ನಕಲಿ ದಾಖಲೆ ಸೃಷ್ಟಿಸಿ ಆರೋಪಿಗಳಿಗೆ ಶ್ಯೂರಿಟಿದಾರನಾಗಿ ನಿಂತು ವಂಚನೆ – ಆರೋಪಿ ಬಂಧನ

Public TV
0 Min Read

ಮಂಗಳೂರು: ನಕಲಿ ಆಧಾರ್ ಕಾರ್ಡ್, ಸೇರಿ ಹಲವು ದಾಖಲೆ ಸೃಷ್ಟಿಸುತ್ತಿದ್ದ ಆರೋಪಿಯನ್ನು ಮಂಗಳೂರು (Mangaluru) ಪೊಲೀಸರು ಬಂಧಿಸಿದ್ದಾರೆ.

ನ್ಯಾಯಾಲಯದ ವಿಚಾರಣೆಗೆ ಆರೋಪಿಗಳಿಗೆ ನಕಲಿ ದಾಖಲೆ ಮೂಲಕ ಆರೋಪಿ ಶ್ಯೂರಿಟಿ ನೀಡುತ್ತಿದ್ದ. ನಕಲಿ ದಾಖಲೆ ಸೃಷ್ಟಿಸುತ್ತಿದ್ದ ಕಾಪು ತಾಲೂಕಿನ ಚಂದ್ರನಗರ ನಿವಾಸಿ ಆರೋಪಿ ಉಮರಬ್ಬ ಮೊಯಿದ್ದೀನ್ ಬಂಧನವಾಗಿದೆ.

ಮಂಗಳೂರು ಉತ್ತರ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ನಕಲಿ ದಾಖಲೆ ಸೃಷ್ಟಿಸಿ ಆರೋಪಿಗಳಿಗೆ ಶ್ಯೂರಿಟಿದಾರನಾಗಿ ನಿಂತು ವಂಚನೆ ಮಾಡುತ್ತಿದ್ದ. ಶ್ಯೂರಿಟಿಗಾಗಿ ಹಣ ಪೀಕುತ್ತಿದ್ದ.

ಈ ಸಂಬಂಧ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article