ಅಟಲ್‌ಜೀ ಜನ್ಮ ಶತಾಬ್ಧಿ – ವಾಜಪೇಯಿ ಜತೆ ಕೆಲಸ ಮಾಡಿದ ಸಮಕಾಲೀನ ಕಾರ್ಯಕರ್ತರಿಗೆ ಬಿಜೆಪಿ ಗೌರವ

Public TV
2 Min Read

ಬೆಂಗಳೂರು: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ(Atal Bihari Vajpayee) ಅವರ ಜನ್ಮ ಶತಾಬ್ಧಿ ನಿಮಿತ್ತ ದೇಶದಾದ್ಯಂತ ಬಿಜೆಪಿ(BJP) ವತಿಯಿಂದ ವಾಜಪೇಯಿ ಜತೆ ಕೆಲಸ ಮಾಡಿದ ಸಮಕಾಲೀನ ಕಾರ್ಯಕರ್ತರಿಗೆ ಗೌರವ ಸಲ್ಲಿಸಲಾಯಿತು.

ಅಟಲ್‌ಜೀ ಅವರ ಜನ್ಮ ಶತಾಬ್ಧಿ ನಿಮಿತ್ತ ವಾಜಪೇಯಿ ಅವರ ಜೊತೆ ನಿಕಟ ಸಂಪರ್ಕವನ್ನು ಇಟ್ಟುಕೊಂಡು, ಅವರ ಜೊತೆ ಒಡನಾಟ ಬೆಳೆಸಿಕೊಂಡವರು, ನಮ್ಮ ರಾಜ್ಯಕ್ಕೆ ಬಂದಾಗ ವೇದಿಕೆ ಹಂಚಿಕೊಂಡವರು, ಪ್ರವಾಸ ಮಾಡಿದ ಹಿರಿಯರನ್ನು ಭೇಟಿ ಮಾಡಿ ಅವರ ಅನುಭವವನ್ನು ತಿಳಿದುಕೊಳ್ಳುತ್ತಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದರು. ಇದನ್ನೂ ಓದಿ : ಡಿ.ಕೆ.ಶಿವಕುಮಾರ್‌ಗೆ ಒಳ್ಳೆಯದಾಗಲಿ ಅಂತ ರಾಜಣ್ಣ ಮಾತಾಡ್ತಿದ್ದಾರೆ: ಡಿ.ಕೆ.ಸುರೇಶ್

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಹಿರಿಯರು, ಪ್ರಸಿದ್ಧ ವಕೀಲರೂ ಆದ ಸರೋಜಿನಿ ಮುತ್ತಣ್ಣರವರ ಮನೆಗೆ ಭೇಟಿ ಕೊಟ್ಟಿದ್ದೇವೆ. ರಾಷ್ಟ್ರೀಯ ಮಹಿಳಾ ಮೋರ್ಚಾದಲ್ಲಿ ಅವರು ಸೇವೆ ಸಲ್ಲಿಸಿದ್ದರು ಎಂದರು. ಇದನ್ನೂ ಓದಿ : ರಂಜಾನ್ ಮಾಸದಲ್ಲಿ ಮುಸ್ಲಿಂ ಸರ್ಕಾರಿ ನೌಕರರಿಗೆ ಕಚೇರಿಯಿಂದ ಬೇಗನೆ ಹೊರಡಲು ಅವಕಾಶ

ಅಟಲ್‌ಜೀ ಅವರ ಜೊತೆ ಕೆಲಸ ನಿರ್ವಹಿಸಿರುವ ಹಾಗೂ ಹಿರಿಯ ಕಾರ್ಯಕರ್ತರಾದ ಸರೋಜಿನಿ ಮುತ್ತಣ್ಣರವರ ನಿವಾಸಕ್ಕೆ ವಿಜಯೇಂದ್ರ ಮತ್ತು ಪಕ್ಷದ ಮುಖಂಡರು ಭೇಟಿ ನೀಡಿ, ಒಡನಾಟ ಸಂಬಂಧಿತ ಮಾಹಿತಿ ಸಂಗ್ರಹಿಸಿದರು. ಇದನ್ನೂ ಓದಿ : ಬೆಂಗಳೂರು: ಇದೇ ತಿಂಗಳ ಅಂತ್ಯಕ್ಕೆ ಹೋಟೆಲ್‌ಗಳಲ್ಲಿ ಕಾಫಿ ಬೆಲೆ 15% ಏರಿಕೆಗೆ ನಿರ್ಧಾರ

ನಾಳೆ ಸುದೀರ್ಘ ಪತ್ರಿಕಾಗೋಷ್ಠಿ ಕರೆಯಲಿದ್ದೇನೆ. ರಾಜ್ಯದ ಗ್ಯಾರಂಟಿ ಕುರಿತ ಬಿಕ್ಕಟ್ಟು, ರಾಜಕೀಯ ಬಿಕ್ಕಟ್ಟಿನ ಕುರಿತು ನಾಳೆ ಮಾತನಾಡುವೆ ಎಂದರು. ಇದನ್ನೂ ಓದಿ : ಅನುಭವಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ: ಛಲವಾದಿ ನಾರಾಯಣಸ್ವಾಮಿ

ಯತ್ನಾಳ್ ಅವರ ಸಭೆ ಕುರಿತು ಮಾತನಾಡಿ, ಅವರು ಹಿರಿಯರಿದ್ದಾರೆ. ಸಭೆ ಕರೆದು ಪಕ್ಷವನ್ನು ಹೇಗೆ ಬಲಪಡಿಸಬೇಕೆಂಬ ಚರ್ಚೆ ಮಾಡುವುದಕ್ಕೆ ಯಾರು ಬೇಡ ಎನ್ನುತ್ತಾರೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ : ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರ ಜೊತೆ ಸರ್ಕಾರ ಚೆಲ್ಲಾಟ ಸಲ್ಲದು: ವಿಜಯೇಂದ್ರ ಟೀಕೆ

ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಹಾಗೂ ಶಾಸಕ ಸಿ.ಕೆ ರಾಮಮೂರ್ತಿ, ಶಾಸಕ ಉದಯ ಗರುಡಾಚಾರ್, ಅಟಲ್ ಜನ್ಮ ಶತಮಾನೋತ್ಸವ ಅಭಿಯಾನದ ರಾಜ್ಯ ಸಂಚಾಲಕ ಜಗದೀಶ್ ಹಿರೇಮನಿ, ರಾಜ್ಯ ಸಮಿತಿ ಸದಸ್ಯ ಸದಾಶಿವ ಮತ್ತು ಪಕ್ಷದ ಮುಖಂಡರು ಪಾಲ್ಗೊಂಡಿದ್ದರು. ಇದನ್ನೂ ಓದಿ : ಎಲಾನ್ ಮಸ್ಕ್-ಮೋದಿ ಭೇಟಿ ಬೆನ್ನಲ್ಲೇ ಟೆಸ್ಲಾದಿಂದ ಭಾರತದಲ್ಲಿ ನೇಮಕಾತಿ ಶುರು

Share This Article