ಮೈಸೂರು: ಪ್ರತಿಷ್ಠೆಯ ಕಣವಾಗಿದ್ದ ನಂಜನಗೂಡು ಉಪಚುನಾವಣೆಯಲ್ಲಿ ಕಾಂಗ್ರೆಸ್‍ನ ಕಳಲೆ ಕೇಶವಮೂರ್ತಿ 21,334 ಹೆಚ್ಚು ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ವಿಜಯದ ನಗೆ ಬೀರಿದ್ದಾರೆ.
ಕಳಲೆ ಕೇಶವಮೂರ್ತಿ ಅವರಿಗೆ 86,212 ಮತಗಳು ಸಿಕ್ಕಿದ್ದರೆ ಬಿಜೆಪಿಯ ವಿ.ಶ್ರೀನಿವಾಸ್ ಪ್ರಸಾದ್‍ಗೆ 64,878 ಮತಗಳು ಲಭಿಸಿವೆ. 1,665 ನೋಟ ಮತಗಳು ಬಿದ್ದಿವೆ.
ಆರಂಭಿಕ ಹಂತದಿಂದಲೂ ಮುನ್ನಡೆ ಸಾಧಿಸಿಕೊಂಡು ಬಂದಿದ್ದ ಕಳಲೆ ಕೇಶವಮೂರ್ತಿ ಅಂತಿಮವಾಗಿ 2013ರ ಸೋಲಿಗೆ ಸೇಡು ತೀರಿಸಿಕೊಂಡರು.
2013 ರ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಸ್ಪರ್ಧಿಸಿದ್ದ ಶ್ರೀನಿವಾಸ ಪ್ರಸಾದ್ 50, 784 ಮತಗಳನ್ನು ಗಳಿಸಿದ್ದರೆ, ಜೆಡಿಎಸ್‍ನಿಂದ ಸ್ಪರ್ಧಿಸಿದ್ದ ಕಳಲೆ ಕೇಶವಮೂರ್ತಿ 41,843 ಮತಗಳನ್ನು ಪಡೆದಿದ್ದರು.
ಸಿಎಂ ಸಿದ್ದರಾಮಯ್ಯ ಸಂಪುಟದಿಂದ ಕೈಬಿಟ್ಟ ಹಿನ್ನೆಲೆಯಲ್ಲಿ ಕಾಂಗ್ರೆಸ್ ಗೆ ರಾಜೀನಾಮೆ ನೀಡಿ ಶ್ರೀನಿವಾಸಪ್ರಸಾದ್ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಜೆಡಿಎಸ್‍ನಲ್ಲಿದ್ದ ಕಳಲೆ ಕೇಶವಮೂರ್ತಿ ಜೆಡಿಎಸ್‍ಗೆ ರಾಜೀನಾಮೆ ನೀಡಿ ಕಾಂಗ್ರೆಸ್‍ಗೆ ಸೇರ್ಪಡೆಯಾಗಿದ್ದರು. ಜೆಡಿಎಸ್ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸದ ಕಾರಣ ಪರೋಕ್ಷವಾಗಿ ಕಳಲೆ ಗೆಲುವಿಗೆ ಕಾರಣವಾಗಿದೆ.
ಮಹದೇವ ಪ್ರಸಾದ್ ಅವ್ರ ಕೆಲ್ಸಕ್ಕೆ ಜನ ನೀಡಿದ ಕಾಣಿಕೆಯಿದು: ಖಾದರ್https://t.co/Ukbziz8z6W#Gundlupete #ByElection @utkhader #GeethaMhadevaprasad pic.twitter.com/NoHkrLyyvG
— PublicTV (@publictvnews) April 13, 2017
ಗುಂಡ್ಲುಪೇಟೆಯಲ್ಲಿ 'ಕೈ' ಗೆ ಜಯ:ಗೆಲುವಿನ ನಗೆ ಬೀರಿದ ಗೀತಾ ಮಹದೇವ್ಪ್ರಸಾದ್ https://t.co/p4PInAsNPB @CMofKarnataka @withDKS @KPCCofficial #Gundlupete pic.twitter.com/e8Pu8NNuZ0
— PublicTV (@publictvnews) April 13, 2017