ಕಾಂಗ್ರೆಸ್ ಪಕ್ಷದ ಅಪ್ಪಂದಿರ ಮನೆಯಿಂದ ಈ ಸರ್ಕಾರ ಅನುದಾನ ಕೊಡ್ತಿಲ್ಲ – ಪ್ರಿಯಾಂಕ್ ಖರ್ಗೆ ವಿರುದ್ಧ ಅಶೋಕ್ ಕಿಡಿ

Public TV
1 Min Read

ಬೆಂಗಳೂರು: ರಸ್ತೆಗಳ ಅಭಿವೃದ್ಧಿಗೆ ಬಿಡುಗಡೆ ಮಾಡಿರೋ 10 ಕೋಟಿ ರೂ. ಹಣವನ್ನು ಬಿಜೆಪಿ (BJP) ಶಾಸಕರು ವಾಪಸ್ ಕೊಡಲಿ ಎಂಬ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಹೇಳಿಕೆಗೆ ವಿಪಕ್ಷ ನಾಯಕ ಅಶೋಕ್ (R.Ashok) ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಶಾಸಕರಿಗೆ ಕೊಟ್ಟಿರೋ ಅನುದಾನ ಯಾಕೆ ವಾಪಸ್ ಕೊಡಬೇಕು. ಅನುದಾನ ವಾಪಸ್ ಕೊಡೋಕೆ ಅದು ಅವರಪ್ಪನ ಮನೆ ಆಸ್ತಿಯಲ್ಲ. ಕಾಂಗ್ರೆಸ್ (Congress) ಪಾರ್ಟಿ ಅವರಪ್ಪನ ಮನೆಯಿಂದ ಅವರು ಅನುದಾನ ಕೊಡ್ತಿಲ್ಲ. 6.5 ಕೋಟಿ ರೂ. ಕರ್ನಾಟಕ ಜನರ ಅಪ್ಪಂದಿರ ಆಸ್ತಿ ಇದು. ನಾವು ಟ್ಯಾಕ್ಸ್ ಕಟ್ಟುತ್ತಿದ್ದೇವೆ‌. ನಾವು ಯಾಕೆ ವಾಪಸ್ ಕೊಡೋಣ ಎಂದು ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ಸರ್ಕಾರ ಬಸವರಾಜ ಬೊಮ್ಮಾಯಿ ಇದ್ದಾಗ ಎಷ್ಟು ಹಣ ಬಿಡುಗಡೆ ಮಾಡಿದ್ರು ಎಂದು ಕಾಂಗ್ರೆಸ್‌ನವರು ಮೊದಲು ನೋಡಲಿ. ಇದು ಪಾಪರ್ ಸರ್ಕಾರ. ಸರ್ಕಾರ ಕೂಡಲೇ ಆರ್ಥಿಕ ಪರಿಸ್ಥಿತಿ ಬಗ್ಗೆ ಶ್ವೇತ ಪತ್ರ ಹೊರಡಿಸಬೇಕು ಎಂದು ಸವಾಲ್ ಹಾಕಿದ್ದಾರೆ.

ಕಾಂಗ್ರೆಸ್‌ನವರು ಮನೆ ಹಾಳರು, ಅವರೇ ಸಾಲ ಮಾಡಿದ್ದು. ಈಗ ನಮ್ಮ ಮೇಲೆ ಹೇಳ್ತಾರೆ. 60 ವರ್ಷ ಕಾಂಗ್ರೆಸ್ ಆಡಳಿತ ಮಾಡಿತ್ತು. ಆಗ ಸಾಲ ಮಾಡಿರಲಿಲ್ಲವಾ? ಅಂಕಿಅಂಶಗಳನ್ನ ಬಿಡುಗಡೆ ಮಾಡಿ. ಕಾಂಗ್ರೆಸ್ 60 ವರ್ಷಗಳ ಅಂಕಿಅಂಶಗಳನ್ನ ಬಿಡುಗಡೆ ಮಾಡಿ. ನಾವು 9 ವರ್ಷಗಳ ಅಂಕಿಅಂಶಗಳನ್ನ ಬಿಡುಗಡೆ ಮಾಡ್ತೀವಿ ಎಂದಿದ್ದಾರೆ.

ಸಿದ್ದರಾಮಯ್ಯ ಸಾಲ ಮಾಡದೇ ಬಜೆಟ್ ಮಾಡಿದ್ರಾ? ಹೇಳಲಿ. ಬೊಮ್ಮಾಯಿ ಸರ್ ಪ್ಲಸ್ ಬಜೆಟ್ ಮಾಡಿದ್ರು. ಯಾವುದೇ ಬೆಲೆ ಏರಿಕೆ ಮಾಡಿರಲಿಲ್ಲ. ಮನೆ ಹಾಳು ಕಾಂಗ್ರೆಸ್‌ನವರು ಬೆಲೆ ಜಾಸ್ತಿ ಮಾಡಿದ್ದಾರೆ. ಸಿದ್ದರಾಮಯ್ಯ 14 ಬಜೆಟ್ ಮಾಡಿದ್ರು ಸಾಲ ಇಲ್ಲದೆ ಮಾಡಿದ್ರಾ? ತೆರಿಗೆ ಇಲ್ಲದೆ ಮಾಡಿದ್ರಾ? ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Share This Article