Union Budget 2025 | ಯಾವ ವರ್ಷ ಎಷ್ಟು ಲಕ್ಷ ತೆರಿಗೆ ವಿನಾಯಿತಿ ಸಿಕ್ಕಿತ್ತು? – ಇಲ್ಲಿದೆ ಪೂರ್ಣ ವಿವರ

By
1 Min Read

ನವದೆಹಲಿ: ಪ್ರತಿ ಬಜೆಟ್‌ನಲ್ಲಿ (Budget) ಮಧ್ಯಮ ವರ್ಗದವರಿಗೆ (Middle Class) ಭಾರೀ ನಿರಾಸೆ ಆಗುತ್ತಿತ್ತು. ಆದರೆ ಈ ಬಾರಿ ಮಧ್ಯಮ ವರ್ಗದರನ್ನು ಮೋದಿ ಸರ್ಕಾರ ಕೈಹಿಡಿದಿದೆ.

ಮುಖ್ಯವಾಗಿ 12 ಲಕ್ಷ ರೂ.ವರೆಗೆ ತೆರಿಗೆ ವಿನಾಯಿತಿಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಘೋಷಣೆ ಮಾಡಿದ್ದಾರೆ. ಈ ವಿನಾಯಿತಿ ವೇತನ ಪಡೆಯುವ ತೆರಿಗೆದಾರರಿಗೆ ಮಾತ್ರ ಅನ್ವಯವಾಗುತ್ತದೆ. ತಮ್ಮ ಭಾಷಣದಲ್ಲಿ ಸೀತಾರಾಮನ್‌ ಅವರು ಒಟ್ಟು 12.75 ಲಕ್ಷ ರೂ.ಗಳಿಗೆ ವೇತನ ಪಡೆಯುವ ತೆರಿಗೆದಾರರಿಗೆ ಆದಾಯ ತೆರಿಗೆ ಪಾವತಿಸಬೇಕಾಗಿಲ್ಲ ಎಂದು ತಿಳಿಸಿದರು.

ಯಾವ ವರ್ಷ ಎಷ್ಟು ಲಕ್ಷ ರೂ. ವಿನಾಯಿತಿ?
2005 – 1 ಲಕ್ಷ
2012 – 2 ಲಕ್ಷ
2014 – 2.5 ಲಕ್ಷ
2019 – 5 ಲಕ್ಷ
2023 – 7 ಲಕ್ಷ
2025 – 12 ಲಕ್ಷ ಇದನ್ನೂ ಓದಿ: Budget 2025: ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನ ಸಿಕ್ಕಿದೆ?

 

ಯುಪಿಎ (UPA) ಮೊದಲ ಅವಧಿಯಲ್ಲಿ ಚಿದಂಬರಂ ಅವರು 2005 ರಲ್ಲಿ 1 ಲಕ್ಷ ರೂ. ಆದಾಯ ತೆರಿಗೆ ವಿನಾಯಿತಿ ಘೋಷಣೆ ಮಾಡಿದ್ದರೆ, ಯುಪಿಎ ಸರ್ಕಾರದ ಎರಡನೇ ಅವಧಿಯಲ್ಲಿ 2012 ರಲ್ಲಿ ಪ್ರಣಬ್‌ ಮುಖರ್ಜಿ ಅವರು ಈ ಮಿತಿಯನ್ನು 2 ಲಕ್ಷ ರೂ.ಗೆ ಏರಿಸಿದ್ದರು. ಇದನ್ನೂ ಓದಿ: Budget 2025: ಒಂದು ರೂ. ಬಂದಿದ್ದು ಹೇಗೆ? ಹೋಗಿದ್ದು ಹೇಗೆ?

2014 ರಲ್ಲಿ ಮೋದಿ ಸರ್ಕಾರ ಬಂದಾಗ ಅರಣ್‌ ಜೇಟ್ಲಿ ಅವರು ಈ ಮಿತಿಯನ್ನು 2.5 ಲಕ್ಷಕ್ಕೆ ಏರಿಕೆ ಮಾಡಿದ್ದರು. 2019 ರಲ್ಲಿ ಪಿಯೂಶ್‌ ಗೋಯಲ್‌ ಅವರು ಈ ಮಿತಿಯನ್ನು 5 ಲಕ್ಷ ರೂ.ಗೆ ಏರಿಸಿದ್ದರು.

2023 ರಲ್ಲಿ ನಿರ್ಮಲಾ ಸೀತಾರಾಮನ್‌ ಅವರು 7 ಲಕ್ಷ ರೂ.ಗೆ ಏರಿಸಿದರೆ ಈ ಬಾರಿಯ ಬಜೆಟ್‌ನಲ್ಲಿ ವಿನಾಯಿತಿಯನ್ನು 12 ಲಕ್ಷ ರೂ.ಗೆ(ವೇತನ ಪಡೆಯುವ ತೆರಿಗೆದಾರರು) ಏರಿಕೆ ಮಾಡಿ ಮಧ್ಯಮ ವರ್ಗದವರಿಗೆ ಸಿಹಿ ಸುದ್ದಿ ನೀಡಿದ್ದಾರೆ.

 

Share This Article