ಮೈಸೂರು| SSLC ವಿದ್ಯಾರ್ಥಿನಿ ಹೃದಯಾಘಾತದಿಂದ ಸಾವು

Public TV
1 Min Read

ಮೈಸೂರು: ಹೃದಯಾಘಾತದಿಂದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ (SSLC Student) ಸಾವನ್ನಪ್ಪಿದ ಘಟನೆ ಮೈಸೂರು (Mysuru) ಜಿಲ್ಲೆಯ ಪಿರಿಯಾಪಟ್ಟಣ (Piriyapattana) ತಾಲೂಕು ಕೆಲ್ಲೂರು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ನಾಗರಾಜ್, ವಸಂತ ಎಂಬುವರ ಪುತ್ರಿ ದೀಪಿಕಾ (15) ಸಾವನ್ನಪ್ಪಿದ ಯುವತಿ. ರಾವಂದೂರು ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಎಸ್‌ಎಸ್ ಎಲ್‌ಸಿ ವ್ಯಾಸಂಗ ಮಾಡುತ್ತಿದ್ದ ದೀಪಿಕಾ ಭಾನುವಾರ ಇದ್ದಕ್ಕಿದ್ದಂತೆ ಅಸ್ವಸ್ಥಳಾಗಿದ್ದಳು. ಇದನ್ನೂ ಓದಿ: ಆಪ್ ಅಧಿಕಾರಕ್ಕೆ ಬಂದ್ರೆ ಮನೀಶ್ ಸಿಸೋಡಿಯಾ ಮತ್ತೊಮ್ಮೆ ಡಿಸಿಎಂ: ಕೇಜ್ರಿವಾಲ್

ತಕ್ಷಣವೇ ಆಸ್ಪತ್ರೆ ಕರೆದೊಯ್ಯುವ ಪ್ರಯತ್ನ ಮಾಡಲಾಯಿತಾದರೂ ಆಸ್ಪತೆಗೆ ಸಾಗುವ ಮಾರ್ಗಮಧ್ಯದಲ್ಲಿ ದೀಪಿಕಾ ಕೊನೆಯುಸಿರೆಳೆದಿದ್ದಾಳೆ. ಇದನ್ನೂ ಓದಿ: MUDA Scam| ಸಿಎಂಗೆ ಸಂಕಷ್ಟ – ವಿಚಾರಣೆಗೆ ಹಾಜರಾಗುವಂತೆ ಪತ್ನಿಗೆ ಇಡಿ ಸಮನ್ಸ್‌

Share This Article