ರಣಜಿ ಟ್ರೋಫಿಯಲ್ಲೂ ಕೊಹ್ಲಿಯದ್ದು ಅದೇ ಕಥೆ – 6 ರನ್‌ಗೆ ಔಟಾಗ್ತಿದ್ದಂತೆ ಮೈದಾನದಿಂದ ಹೊರಟ ಫ್ಯಾನ್ಸ್‌

Public TV
2 Min Read

ನವದೆಹಲಿ: ಸುಮಾರು 12 ವರ್ಷಗಳ ನಂತರ ರಣಜಿ ಟ್ರೋಫಿ ಪಂದ್ಯದಲ್ಲಿ (Ranji Trophy Match) ಕಾಣಿಸಿಕೊಂಡು ಸಾವಿರಾರೂ ಪ್ರೇಕ್ಷಕರ ಆರ್ಷಣೆಯಾಗಿದ್ದ ರನ್‌ ಮಿಷಿನ್‌ ವಿರಾಟ್‌ ಕೊಹ್ಲಿ (Virat Kohli), ರೈಲ್ವೇಸ್‌ ವಿರುದ್ಧ ಪಂದ್ಯದಲ್ಲಿ ಕೇವಲ 6 ರನ್‌ ಗಳಿಸುವ ಮೂಲಕ ನಿರಾಸೆ ಮೂಡಿಸಿದ್ರು.

ರೈಲ್ವೇಸ್‌ ವಿರುದ್ಧ 2ನೇ ದಿನದಾಟದಲ್ಲಿ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ದೈತ್ಯ ಆಟಗಾರ, 15 ಎಸೆತಗಳನ್ನು ಎದುರಿಸಿ 1 ಫೋರ್‌ ಸಹಿತ ಕೇವಲ 6 ರನ್‌ಗಳಿಗೆ ಹಿಮಾಂಶು ಸಾಂಗ್ವಾನ್‌ಗೆ (Himanshu Sangwan) ವಿಕೆಟ್‌ ಒಪ್ಪಿಸಿ ಮೈದಾನ ತೊರೆದರು. ಕೊಹ್ಲಿ ಡಗ್‌ಔಟ್‌ನತ್ತ ಧಾವಿಸುತ್ತಿದ್ದಂತೆಯೇ ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರು ಗೊಣಗುತ್ತಲೇ ಕ್ರೀಡಾಂಗಣದಿಂದ ಹೊರ ನಡೆದರು.

ಫಾರ್ಮ್ ಸ್ಥಿರತೆ ಕಾಯ್ದುಕೊಳ್ಳಲು ಹೆಣಗಾಡುತ್ತಿರುವ ಕೊಹ್ಲಿ, ಬಿಸಿಸಿಐ ಸೂಚನೆ ಮೇರೆಗೆ ದಶಕದ ನಂತರ ರಣಜಿ ಆಡಲು ನಿರ್ಧರಿಸಿದ್ದರು. ದೇಶೀಯ ಪಂದ್ಯದಲ್ಲಿ ಅವರ ಆಟವನ್ನು ಕಣ್ತುಂಬಿಸಿಕೊಳ್ಳಲು ಸಾವಿರಾರು ಪ್ರೇಕ್ಷಕರು ಎದುರು ನೋಡುತ್ತಿದರು. ಆದರೆ ಕೊಹ್ಲಿ ಎಲ್ಲದಕ್ಕೂ ತಣ್ಣಿರೆರೆಚಿದರು. ಇದನ್ನೂ ಓದಿ: ಟಿಕ್‌ಟಾಕ್ ವೀಡಿಯೋ ಮಾಡಿದ್ದಕ್ಕೆ ಪಾಕಿಸ್ತಾನದಲ್ಲಿ 15 ವರ್ಷದ ಪುತ್ರಿಯನ್ನೇ ಗುಂಡಿಕ್ಕಿ ಕೊಂದ ಅಪ್ಪ

ವಿಡಿಯೋ ಸಿಕ್ಕಾಪಟ್ಟೆ ವೈರಲ್‌:
ದಿಗ್ಗಜ ಕ್ರಿಕೆಟಿಗನನ್ನು ಯುವ ಆಟಗಾರ ಹಿಮಾಂಶು ಸಾಂಗ್ವಾನ್‌ ಔಟ್‌ ಮಾಡಿದ ವೀಡಿಯೋ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. ಸಾಂಗ್ವಾನ್‌ ವೇಗದ ದಾಳಿಗೆ ವಿಕೆಟ್‌ ಚಿಂದಿಯಾಗಿರುವುದು ಕೊಹ್ಲಿ ಅಭಿಮಾನಿಗಳಿಗೂ ನಿದ್ದೆಗೆಡಿಸಿದೆ. ಇದನ್ನೂ ಓದಿ: ದೇಸಿ ಗರ್ಲ್ ಈಗ ದುಬಾರಿ- ರಾಜಮೌಳಿ ಚಿತ್ರಕ್ಕೆ ಪ್ರಿಯಾಂಕಾ ಚೋಪ್ರಾ ಸಂಭಾವನೆ ಕೇಳಿದ್ರೆ ಶಾಕ್ ಆಗೋದು ಗ್ಯಾರಂಟಿ

ಹಿಮಾಂಶು ಸಾಂಗ್ವಾನ್‌ ಯಾರು?
ರೈಲ್ವೆಸ್‌ ತಂಡದ ಹಿಮಾಂಶು ಸಾಂಗ್ವಾನ್‌ ಬಲಗೈ ಮಧ್ಯಮ ವೇಗಿ ಮತ್ತು. ದೆಹಲಿಯವರೇ ಆಗಿರುವ ಸಾಂಗ್ವಾನ್‌ 2019ರ ಸೆಪ್ಟೆಂಬರ್‌ನಲ್ಲಿ ಲಿಸ್ಟ್‌-ಎ ದೇಸಿ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. 2019-20ರ ವಿಜಯ್‌ ಹಜಾರೆ ಟ್ರೋಫಿಯಲ್ಲಿ ರೈಲ್ವೆಸ್‌ ತಂಡದ ಪರವಾಗಿ ಗುರುತಿಸಿಕೊಂಡರು. ನಂತರ 2019-20ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ತಮ್ಮ T20 ಚೊಚ್ಚಲ ಪಂದ್ಯವನ್ನಾಡಿದ ಸಾಂಗ್ವಾನ್‌, 2019ರ ಡಿಸೆಂಬರ್‌ನಲ್ಲಿ ರೈಲ್ವೇಸ್‌ಗಾಗಿ ರಣಜಿ ಟ್ರೋಫಿಯಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ ಪ್ರವೇಶಿಸಿದರು.

Share This Article