ಬಾಬಾ ಸಿದ್ದಿಕಿ ಹತ್ಯೆ ಕೇಸ್‌ – 4,590 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ ಮುಂಬೈ ಪೊಲೀಸ್

Public TV
1 Min Read

ಮುಂಬೈ: ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ (Baba Siddique) ಹತ್ಯೆ ಪ್ರಕರಣದ ಸಂಬಂಧ ಮುಂಬೈ ಪೊಲೀಸರ ತನಿಖಾ ತಂಡ ವಿಶೇಷ ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (MCOCA) ನ್ಯಾಯಾಲಯಕ್ಕೆ ಸೋಮವಾರ 4,590 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದೆ.

ತನಿಖೆ ಪೂರ್ಣಗೊಳಿಸಿದ ಮುಂಬೈ ಪೊಲೀಸರ ತಂಡ ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯ್‌, ಆತನ ಸಹೋದರ ಅನ್ಮೋಲ್‌ ಬಿಷ್ಣೋಯ್‌ ಸೇರಿದಂತೆ ಒಟ್ಟು 26 ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಿದೆ. ಇದನ್ನೂ ಓದಿ: ಮಕ್ಕಳಲ್ಲೇ ಪತ್ತೆಯಾದ ವೈರಸ್ – ಹೆಚ್‌ಎಂಪಿವಿ ಹಾನಿಕಾರಕವಲ್ಲ, ಭಯ ಪಡದಿರಿ… ನಿರ್ಲಕ್ಷ್ಯವೂ ಮಾಡದಿರಿ.!

ಶುಭಂ ಲೋಂಕರ್, ಯಾಸಿನ್ ಸಿದ್ದಿಕ್ ಮತ್ತು ಅನ್ಮೋಲ್ ಬಿಷ್ಣೋಯ್ ಪ್ರಕರಣದ ಮಾಸ್ಟರ್‌ ಮೈಂಡ್‌ಗಳೆಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ಜೊತೆಗೆ ಮುಂಬೈನಲ್ಲಿ ತಮ್ಮ ಪ್ರಾಬಲ್ಯ ಸ್ಥಾಪಿಸಲು ಬಿಷ್ಣೋಯ್ ಗ್ಯಾಂಗ್ ಹತ್ಯೆಗೆ ಸಂಚು ರೂಪಿಸಿತ್ತು ಎಂದು ಹೇಳಲಾಗಿದೆ. ಇದನ್ನೂ ಓದಿ: ಚಿಕ್ಕಮಗಳೂರು | ಎಸ್ಟೇಟ್ ಮ್ಯಾನೇಜರ್ ಮೇಲೆ ಅಕ್ರಮ ಬಾಂಗ್ಲಾ ವಲಸಿಗರಿಂದ ಕಲ್ಲು ತೂರಾಟ

2024ರ ಅಕ್ಟೋಬರ್‌ 12 ರಂದು, ಮುಂಬೈನ ಬಾಂದ್ರಾದಲ್ಲಿರುವ ಪುತ್ರ ಶಾಸಕ ಜೀಶನ್ ಸಿದ್ದಿಕಿ ಅವರ ಕಚೇರಿಯ ಹೊರಗೆ ಬಾಬಾ ಸಿದ್ದಿಕಿ ಅವರನ್ನು ಗುಂಡಿಕ್ಕಿ ಹತ್ಯೆಗೈಯ್ಯಲಾಗಿತ್ತು. ಸಿದ್ದಿಕಿ ಹತ್ಯೆಗೆ 9.9 ಎಂಎಂ ಪಿಸ್ತೂಲ್‌ ಬಳಸಲಾಗಿತ್ತು, ಒಟ್ಟು 6 ಸುತ್ತುಗಳಲ್ಲಿ ಗುಂಡು ಹಾರಿಸಲಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಯುಪಿ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದರು. ಬಳಿಕ ಪ್ರಕರಣದ ತನಿಖೆನ್ನು ಮುಂಬೈ ಪೊಲೀಸರು ಕೈಗೆತ್ತಿಕೊಂಡಿದ್ದರು

ವಿಚಾರಣೆ ವೇಳೆ ಆರೋಪಿ ಶಿವಕುಮಾರ್‌, ಲಾರೆನ್ಸ್‌ ಬಿಷ್ಣೋಯ್‌ ಗ್ಯಾಂಗ್‌ ಜೊತೆ ಸಂಬಂಧ ಇದೆ. ಲಾರೆನ್ಸ್ ಬಿಷ್ಣೋಯ್‌ನ ಸಹೋದರ ಅನ್ಮೋಲ್ ಬಿಷ್ಣೋಯ್‌ನ ಸೂಚನೆಯ ಮೇರೆಗೆ ಕೊಲೆ ಮಾಡಲಾಗಿದೆ. ಲಾರೆನ್ಸ್‌ನ ಆಪ್ತ ಸಹಾಯಕನಾಗಿದ್ದ ಶುಭಂ ಲೋಂಕರ್ ಎಂಬುವವನು ಅನ್ಮೋಲ್ ಬಿಷ್ಣೋಯ್ ಜೊತೆಗೆ ಸಂಪರ್ಕ ಸಾಧಿಸಲು ಸಕರಿಸಿದ್ದ ಎಂಬುದಾಗಿಯೂ ಒಪ್ಪಿಕೊಂಡಿದ್ದನು.

Share This Article