ಮುಡಾ ಕೇಸ್‌ನಲ್ಲಿ ಸಿಎಂ ಪರ ನಾವೆಲ್ಲ ನಿಂತುಕೊಳ್ತೀವಿ – ಪರಮೇಶ್ವರ್

Public TV
1 Min Read

– ತುಮಕೂರಿನಲ್ಲಿ 2ನೇ ಏರ್‌ಪೋರ್ಟ್ ಮಾಡಿದ್ರೆ 22 ಜಿಲ್ಲೆಗಳಿಗೆ ಅನುಕೂಲವಾಗುತ್ತೆ: ಗೃಹ ಸಚಿವ

ಬೆಂಗಳೂರು: ಮುಡಾ (MUDA) ಕೇಸ್ ರಾಜಕೀಯ ಪ್ರೇರಿತ. ಹೀಗಾಗಿ ನಾವು ಯಾವಾಗಲು ಸಿದ್ದರಾಮಯ್ಯ ಪರ ನಿಲ್ಲುತ್ತೇವೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ (G Parameshwar) ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಕೇಸ್‌ನ್ನು ಸಿಬಿಐಗೆ ಕೊಡುವ ವಿಚಾರವಾಗಿ ಮೊದಲು ಹೈಕೋರ್ಟ್‌ನಲ್ಲಿ ಆದೇಶ ಬರಲಿ. ಆದೇಶ ಬಂದ ಮೇಲೆ ಗೊತ್ತಾಗುತ್ತದೆ. ಬರುವವರೆಗೂ ಕಾಯೋಣ, ಬಂದ ಮೇಲೆ ಮುಂದಿನ ಚರ್ಚೆ ಮಾಡೋಣ. ಮುಡಾ ಕೇಸ್ ರಾಜಕೀಯ ಪ್ರೇರಿತ ಎಂದು ಮೊದಲ ದಿನದಿಂದ ಹೇಳುತ್ತಿದ್ದೇವೆ. ರಾಜಕೀಯ ದುರುದ್ದೇಶ ಇಟ್ಟುಕೊಂಡು ಬಿಜೆಪಿಯವರು ಹೀಗೆ ಮಾಡುತ್ತಿದ್ದಾರೆ. ನಾವೆಲ್ಲರು ಸಿದ್ದರಾಮಯ್ಯ ಪರ ನಿಂತುಕೊಳ್ತೀವಿ. ಅದರಲ್ಲಿ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.ಇದನ್ನೂ ಓದಿ: ಮೊನಾಲಿಸಾ ಹಾಟ್‌ ಸಾಂಗ್‌ ರಿಲೀಸ್‌ – ವಿಡಿಯೋ ವೈರಲ್‌!

ಇದೇ ವೇಳೆ ತುಮಕೂರಿನಲ್ಲಿ (Tumakuru) 2ನೇ ಏರ್‌ಪೋರ್ಟ್ ವಿಚಾರವಾಗಿ ಮಾತನಾಡಿ, ಇದರಿಂದ 20 ರಿಂದ 22 ಜಿಲ್ಲೆಗಳಿಗೆ ಅನುಕೂಲ ಆಗಲಿದೆ. ಈ ನಿಟ್ಟಿನಲ್ಲಿ ತುಮಕೂರು ಭಾಗದಲ್ಲಿ ಏರ್‌ಪೋರ್ಟ್ ಮಾಡಲು ಮನವಿ ಮಾಡಲಾಗಿದೆ. ನಮ್ಮ ಅಹವಾಲುಗಳನ್ನು ಹೇಳಿದ್ದೇವೆ. ತುಮಕೂರು ಭಾಗದಲ್ಲಿ ಆದರೆ ಉತ್ತರ ಕರ್ನಾಟಕದಿಂದ ಬರುವವರಿಗೆ ಅನುಕೂಲ ಆಗುತ್ತದೆ. ಈಗ ಇರುವ ಏರ್‌ಪೋರ್ಟ್‌ಗೂ ಸಂಪರ್ಕ ಉತ್ತಮವಾಗಿ ಇರಲಿದೆ. ಅವರು ತಾಂತ್ರಿಕವಾಗಿ ಏನು ಮಾಡುತ್ತಾರೆ ನೋಡಬೇಕು ಎಂದು ತಿಳಿಸಿದರು.

ತುಮಕೂರಿನವರೆಗೂ ಮೆಟ್ರೋ ವಿಸ್ತರಣೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಮೆಟ್ರೋ ಪ್ರಕ್ರಿಯೆ ನಡೆಯುತ್ತಿದೆ. ಇನ್ನು ಡಿಪಿಆರ್ ಅಂತಿಮವಾಗಿಲ್ಲ. ಡಿಪಿಆರ್ ಹೈದರಾಬಾದ್ ಕಂಪನಿಗೆ ಕೊಟ್ಟಿದ್ದಾರೆ. ಅವರು ಡಿಪಿಆರ್ ಸಲ್ಲಿಕೆ ಮಾಡಿಲ್ಲ. ಡಿಪಿಆರ್ ಮಾಡಿದ ಮೇಲೆ ನಿರ್ಧಾರ ಮಾಡ್ತೀವಿ. ಪಿಪಿಪಿ ಮಾಡೆಲ್‌ನಲ್ಲಿ ಮಾಡ್ತಿದ್ದೇವೆ. ಸರ್ಕಾರದ ದುಡ್ಡು ಏನು ಖರ್ಚು ಆಗುವುದಿಲ್ಲ. ಡಿಪಿಆರ್ ಬಂದ ನಂತರ ಭಾರತ ಸರ್ಕಾರಕ್ಕೆ ಅನುಮತಿ ಕೇಳಬೇಕು. ರೋಡಿನ ಮಧ್ಯೆ ಹೋಗಬೇಕು. ಹೀಗಾಗಿ ಭಾರತ ಸರ್ಕಾರದ ಅನುಮತಿ ಬೇಕು. ಇದರ ಬಗ್ಗೆ ಪ್ರಕ್ರಿಯೆ ನಡೆಯುತ್ತಿದೆ ಎಂದರು.ಇದನ್ನೂ ಓದಿ: ಕುಂಭಮೇಳದಲ್ಲಿ ಪಾಲ್ಗೊಂಡಿರುವ ಕನ್ನಡಿಗರು ಜಾಗರೂಕತೆಯಿಂದಿರಿ: ಸಿಎಂ

Share This Article