UI ಸಕ್ಸಸ್ ಬೆನ್ನಲ್ಲೇ ಉಪೇಂದ್ರ ಟೆಂಪಲ್ ರನ್

Public TV
1 Min Read

ರಿಯಲ್ ಸ್ಟಾರ್ ಉಪೇಂದ್ರ (Upendra) ನಟಸಿ, ನಿರ್ದೇಶನ ಮಾಡಿರುವ UI ಸಿನಿಮಾ ಯಶಸ್ಸು ಕಂಡಿದೆ. ಈ ಸಕ್ಸಸ್ ಬೆನ್ನಲ್ಲೇ ಸಾಲಿಗ್ರಾಮದ ಶ್ರೀ ಗುರು ನರಸಿಂಹ ದೇವಸ್ಥಾನಕ್ಕೆ ತಂಡದ ಜೊತೆ ಉಪೇಂದ್ರ ಭೇಟಿ ನೀಡಿದ್ದಾರೆ. ಇದನ್ನೂ ಓದಿ:ಕ್ಯಾಪ್ಟೆನ್ಸಿಗಾಗಿ ಮೋಸದಾಟ ಆಡಿದ ಭವ್ಯಾಗೆ ಸುದೀಪ್‌ ವಾರ್ನಿಂಗ್‌

ಉಡುಪಿ ಜಿಲ್ಲೆಯ ಸಾಲಿಗ್ರಾಮದ ಶ್ರೀ ಗುರು ನರಸಿಂಹ ದೇವಸ್ಥಾನಕ್ಕೆ UI ಟೀಮ್ ಭೇಟಿ ಕೊಟ್ಟಿದೆ. ಉಪೇಂದ್ರ, ಲಹರಿ ವೇಲು ಸೇರಿದಂತೆ ಅನೇಕರು ಪೂಜೆಯಲ್ಲಿ ಭಾಗಿಯಾಗಿದ್ದಾರೆ. ಬಳಿಕ ಸೆಲ್ಫಿಗಾಗಿ ಮುಗಿಬಿದ್ದ ಫ್ಯಾನ್ಸ್‌ಗೆ ಫೋಟೋಗೆ ನಟ ಪೋಸ್ ನೀಡಿದ್ದಾರೆ.

ಇನ್ನೂ ‘ಯುಐ’ ಸಿನಿಮಾ ಡಿ.20ರಂದು ಬಹುಭಾಷೆಗಳಲ್ಲಿ ರಿಲೀಸ್ ಆಗಿತ್ತು. ಉಪೇಂದ್ರಗೆ ನಾಯಕಿಯಾಗಿ ಕೊಡಗಿನ ಬೆಡಗಿ ರೀಷ್ಮಾ ನಾಣಯ್ಯ ನಟಿಸಿದ್ದಾರೆ. ರಿಯಲ್ ಸ್ಟಾರ್ ನಟನೆ ಮತ್ತು ನಿರ್ದೇಶನಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.

Share This Article