್ರಶ್ನೆ ಮಾಡಿದರು.

ನಾವೆಲ್ಲರು ಸಂವಿಧಾನ, ನ್ಯಾಯಾಲಯದಲ್ಲಿ ಭರವಸೆ ಇಟ್ಟುಕೊಂಡು ಕೆಲಸ ಮಾಡ್ತಿದ್ದೇವೆ. ಈ ಸರ್ವೇ ಸರ್ಕಾರ ಮಾಡಿದ್ದಲ್ಲ. ನ್ಯಾಯಾಲಯದ ಸೂಚನೆ ಮೇಲೆ ಆಗ್ತಿರೋದು. ಕುಮಾರಸ್ವಾಮಿ ಅವರು ಈ ರೀತಿ ಮಾತನಾಡಿದರೆ ಅದು ದುರಂತ. ಅವರು ದಾಖಲೆ ಬಿಡುಗಡೆ ಮಾಡ್ತೀನಿ ಎಂದು ಹೇಳುತ್ತಲೇ ಇದ್ದಾರೆ. ದಾಖಲಾತಿ ಬಿಡುಗಡೆ ಮಾಡಲಿ ಎಂದು ಸವಾಲೊಡ್ಡಿದರು.ಇದನ್ನೂ ಓದಿ: ಅರ್ಚಕರಿಗೆ ಸೇರಬೇಕಿದ್ದ ಹಣ ಅಧಿಕಾರಿಗಳ ಕುಟುಂಬಕ್ಕೆ – ಮುಜರಾಯಿ ಇಲಾಖೆಯ 1.87 ಕೋಟಿ ಗುಳುಂ

Share This Article