Ankola| ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ 1.15 ಕೋಟಿ ಹಣ ಪತ್ತೆ

Public TV
1 Min Read

ಕಾರವಾರ: ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ (Car) 1.15 ಕೋಟಿ ರೂ. ಪತ್ತೆಯಾದ ಘಟನೆ ಅಂಕೋಲದ (Ankola) ರಾಮನಗುಳಿ ಬಳಿಯ ರಾಷ್ಟ್ರಿಯ ಹೆದ್ದಾರಿ 66ರ ಪಕ್ಕದ ನಿರ್ಜನ ಪ್ರದೇಶದಲ್ಲಿ ನಡೆದಿದೆ.

ಮಂಗಳವಾರ ಸಂಜೆಯಿಂದ ನಿರ್ಜನ ಪ್ರದೇಶದಲ್ಲಿ ಕಾರನ್ನು ಪಾರ್ಕ್ ಮಾಡಲಾಗಿತ್ತು. ಈ ಬಗ್ಗೆ ಅಂಕೋಲಾ ಪೊಲೀಸರಿಗೆ ಸಾರ್ವಜನಿಕರಿಂದ ಮಾಹಿತಿ ಸಿಗುತ್ತಿದ್ದಂತೆ ಪರಿಶೀಲನೆಗೆ ಬಂದ ಪೊಲೀಸರು ಕಾರಿನ ಬಾಗಿಲು ಓಪನ್ ಮಾಡಿ ಪರಿಶೀಲನೆ ನಡೆಸಿದ ವೇಳೆ ಕಾರಿನಲ್ಲಿ ಕಬ್ಬಿಣದ ಬಾಕ್ಸ್ ಸಿಕ್ಕಿದ್ದು, ಅದನ್ನು ತೆರೆದು ನೋಡಿದಾಗ ಅದರಲ್ಲಿ 1.15 ಕೋಟಿ ಹಣ (Money) ಇರುವುದು ಕಂಡುಬಂದಿದೆ. ಇದನ್ನೂ ಓದಿ: MUDA Scam| ಒಂದೇ ದಿನದಲ್ಲಿ ಒಬ್ಬನ ಹೆಸರಿಗೆ 31 ಸೈಟ್ ರಿಜಿಸ್ಟರ್ – ಇಡಿಯಿಂದ 160 ಸೈಟ್‌ ಜಪ್ತಿ

ಕೆಎ 51 ಎಮ್‌ಬಿ 9634 ನಂಬರ್ ಪ್ಲೇಟಿನ ಕಾರು ಇದಾಗಿದೆ. ಕಾರಿನ ರಿಜಿಸ್ಟ್ರೇಷನ್ ನಂಬರ್ ಅನ್ನು ಪರಿಶೀಲಿಸಿದಾಗ ಆಲ್ಟ್ರೋಜ್ ಕಾರು ಎಂದು ತೋರಿಸಿದ್ದು, ಮಡಿಕೇರಿ ಆರ್‌ಟಿಓ ಪಾಸಿಂಗ್ ಹೊಂದಿದೆ. ಅಸಲಿಗೆ ಇದು ಕ್ರೇಟಾ ಕಾರಾಗಿದ್ದು, ಈ ಕಾರಿನ ಬಾನೆಟ್, ಡಿಕ್ಕಿ ತೆರೆದ ಸ್ಥಿತಿಯಲ್ಲಿದ್ದು, ಕಾರಿನ ಸೀಟ್ ಕಿತ್ತು ಹೊರಗೆ ಬಿದ್ದಿರುವ ಸ್ಥಿತಿಯಲ್ಲಿ ಹಾಗೂ ಕಿಟಕಿ ಗಾಜುಗಳು ಒಡೆದ ಸ್ಥಿತಿಯಲ್ಲಿರುವುದು ಕಂಡುಬಂದಿದೆ. ಇದನ್ನೂ ಓದಿ: ಮೈಸೂರು ಮಹಾರಾಣಿ ಕಾಲೇಜು ಕಟ್ಟಡ ಕುಸಿತ – ಅವಶೇಷಗಳಡಿ ಸಿಲುಕಿದ್ದ ಕಾರ್ಮಿಕ ಸಾವು

ಸದ್ಯ ಅಂಕೋಲ ಪೊಲೀಸರು ವಾಹನವನ್ನು ವಶಕ್ಕೆ ಪಡೆದು ಠಾಣೆಯಲ್ಲಿ ಇರಿಸಿದ್ದು ,ಯಾವುದೋ ದರೋಡೆ ಮಾಡಿ ಹಣ ಸಾಗಿಸುತ್ತಿರುವ ಅನುಮಾನ ವ್ಯಕ್ತಪಡಿಸಿದ್ದಾರೆ. ಅಂಕೋಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮಹಾಕುಂಭ ಮೇಳದಲ್ಲಿ ಕಾಲ್ತುಳಿತ – 10 ಸಾವು

Share This Article