ಕಾಡಾನೆ ದಾಳಿಯಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ 15 ಲಕ್ಷ ಪರಿಹಾರ ವಿತರಣೆ

Public TV
1 Min Read

ಮಡಿಕೇರಿ: ಇತ್ತೀಚೆಗೆ ಕಾಡಾನೆ ದಾಳಿಯಿಂದ ಮೃತಪಟ್ಟಿದ್ದ ಸೋಮವಾರಪೇಟೆ ತಾಲ್ಲೂಕಿನ ಯಡವನಾಡು ಮೀಸಲು ಅರಣ್ಯದ ಕೂಪಾಡಿ ಗಿರಿಜನರ ಹಾಡಿಯ ತಮ್ಮಣ್ಣ (67) ಅವರ ಕುಟುಂಬಕ್ಕೆ ಅರಣ್ಯ ಇಲಾಖೆಯಿಂದ (Kodagu Forest Department) 15 ಲಕ್ಷ ರೂ. ಪರಿಹಾರದ ಚೆಕ್‌ ಅನ್ನು ವಿತರಿಸಲಾಯಿತು.

ಮೃತರ ತಾಯಿ ಬೋಜಿ ಅವರಿಗೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ.ಎ ಗೋಪಾಲ್ ಚೆಕ್ ವಿತರಿಸಿದರು. ಶಾಸಕ ಡಾ.ಮಂತರ್‌ಗೌಡ ಅವರ ಸೂಚನೆಯಂತೆ ಚೆಕ್ ವಿತರಿಸಲಾಗಿದೆ. ಪರಿಹಾರ ಹಣವನ್ನು ಉತ್ತಮ ಕಾರ್ಯಕ್ಕೆ ಉಪಯೋಗಿಸಿಕೊಳ್ಳುವಂತೆ ಸಲಹೆ ನೀಡಿದರು. ಇದನ್ನೂ ಓದಿ: ವಿಜಯೇಂದ್ರ ಸಿಎಂ ಆಗೋದನ್ನ ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ – ಕೆ.ಶಿವನಗೌಡ ನಾಯಕ್

ಹಾಡಿ ಮೀಸಲು ಅರಣ್ಯಕ್ಕೆ ಹೊಂದಿಕೊಂಡಿರುವುದರಿಂದ ಕಾಡಾನೆಗಳ ಬಗ್ಗೆ ಎಚ್ಚರ ವಹಿಸಬೇಕು. ಮೀಸಲು ಅರಣ್ಯದೊಳಗೆ ತಿರುಗಾಡಬಾರದು. ಕಾಡಾನೆ ಕಂಡಾಗ ಕೂಡಲೇ ಅರಣ್ಯ ಇಲಾಖೆಯ ಸಿಬ್ಬಂದಿಗೆ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದರು.

ಮಾನವರ ಮೇಲೆ ದಾಳಿ ಮಾಡುವ ಕಾಡಾನೆಗಳನ್ನು ಹಿಡಿದು ಪಳಗಿಸಲಾಗುವುದು. ಅಂತಹ ಆನೆಗಳನ್ನು ಕಂಡು ಹಿಡಿದು ಸೆರೆಹಿಡಿಯಲಾಗುವುದು ಎಂದು ಹೇಳಿದರು. ಇದನ್ನೂ ಓದಿ:  ಬಿಜೆಪಿಯಲ್ಲಿ ತೀವ್ರಗೊಂಡ ಬಣ ಕಚ್ಚಾಟ – ವಸ್ತುಸ್ಥಿತಿ ವರದಿ ಪಡೆಯಲು ರಾಜ್ಯಕ್ಕೆ ಬಿಎಲ್ ಸಂತೋಷ್ ಎಂಟ್ರಿ

ಚೆಕ್ ವಿತರಣೆ ಸಂದರ್ಭ ಸೋಮವಾರಪೇಟೆ ವಲಯ ಅರಣ್ಯಾಧಿಕಾರಿ ಶೈಲೇಂದ್ರ ಕುಮಾ‌ರ್, ಮೃತರ ಸಹೋದರ ಅಣ್ಣಯ್ಯ ಮತ್ತು ಹಾಡಿಯ ನಿವಾಸಿಗಳು ಇದ್ದರು.

Share This Article