ಮುಡಾ ಕೇಸ್‌ನಲ್ಲಿ ಸಿದ್ದರಾಮಯ್ಯಗೆ ಕ್ಲೀನ್‌ಚಿಟ್ ಸಿಗಲಿದೆ: ಪರೋಕ್ಷ ಸುಳಿವು ಕೊಟ್ಟ ಕುಮಾರಸ್ವಾಮಿ

By
1 Min Read

ಬೆಂಗಳೂರು: ಮುಡಾ ಅಕ್ರಮ ಕೇಸ್‌ನಲ್ಲಿ (MUDA Scam) ಸಿಎಂ ಅಡಿ ಇರುವ ಲೋಕಾಯುಕ್ತ (Lokayukta) ಸಂಸ್ಥೆ ಸಿಎಂಗೆ ಕ್ಲೀನ್‌ಚಿಟ್ ಕೊಡಲಿದೆ ಎಂದು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಪರೋಕ್ಷವಾಗಿ ಸುಳಿವು ಕೊಟ್ಟಿದ್ದಾರೆ.

ಮುಡಾ ಅಕ್ರಮ ತನಿಖೆ ಲೋಕಾಯುಕ್ತದಿಂದ ವರದಿ ಸಲ್ಲಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಲೋಕಾಯುಕ್ತ ತನಿಖೆಯನ್ನ ತನಿಖೆ ಅಂತ ಕರೆಯಬೇಕಾ? ತನಿಖೆ ಮಾಡಿದ ಅಧಿಕಾರಿ ವರದಿ ಕೊಡೋಕೆ ಮೇಲಿನ ಅಧಿಕಾರಿ ಹತ್ರ ಅನುಮತಿ ಪಡೆಯಬೇಕಂತೆ. ವರದಿ ಮೊದಲು ಮೇಲಾಧಿಕಾರಿಗಳಿಗೆ ಕೊಟ್ಟು, ಮೇಲಾಧಿಕಾರಿಗಳು ಕ್ಲಿಯರ್ ಮಾಡಿದ ಮೇಲೆ ಇವರು ಲೋಕಾಯುಕ್ತಗೆ ವರದಿ ಕೊಡುತ್ತಾರೆ ಅಂತೆ. ಹೇಗೆ ತನಿಖೆ ಆಗಿದೆ ಅಂತ ಮೇಲಾಧಿಕಾರಿಗೆ ತೋರಿಸಿಕೊಂಡು ಮೇಲಾಧಿಕಾರಿ ಗ್ರೀನ್ ಸಿಗ್ನಲ್ ಕೊಟ್ಟ ಮೇಲೆ ವರದಿ ಕೊಡೋದಾ ಎಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ: ಬೆಂಗಳೂರು| ಜೆಸಿಬಿ ಹರಿದು 2 ವರ್ಷದ ಮಗು ಸಾವು

ಸರ್ಕಾರದ ಮುಖ್ಯಮಂತ್ರಿ ವಿರುದ್ಧ ಅವರ ಕೈಕೆಳಗೆ ಕೆಲಸ ಮಾಡೋ ಅಧಿಕಾರಿಗಳು ಸಿಎಂ ವಿರುದ್ಧ ವರದಿ ಕೊಡುತ್ತಾರಾ? ವಾಸ್ತವಾಂಶ ಏನಾಗಿದೆ ಎಂದು ಸಿದ್ದರಾಮಯ್ಯ ವಿರುದ್ಧ ದಾಖಲೆಗಳು ಚೆಲ್ಲಾಡುತ್ತಿವೆ. ಲೋಕಾಯುಕ್ತದವರು ಮಾಡಿರೋದು ಒಂದು ತನಿಖೆನಾ? ಸಿದ್ದರಾಮಯ್ಯ ವಿರುದ್ಧ ಅವರ ವರದಿ ಕೊಡುತ್ತಾರಾ ಎಂದು ಪರೋಕ್ಷವಾಗಿ ಮುಡಾ ಕೇಸ್‌ನಲ್ಲಿ ಸಿದ್ದರಾಮಯ್ಯಗೆ ಕ್ಲೀನ್‌ಚಿಟ್ ಕೊಡುತ್ತಾರೆ ಎಂದು ಆರೋಪ ಮಾಡಿದರು. ಇದನ್ನೂ ಓದಿ: ಕೋಲಾರ | ಬೈಕ್‌ಗೆ ಕಾರು ಡಿಕ್ಕಿ – ಫಾರೆಸ್ಟ್ ವಾಚರ್ ಸ್ಥಳದಲ್ಲೇ ಸಾವು

Share This Article