2ನೇ ಹೆಂಡ್ತಿ ಬಿಟ್ಟು ತನ್ನ ಬಳಿಯೇ ಇರುವಂತೆ ಒತ್ತಾಯ – ಮೊದಲ ಹೆಂಡ್ತಿಯನ್ನೇ ಹತ್ಯೆಗೈದ ಗಂಡ

Public TV
1 Min Read

ಬೆಳಗಾವಿ: 2ನೇ ಹೆಂಡತಿಯನ್ನು ಬಿಟ್ಟು ತನ್ನ ಬಳಿಯೇ ಇರುವಂತೆ ಪೀಡಿಸುತ್ತಿದ್ದ ಮೊದಲ ಹೆಂಡ್ತಿಯನ್ನ ಪತಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಬೆಳಗಾವಿ (Belagavi) ಜಿಲ್ಲೆ ಸವದತ್ತಿ ತಾಲೂಕಿನ ಇಂಚಲ ಗ್ರಾಮದಲ್ಲಿ ನಡೆದಿದೆ.

ಶಮಾ ರಿಯಾಜ್ ಪಠಾಣ್(25) ಕೊಲೆಯಾದ ಮೊದಲ ಹೆಂಡತಿ, ರಿಯಾಜ್ ಪಠಾಣ್(30) ಕೊಲೆ ಮಾಡಿದ ಪಾಪಿ ಗಂಡ. ಎರಡನೇ ಹೆಂಡತಿ ಫರ್ಜಾನಾ ಪಠಾಣ್ ಮಾತು ಕೇಳಿ, ಶಮಾ ಮಲಗಿದ್ದಾಗ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆಗೈದಿದ್ದಾನೆ. ಇದನ್ನೂ ಓದಿ: ಕೇಂದ್ರ ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌ – 8ನೇ ವೇತನ ಆಯೋಗ ರಚನೆಗೆ ಸಂಪುಟ ಅನುಮೋದನೆ

10 ವರ್ಷಗಳ ಹಿಂದೆ ಶಮಾಳೊಂದಿಗೆ ರಿಯಾಜ್‌ ಮದುವೆಯಾಗಿದ್ದ (Marriage). ಒಂದೂವರೆ ವರ್ಷದ ಹಿಂದೆ ಫರ್ಜಾನಾ ಜೊತೆಗೆ 2ನೇ ಮದುವೆಯಾಗಿದ್ದ. ಮೂರು ದಿನ ಮೊದಲ ಹೆಂಡತಿ, 4 ದಿನ 2ನೇ ಹೆಂಡತಿ ಮನೆಯಲ್ಲಿರುತ್ತಿದ್ದ. ಆದ್ರೆ ಶಮಾ 2ನೇ ಹೆಂಡತಿಯನ್ನು (Wife) ಬಿಟ್ಟು ತನ್ನ ಬಳಿಯೇ ಇರುವಂತೆ ಪದೇ ಪದೇ ಪೀಡಿಸುತ್ತಿದ್ದಳು. ಇದಕ್ಕೆ ಗಂಡ ಒಪ್ಪದೇ ಇದ್ದಿದ್ದಕ್ಕೆ ಶಮಾ ಮೇಂಟೆನೆನ್ಸ್‌ ಕೇಸ್‌ ಹಾಕುವುದಕ್ಕೆ ಪ್ಲ್ಯಾನ್‌ ಮಾಡಿಕೊಂಡಿದ್ದಳು ಎನ್ನಲಾಗಿದೆ. ಇದನ್ನೂ ಓದಿ: ತಿರುಪತಿ ಕಾಲ್ತುಳಿತ ದುರಂತ ಮಾಸುವ ಮುನ್ನವೇ ಮತ್ತೊಂದು ಅವಘಡ – ಮಹಡಿಯಿಂದ ಬಿದ್ದು ಬಾಲಕ ಸಾವು

ಶಮಾ ತನ್ನ ವಿರುದ್ಧ ಕೇಸ್‌ ಹಾಕೋದಕ್ಕೆ ಪ್ಲ್ಯಾನ್‌ ಮಾಡಿದ್ದ ವಿಚಾರ ತಿಳಿದ ರಿಯಾಜ್‌ 2ನೇ ಹೆಂಡತಿಗೂ ಹೇಳಿದ್ದಾನೆ. ಬಳಿಕ ಫರ್ಜಾನಾ ಮಾತು ಕೇಳಿ ಶಮಾಳನ್ನ ಕೊಂದೇಬಿಟ್ಟಿದ್ದಾನೆ. ಕೊಲೆ ಮಾಡಿದ ಬಳಿಕ ಮೊದಲ ಹೆಂಡತಿ ಮಗ ಹಾಗೂ 2ನೇ ಹೆಂಡತಿಯನ್ನ ಕರೆದುಕೊಂಡು ಪರಾರಿಯಾಗಿದ್ದಾನೆ. ಈ ಸಂಬಂಧ ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: Saif Ali Khan Stabbed| ಮನೆಯ ಕೆಲಸದಾಕೆಯ ಜೊತೆ ದಾಳಿಕೋರನಿಗೆ ಇತ್ತಾ ಸಂಬಂಧ? 

Share This Article